ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಯಾದೇವಿ ೧೫೭ ಕೊಡುವ ಕಥೆಗಳನ್ನು ಮಕ್ಕಳೇ ನೃತ್ಯದಲ್ಲಿ ನಿರೂಪಿಸುತ್ತಾರೆ. ಕೆಲವು ಸಲ ಮಕ್ಕಳೇ ಕಥೆಗಳನ್ನು ಸೃಷ್ಟಿಸಿಕೊಂಡು ಪ್ರದರ್ಶಿಸುತ್ತಾರೆ.

  • ನೃತ್ಯ ಕಲೆ ಕೇವಲ ವಿಹಾರಸಾಧನವಾಗದೆ ವಿಕಾಸಸಾಧನವಾಗಬೇಕು ಎಂದು ಮಾಯಾದೇವಿಯರ ಉತ್ಕಟಾಕಾಂಕ್ಷೆ, ಚಿಕ್ಕ ಮಕ್ಕಳಲ್ಲಿ ಹುದುಗಿರುವ ಕಲಾಚೇತನವನ್ನು ಜಾಗೃತಗೊಳಿಸಿ, ಅದನ್ನವರು ಜೀವನದ ಸಾಮರಸ್ಯಕ್ಕೆ ಉಪಯೋಗಿಸಿಕೊಳ್ಳಬಹುದಾದ ಬಗೆಯನ್ನು ತಿಳಿಯಹೇಳುತ್ತಿದ್ದಾರೆ. ಉದಾತ್ತ ಧ್ಯೆಯಕ್ಕನುಗುಣವಾಗಿ ತ್ಯಾಗವೂ, ಪ್ರ ಯ ತ ತಿಲ ತೆ ಯೂ ಮಾಯಾದೇವಿಯವರ ಉದ್ಯಮದಲ್ಲಿದೆ.

ಹೆಣ್ಣು ಮಕ್ಕಳ ನೃತ್ಯಗಳಲ್ಲಿ ಪ್ರೇಕ್ಷಕರು ಸಾಮಾನ್ಯವಾಗಿ ದೇಹ ಸೌಂದರ್ಯ, ವಸ್ತ್ರಾಭರಣ ಚೆಲುವುಗಳಿಗೆ + ಪ್ರಾಧಾನ್ಯ ಕೊಡುತ್ತಾರೆ, ಇದು ಚಾಪಲ್ಯರಣವೇ ವಿನಾ ಕಲಾಭಿಮಾನವಲ್ಲ. ನೃತ್ಯ ಕಲೆಯ ಹೆಸರಿನಲ್ಲಿ ಕೇವಲ ಸ್ತ್ರೀತ್ವವನ್ನು ಪ್ರದರ್ಶನ ಮಾ ಡು ವು ದು ಕಲೆಯ ಅವಹೇಳನ, ಆ ಕೆಸರಿನಿಂದ ನೃತ್ಯಕಮಲವನ್ನು ಮೇಲಕ್ಕೆತ್ತಬೇಕೆಂದು ತ್ರಿಕರಣಪೂರ್ವಕವಾಗಿ ಪ್ರಯತ್ನಿಸುತ್ತಿರುವ ಕಲಾವಿದರಲ್ಲಿ ಮಾಯಾದೇವಿ ಅಗ್ರಗಣ್ಯರಾಗಿದ್ದಾರೆ. ಅವರ ಪ್ರಯತ್ನಕ್ಕೆ, 'ನಾಟ್ಯ ಸರಸ್ವತಿ' ಸಂಸ್ಥೆಗೆ ಜನತೆಯಿಂದ, ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ದೊರೆತರೆ ಅವರ ಕಲೆ ಬೆಳೆದು ಬೆಳಗುತ್ತದೆ. ನಾಡಿನ ಸಂಸ್ಕೃತಿಯ ಬೆಳವಳಿಗೆಗೆ ಅವರ ಕಲೆ ಪೋಷಕವಾಗುತ್ತದೆ. + “ An artificial man can be moved only by an artificial thing; there is a harmony between them; the true would create a discord”.


Theophile Gautier in “ THE FLEECE OF GOLD"