ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಯಾದೇವಿ ೧೫೩ ಆಹಾರ ಬೆಳೆಯುವುದರ ಬದಲು ಹಣತರುವ ಸಾಮಗ್ರಿಗಳನ್ನೂ ಬೆಳೆಯಲಾ ರಂಭಿಸುತ್ತಾರೆ. ಆಹಾರದ ಅಭಾವ ಅಧಿಕವಾಗುತ್ತದೆ. ಸಾಕಷ್ಟು ಉಣ ಲಿಲ್ಲದೆ ರೈತರು ದುರ್ಬಲರಾಗುತ್ತಾರೆ. ನಿರುದ್ಯೋಗ, ಸಂಪಾದನೆ ಎಳ್ಳಷ್ಟೂ ಇಲ್ಲ. ಮಾರುವುದಕ್ಕೂ ಏನೂ ಇಲ್ಲ. ದೇಶದಲ್ಲಿ ಕ್ಷಾಮ ವ್ಯಾಪಿಸುತ್ತದೆ. “ ಏವಂ ಪ್ರವರ್ತಿತಂ ಚಕ್ರಂ ನಾನುವರ್ತ ಯತೀಹ ಯಃ ಅಘಾಯುರಿದ್ರಿ ಯಾರಾಮೋ ಮೋಘಲ ಪಾರ್ಥ ಸ ಜೀನತಿ” [ಈ ಬಗೆಯಾಗಿ ಪ್ರವರ್ತಿತವಾದ ಚಕ್ರಾನುಸಾರವಾಗಿ ಯಾವ ಮನುಷ್ಯನು (ಕರ್ಮವನ್ನು) ಆಚರಿಸುವುದಿಲ್ಲವೋ ಅವನ ಜೀವನವು ಪಾಪಮಯವಾಗುವುದು. ಅವನು ಇಂದ್ರಿಯ ಸುಖದಲ್ಲಿ ಮಗ್ನನಾಗಿರುವನು. ಆದುದರಿಂದ, ಪ್ರಾರ್ಥನೆ ! ಅಂತಹನ ಜೀವನವು ವ್ಯರ್ಥವಾಗುವುದು] - - - ಭಗವದ್ಗೀತೆ ೩-೧೬. ಗೀತೆಯ ಸಿಂಹವಾಣಿ ಅ ವ ರ ನೈ ಚ 5 ಸಿ ಕರ್ತವ್ಯದಕ್ಷರನ್ನಾಗಿ ಮಾಡುತ್ತದೆ. - ರಸ ಬಿಟ್ಟು ಕಸಕ್ಕೆ ಕೈ ಹಾಕಿದೆನೆಲ್ಲಾ ಅನ್ನದಾತೆಯನ್ನು ಮರೆತು ಮೃಗಜಲದ ಬೆನ್ನು ಹತ್ತಿದೆವಲ್ಲಾ ಎಂದವರು ದುಃಖಪಡುತ್ತಾರೆ. ಪ್ರಕೃತಿ ಎದಿರೇಟು ಹೊಡೆಯುತ್ತದೆ. ಮಳೆಯಾಗುವುದಿಲ್ಲ. ಕ್ಷಾಮ ಡಾಮರ, ರೋಗರುಜಿನ ವ್ಯಾಪಿಸುತ್ತದೆ. ಕೈಗಾರಿಕೆಯ ಭೂತಗಳು, ಕಾಳಸಂತೆಯ ರಾಕ್ಷಸರು ಹಿಗ್ಗುತ್ತಾರೆ. ಕಿರಿಯ ರೈತರು ಹಳ್ಳಿಯ ಹಿರಿಯನ ಮರೆಹೊಗು ತ್ತಾರೆ. ದೇಹದುರ್ಬಲತೆಯನ್ನು, ಜೀರ್ಣಕಾಯವನ್ನು ಲೆಕ್ಕಿಸದೆ ಅವನು ತನ್ನ ಕಾಯಕ ನಡೆಸಿದ್ದಾನೆ. ಅವನ ಒಂದು ತುಣುಕು ನೆಲವನ್ನೂ ನುಂಗಲು ಹಣವಂತರು ಹವಣಿಸುತ್ತಾರೆ. ಕಿರಿಯ ರೈತರು ಒಂದುಗೂಡಿ ರೈತ ಸಂಘ ಕಟ್ಟುತ್ತಾರೆ. ಮಾನವ ಯಂತ್ರವನ್ನು ಅಧೀನ ಮಾಡಿಕೊಂಡು ಅದರ ಒಡೆಯನಾಗಿರಬೇಕೇ ವಿನಾ ದಾಸನಾಗಿರಬಾರದೆಂದು ಅವರು ಅನುಭವದಿಂದ ತಿಳಿದಿರುತ್ತಾರೆ. ಆಧುನಿಕ ಯಂತ್ರೋಪಕರಣಗಳನ್ನು ಪ್ರಯೋಗಿಸಿಕೊಂಡು ಕೃಷಿ ಆರಂಭಿಸುತ್ತಾರೆ. ಅನ್ನ ಸಮೃದ್ಧಿಯಾಗಿ ಬೆಳೆಯುತ್ತದೆ. ಅವರೆಲ್ಲರ ದಾಸ್ಯ ನಿವೃತ್ತಿಯಾಗುತ್ತದೆ. ರೈತರು ಮತ್ತೆ ಒಟ್ಟುಗೂಡಿ ಹಿಗ್ಗಿ ನಿಂದ ಹಾಡುತ್ತಾರೆ :

  • ಅನಾಸಕ್ತಿ ಯೋಗ : ಅನುವಾದಕರು ದ. ಕ ಭಾರದ್ವಾಜರು (ಪುಟ ೪೩)