ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

a ಎಂ. ಆರ್. ದೊರೆಸ್ವಾಮಿ ಸ್ಥಾಪಿಸಿ ಸಂಗೀತ ಕಲೆಯ ಪ್ರಸಾರಕ್ಕೆ ಮಾಡಿದ ಮಹತ್ತರವಾದ ಸೇವೆಯು ಚಿರಸ್ಮರಣೀಯವಾಗಿದೆ. ಬೆಂಗಳೂರಿನ ಸಂಗೀತ ವಾತಾವರಣವೆಲ್ಲಾ ತಮಿಳು ಮಯವಾಗಿದ್ದಾಗ ಕನ್ನಡಿಗರ ಔನ್ನತ್ಯವನ್ನು ಎತ್ತಿ ತೋರಿಸಲು ಶ್ರೀಯುತರು ನಾದ ವಿನೋದ ಸಭೆಯ ಮೂಲಕ ದುಡಿದು, ತಮಿಳು ದೇಶದ ವಿದ್ವಾಂಸ ದೊಂದಿಗೆ ಸರಿಗಟ್ಟಿ ನಿಲ್ಲುವ ಯೋಗ್ಯತೆ ಮೈಸೂರು ವಿದ್ವಾಂಸರಿಗಿದೆಯೆಂದು ತೋರಿಸಿಕೊಟ್ಟರು. ಇಂತಹ ತರುಣ ಸಂಸ್ಕೃತ ಗಾನಕಲಾವಿದನನ್ನು ಕಳೆದುಕೊಂಡು ಮೈಸೂರಿಗೂ, ಕನ್ನಡನಾಡಿಗೂ ಅಪಾರ ನಷ್ಟ ತಗಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ.' ಸಂಗೀತ ವಿದ್ವಾಂಸರಲ್ಲಿ ನರಸಿಂಗರಾಯರಂಥವರು ಸಿ ಕ್ಕು ವುದು ದುರ್ಲಭ. ಶಿಷ್ಯನ ಉಚ್ಚಾಯವನ್ನೇ ತಮ್ಮ ಗುರಿ ಮಾಡಿಕೊಂಡು, ತ್ರಿಕರಣಪೂರ್ವಕವಾಗಿ ಅವನಿಗೆ ವಿದ್ಯೆಯನ್ನು ಧಾರೆಯೆರೆದ ಪುಣ್ಯವಂತರು ನರಸಿಂಗರಾಯರು. ಗುರುಗಳಲ್ಲಿ ಕಲಿತಿದ್ದುದನ್ನು ಸ್ವಪ್ರಯತ್ನದಿಂದ ದೊರೆಸ್ವಾಮಿ ರೂಢಿಸಿ ಕೊಳ್ಳುತ್ತಾ ಬಂದರು. ೧೯೩೮ರಲ್ಲಿ ಮದರಾಸಿನ ಟ್ರಯಂಫ್ ಕಾಲೇಜ್ ಆಫ್ ಇಂಡಿರ್ಯ ಮ್ಯೂಸಿಕ್' ಸೇರಿ ಅಲ್ಲಿ ಉಚ್ಚ ಶಿಕ್ಷಣವನ್ನು ಪಡೆದು, ಪರೀಕ್ಷಕರಾದ ಪ್ರೊ. ಪಿ. ಸಾಂಬಮೂರ್ತಿಯವರಿಂದ ಪ್ರಶಸ್ತಿಯನ್ನೂ ದೊರಕಿಸಿಕೊಂಡರು. ಅದೇ ವರ್ಷ ಕೋಲಾರದಲ್ಲಿ ದೊರೆಸ್ವಾಮಿಯವರ ಮೊಟ್ಟಮೊದಲನೆಯ ಸಾರ್ವಜನಿಕ ಕಛೇರಿಯಾಯಿತು. ರಸಿಕ ಶ್ರಾವಕರು ಹದಿನಾರು ವರ್ಷದ ತರುಣ ವಿ ಡ್ರಾ ೧ ಸ ನ ವಾದ್ಯ ಜಾಣೆಯನ್ನು ಮೆಚ್ಚಿಕೊಂಡರು. ಎಂ. ಎಸ್. ನಟರಾಜನ್ ಅವರ ದಿ ಧ್ವ ಶ ೯ ನ ದಲ್ಲಿ ಎದುರಿಸುವ ಉದ್ದೇಶದಿಂದಲೇ ಶ್ರೀ ನರಸಿಂಗರಾಯರು 'ನಾದ ವಿನೋದ ಸಭೆ'ಯನ್ನು ಸ್ಥಾಪಿಸಿ, ಮೈಸೂರು ವಿದ್ವಾಂಸರಿಗೆ ಪ್ರೋತ್ಸಾಹ ಕೊಡುತ್ತಾ ಬಂದರು. ಸ್ವಾಭಿಮಾನ ಶೂನ್ಯರಾದ ಕನ್ನಡಿಗರು ಶ್ರೀ ನರಸಿಂಗರಾಯರಿಗೆ ನೆರವು ಕೂದಲಿಲ್ಲ. ನಾದ ವಿನೋದ ಸಭೆ ನಿಂತುಹೋದುದಲ್ಲದೆ ನರಸಿಂಗರಾಯರ ಮೇಲೆ ಸಾಲದ ಭಾರವನ್ನೂ ಹೇರಿತು. (೧೯೪೫ ನೆಯ ಇಸವಿಯಲ್ಲಿ ಸಂಗೀತ ವಿದ್ವಾನ್ ಡಿ. ಸುಬ್ಬರಾಮಯ್ಯನವರು ಇಂತಹದೇ ಇನ್ನೊಂದು ಪ್ರಯತ್ನ ನಡೆಸಿ 'ಮೈಸೂರು ಸಂಗೀತ ಸಭೆ'ಯನ್ನು ಸ್ಥಾಪಿಸಿದರು. ನರಸಿಂಗರಾಯರಿಗಾಗಿದ್ದ ಅನುಭವವೇ ಸುಬ್ಬರಾಮಯ್ಯನವರಿಗೂ ಆಯಿತು.