ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೬ ಕರ್ನಾಟಕದ ಕಲಾವಿದರು ಲಿಂಗಪ್ಪ (ಕ್ಲಾರಿಯೋನೆಟ್ ), ವೆಂಕಟಾಚಲಂ ಅಯ್ಯಂಗಾರ್ (ವೀಣೆ). ಗುಂಡಪ್ಪ (ಹಾಮ್ಮೋನಿಯಂ), ರಹೀಮ್ (ಸಿತಾರ್), ಗೋಪಾಲ್ (ಜಲತರಂಗ), ನಾಗರಾಜಶಾಸ್ತ್ರಿ (ದಿಲ್‌ರುಬಾ), ವರಾಹಸ್ವಾಮಿ (ಗಿಟಾರ್), ನಾರಣಪ್ಪ (ಮುಖವೀಣೆ), ನಾಗೇಂದ್ರಪ್ಪ (ಸೆಲ್ಲೋ), ನಾಗಮುತ್ತು (ಪಿಯಾನೊ) ಮೊದಲಾದವರ ಸಹಕಾರ ದೊರಕಿಸಿದರು. ಎಚ್. ಎಸ್. ರಮೇಶ್ ಕಲಾ ದಿಗ್ದರ್ಶಕರಾಗಿ, ಲಕ್ಷ್ಮಿನಾರಾಯಣ ತಂತ್ರನಿಯೋಜಕರಾಗಿ, ರಾಮಮೂರ್ತಿ ಶಬ್ದ ನಿಯೋಜಕರಾಗಿ ನಾಟ್ಯ ಸರಸ್ವತಿ' ಸಂಸ್ಥೆಗೆ ಸಹಕಾರ ನೀಡುತ್ತಾ ಬಂದಿದ್ದಾರೆ. “ನಾಟ್ಯ ಸರಸ್ವತಿ' ಸಾರ್ವಜನಿಕ ಪ್ರದರ್ಶನಗಳನ್ನು ಕೊಡುತ್ತಿರುವು ದಲ್ಲದೆ ನಾಟ್ಯ, ಸಂಗೀತದ ಒಂದು ಶಾಲೆಯನ್ನು ನಡೆಸುತ್ತಿದೆ. ಈಗ ಶಾಲೆಯಲ್ಲಿ ೩೫ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದಾರೆ. ಸಣ್ಣ ಮಕ್ಕಳಿಗೆ ಕಲಾ ಶಿಕ್ಷಣ ಕೊಡುವ ವಿಷಯದಲ್ಲಿ ಮಾಂಟೆಸೊರಿ ಶಿಕ್ಷಣವಿಧಾನದಲ್ಲಿ ನುರಿತಿರುವ ಮಾಯಾದೇವಿ ಸ್ತುತ್ಯ ಪ್ರಯತ್ನ ನಡೆಸಿದ್ದಾರೆ. ಚಿಕ್ಕ ಮಕ್ಕಳನ್ನು ತಾಳ, ಮುದ್ರೆ, ಅಂಗನ್ಯಾಸಗಳ ಗೊಂಡಾರಣ್ಯಕ್ಕೆ ಕರೆದೊಯ್ಯದೆ ಅವರೇ ಸ್ವತಂತ್ರವಾಗಿ ಭಾವಪೂರ್ಣವಾದ ನೃತ್ಯಗಳನ್ನಳವಡಿಸಲು ಪ್ರೇರೇಪಿಸುತ್ತಾರೆ. ನಿರ್ದೇಶಕರು - - --- - ಬಿ. ದೇವೇಂದ್ರಪ್ಪನವರು ಸ್ವತಂತ್ರವಾಗಿ ಒಂದು ವಾದ್ಯ ಮೇಳ ನಿಯೋಜಿಸಿದರು, ( ಆಕಾಶವಾಣಿ' ಬಾನುಲಿ ಕೇಂದ್ರ ಮೈಸೂರಿನಲ್ಲಿ ಆರಂಭವಾದ ಕಾಲಕ್ಕೆ ಅವರಿಗೆ ವಾದ್ಯಮೇಳ ಸಹಾಯ ಒದಗಿಸುತ್ತಿದ್ದವರು ದೇವೇಂದ್ರಪ್ಪನವರ ವಾದ್ಯಮೇಳದಲ್ಲಿ ನುರಿತಿದ್ದ ವಿದ್ವಾಂಸರು, ಬೆಂಗಳೂರಿನಲ್ಲಿ ಶ್ರೀ ಎಂ. ಎಸ್. ನಟರಾಜನ ೧೯೩೬ರಲ್ಲಿ ತಮ್ಮ ವಾದ್ಯಮೇಳ - ಸರಸ್ವತಿ ಆರ್ ಕೆಸ್ನಾ (Saraswathi Orchestra) ಆರಂಭಿಸಿದರು. ಹನ್ನೊಂದುಜನ ಕಲಾವಿದರನ್ನೊಳಗೊಂಡ ವಾದ್ಯ ಮೇಳದೊಂದಿಗೆ ೧೯೩೬ರಿಂದ ೧೯೪೫ರವರೆಗೆ ರಾಮಗೋಪಾಲರೊಂದಿಗೆ ಅಖಿಲ ಭಾರತ ಪ್ರವಾಸಿ ಮಾಡಿಬಂದರು. ಬಾಯಿಹಾಡುಗಾರಿಕೆಯಲ್ಲಿ ಹಾಗೂ ವಾದ್ಯವಾದನದಲ್ಲಿ ನಿಷ್ಣಾತರಾದ ಪ್ರಥಮಶ್ರೇಣಿ ಕಲಾವಿದರನ್ನು ತಮ್ಮ ಆರ್‌ ಕಾಗೆ ತಂದ ಕೀರ್ತಿ ನಟರಾಜನ್ ಅವರಿಗೆ ಸೇರತಕ್ಕದ್ದು. ಸ್ವಯಂ ನಟರಾಜನ್ ಹಲವು ವಾದ್ಯಗಳನ್ನು ನುಡಿ ಸುತ್ತಾರೆ. ಪ್ರಸಾರದಲ್ಲಿಲ್ಲದಿರುವ ಭಾರತದ ಕೆಲವು ಗತವಾದ್ಯಗಳನ್ನು ನಟರಾಜನ್ ಜೀರ್ಣೋದ್ಧಾರ ಮಾಡಿದ್ದಾರೆ,