ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಯಾದೇವಿ ೧೫೫ ಸಹಕಾರವಿತ್ಯ ಶ್ರೀ ಎಂ. ಎಸ್. ನಟರಾಜನ್ - ಅವರ ಕಲ್ಪನಾಶಕ್ತಿಗೂ, ಕಲಾನೈ ಪುಣ್ಯ ಕ್ಕೂ ಬೆರಗಾಗಿ ಹೆಚ್ಚಿನ ಸರಕಾರನೀಡಲು ಮುಂದೆಬಂದರು. ಮಾಯಾದೇವಿ ಮತ್ತು ನಟರಾಜನ್ ಇವರಿಬ್ಬರ ಪ್ರ ಯ ತ್ನ ದಿ೦ದ ( ನಾಟ್ಯ ಸರಸ್ವತಿ ) ಎಂಬ ಲಲಿತಕಲಾಸಂನ ಯು ನಾ ಪನೆಯಾಯಿತು. ಮಾಯಾದೇವಿಗೆ ಸಹಕಾರ ನೀಡಲು ಮಾಲ.? ಪಟಂಕರ್, ಲೀಲಾ ಶ್ರೀನಾಥ್, ಎಂ. ಎಸ್. ಸೀತಾದೇವಿ, ಡಾ. ಲಲಿತಾ ಲೋಗನಾಥನ್, ಮೇನಕಾ ಲೋಗನಾಥನ, ಕೋಮಲಾ ಲೋಗನಾಥನ್ ವೃಂದ ನಿರೋಡಿ, ಉಮಾ ರಾವ್, ಚಿತ್ರಾ ರಾವ್, ಸುಂದರ, ಪ್ರಮಾ ಮೊದಲಾದ ಕುಲೀನ ಹೆಣ್ಣು ಮಕ್ಕಳು ಮುಂದುವರಿದರು. ನಟರಾಜನ್ ಸಂಗೀತ ಪ್ರಪಂಚದಲ್ಲಿ ಖ್ಯಾತಿಗಳಿಸಿದ್ದ ಎ. ಸುಬ್ಬರಾವ್, ಆನೂರ್ ಸೂರ್ಯನಾರಾಯಣ ( ಬಾಯಿ ಹಾಡುಗಾರಿಕೆ), ಬಾಗಲೂರು ಕೃಷ್ಣ ರ್ದ ರಾವ್, ಎಂ. ಪಿ. ರಾಮು, ವಿಶ್ವನಾಥ ( ಪಿಟೀಲು), ದೊರೆಸ್ವಾಮಿ, ರಾಮಸ್ವಾಮಿ (ವೇಣು), ವೀರಭದ್ರಪ್ಪ, ಡಾ. ಸದುಬರಂ (ಮೃದಂಗ), ಎಚ್.ಎಸ್. ಶಿವರಾಂ (ತಬಲ), • ಭಾರತೀಯ ಸಂಗೀತಕ್ಕೆ ವಾದ್ಯಮೇಳ (Orchestra) ತೀರ ಹೊಸದು ವಾದ್ಯಮೇಳ ಕೂಡಿಸುವ ಪ್ರಥಮ ಪ್ರಯತ್ನ ಉತ್ತರ ಭಾರತದಲ್ಲಿ ಶಾಂತಿನಿಕೇತನ ಸಂಗೀತಶಾಲೆಯಲ್ಲಿ ಗುರುದೇವ ರವೀಂದ್ರರಿಂದ ಮೊಟ್ಟ ಮೊದಲಿಗೆ ಆಯಿತು, ಅವರ ಮೇಲ್ಪಂಕ್ತಿಯನ್ನನುಸರಿಸಿ ಈಸ್ಟ್ ಇಂಡಿಯಾ, ನ್ಯೂ ಥಿಯೇಟಗ್ಸ್ ಕಂಪನಿಯವರು ವಾದ್ಯಮೇಳಗಳನ್ನು ಕೂಡಿಸಿದರು. ತಿಮಿರಬರಣೆ ಮತ್ತು ಪಂಕಜಮಲ್ಲಿಕ್ ಸ್ವತಂತ್ರ ವಾಗಿ ವಾದ್ಯಮೇಳಗಳನ್ನು ನಿಯೋಜಿಸಿದರು. ಮುಂಬಯಿ ಪ್ರಾಂತ್ಯದಲ್ಲಿ ಪ್ರಭಾತ್ ಫಿಲ್ಸ್ ಕಂಪನಿಯ ಸಂಗೀತ ದಿಗ್ದರ್ಶಕರಾಗಿದ್ದ ಮಾಸ್ಟರ್ ಕೃಷ್ಣರಾವ್ ಮರಾಠಿ ಜನಪದ ಸಂಗೀತದ ಆಧಾರದ ಮೇಲೆ ವಾದ್ಯಮೇಳ ಕೂಡಿಸಿದರು. ಪ್ರೊ. ದೇವಧರ್ ಸ್ವತಂತ್ರವಾಗಿ ಈ ಪ್ರಯತ್ನ ನಡೆಸಿದರು. ಮೈಸೂರಿನಲ್ಲಿ ಈ ಪ್ರಯತ್ನ ವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದವರು ಆಳಿದ ಮಹಾಸ್ಯ ಎಯವರಾದ ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರವರು, ಬಾಯಿಹಾಡುಗಾರಿಕೆಯಿಂದ ಕೂಡಿದ ವಾದ್ಯಮೇಳ, ಬಾಯಿಹಾಡುಗಾರಿಕೆಯಿಲ್ಲದ (ಬ್ಯಾಂಡ್ ಬಗೆಯ) ವಾದ್ಯಮೇಳವನ್ನು ಕರ್ನಾಟಕ, ಹಿಂದೂಸ್ಥಾನಿ ಎರಡು ಪದ್ಧತಿಗಳಲ್ಲಿಯೂ ಅರಮನೆಯ ವಿದ್ವಾಂಸರಿಂದ ಕೂಡಿಸಿ ಇಡಿಯ ದಕ್ಷಿಣ ಹಿಂದೂಸ್ಥಾನದ ಸಂಗೀತದ ಮೇಲೆ ಶ್ರೀಮನ್ಮಹಾರಾಜರವರು ವಿಶೇಷ ಪ್ರಭಾವಮೂಡಿದರು. ಅರಮನೆಯ ಸಂಗೀತ ವಿದ್ವಾಂಸರಾಗಿದ್ದ ಗಾನವಿಶಾರದ