ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೨ ಕರ್ನಾಟಕದ ಕಲಾವಿದರು ೫, ಶಿಶು ಕಥೆ : ಡೆನ್ಮಾರ್ಕಿನ ಪ್ರಸಿದ್ಧ ಜಾನಪದ ಕತೆಗಾರನಾದ ಹ್ಯಾನ್ಸ್ ಆಂಡರ್‌ಸನ್ನನ ಒಂದು ಶಿಶುಕಥೆಯನ್ನವಲಂಬಿಸಿದೆ. ಒಬ್ಬ ವಯೋವೃದ್ದ ಕಥೆ ನಿರೂಪಿಸುತ್ತಾನೆ. ತಾಯಿಯ ಮಾತು ಮಾರಿ ಇಬ್ಬರು ಮಕ್ಕಳು ಚಂದ, ಚಾರು ಅರಣ್ಯಕ್ಕೆ ಹೋಗುತ್ತಾರೆ. ಕತ್ತಲಾಗುತ್ತದೆ. ಮಕ್ಕಳಿಗೆ ದಾರಿ ತಪ್ಪುತ್ತದೆ. ಒಬ್ಬ ರಾಕ್ಷಸಿ ಮುದುಕಿಯ ವೇಷ ಧರಿಸಿ ಬಂದು ಅವರನ್ನು ತನ್ನ ಮನೆಗೆ ಕರೆದೊಯ್ಯುತ್ತಾಳೆ. ಅಲ್ಲಿ ಹೀಗೆ ಸೆರೆ ಸಿಕ್ಕಿರುವ ನೂರಾರು ಮಕ್ಕಳು. ರಾಕ್ಷಸಿ ಮಕ್ಕಳಲ್ಲಿ ಕೆಲವರನ್ನು ಸ್ವಾಹಾ ಮಾಡಬೇಕೆಂದಿರುವುದನ್ನು ಚಂದ ಚಾರು ಕಂಡುಕೊಳ್ಳುತ್ತಾರೆ. ಮರಳುವ ಎಣ್ಣೆಯ ಕೊಡದಲ್ಲಿ ಉರುಳಿಸುವಂತೆ ಮಕ್ಕಳನ್ನು ಹೆದರಿಸುತ್ತಾಳೆ. ಚಂದ, ಚಾರುವಿಗೆ ತನ್ನ ಉದ್ದೇಶ ತಿಳಿಸುತ್ತಾಳೆ. ಆಗವರು ಎಣ್ಣೆಯಕೊಡ ಉರುಳಿಸುತ್ತಾರೆ. ರಾಕ್ಷಸಿಗೆ ತಕ್ಕ ಶಿಕ್ಷೆಯಾಗುತ್ತದೆ. ಸೆರೆಸಿಕ್ಕಿದ ಮಕ್ಕಳು ಬಿಡುಗಡೆ ಹೊಂದಿದ ಸಂತೋಷದಲ್ಲಿ ಕುಣಿಯುತ್ತಾರೆ. ವನದೇವತೆ ಚಂದ, ಚಾರುವಿಗೆ ಬುದ್ದಿ ಹೇಳಿ ಮನೆಗೆ ಹೋಗುವ ದಾರಿ ತೋರಿಸುತ್ತಾಳೆ. ಅವರು ಸಂತೋಷದಿಂದ ಮನೆ ಸೇರಿ ವಿಧೇಯರಾಗಿರುತ್ತಾರೆ. ೬. ಅನ್ನ೦ ಬಹುಕುರ್ವಿತ : (೧೯೪೯) (ಹೆಚ್ಚು ಆಹಾರ ಬೆಳೆ ಯಿರಿ) ರೈತರು ಕಷ್ಟ ಪಟ್ಟು ಉತ್ತು, ಬಿತ್ತು, ಬೆಳೆದಿದ್ದಾರೆ. ಮಳೆಯೂ ಕಾಲಕ್ಕೆ ತಕ್ಕಂತೆ ಅನುಕೂಲವಾಗಿ ಒದಗಿಬಂದು ಸೊಗಸಾದ ಸುಗ್ಗಿ ಯಾಗಿದೆ. ರೈತರು ಸಂತೋಷದಿಂದ ಕುಣಿಯುತ್ತಿದ್ದಾರೆ. ಇಡಿಯ ಹಳ್ಳಿ ಒಂದು ಸಂಸಾರ ಇದ್ದ ಹಾಗೆ ಇದೆ. ನಿಸರ್ಗದತ್ತವಾದ ಈ ಶಾಂತಿಯನ್ನು ಭೇದಿಸಿ ಕೈಗಾರಿಕೆ ಕಾಲಿಟ್ಟಿದೆ. ಅದರ ಹಿಂದೆ ಹಣ, ಹಣದ ಬೆನ್ನಲ್ಲಿಯೇ ವಿಲೋಭನೆ. ಸಂಸಾರದ ಒಕ್ಕೂಟ ಒಡೆದುಹೋಗುತ್ತದೆ. ಹಣದ ಮೋಹಕ್ಕೆ ಬಲಿಯಾದ ರೈತರು ನೆಲನೋಡಿ ನಗುತ್ತಾರೆ. ಮಿತವರಿಯದ ದುಡಿಮೆ ಮಾಡಿದುದಕ್ಕೆ ಪಶ್ಚಾತ್ತಾಪಪಡುತ್ತಾರೆ. ಹಳ್ಳಿಯ ಹಿರಿಯ ಕೊಡುವ ಎಚ್ಚರಿಕೆಯನ್ನು ನಿರಾಕರಿಸಿ ಅವರು ನೆಲ ಬಿಟ್ಟು ಹೋಗುತ್ತಾರೆ. ಉಳಿದವರು ಸಾಲಗಾರರಾ ಗುತ್ತಾರೆ. ಹಳ್ಳಿಯ ಹಿರಿಯ ಏಕಾಂಗಿಯಾಗಿ ಹೋರಾಡಿ ವಿಫಲವಾಗುತ್ತಾನೆ. ಹಣದ ಉಬ್ಬರ, ಕಾಳಸಂತೆ ಮೊದಲಾದ ಪಿಡುಗುಗಳು ರೈತರನ್ನು ಕಾಡುತ್ತವೆ.