ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ xvji UP ಅಷ್ಟೇನೂ ಆಶಾದಾಯಕವಾಗಿಲ್ಲ. ಮೈಸೂರಿನ ಜಟ್ಟಿ ತಾಯಮ್ಮನವರು, ಬೆಂಗಳೂರು ವರಾಲು ಅವರು, ಕುದೂರು ಚಂದ್ರಮ್ಮನವರು ಸ್ವತಂತ್ರ ಮಾರ್ಗಗಳನ್ನೇ ನಿರ್ದೆಶಿಸಿ ಮೈಸೂರಿನ ಒಂದು ನೃತ್ಯ ಕಲಾ ಸಂಪ್ರದಾಯವನ್ನೆ ಬೆಳಸಿದರು. ಜಟ್ಟಿ ತಾಯಮ್ಮನವರ ಶಿಷ್ಯರಾದ ಎಸ್.ಎನ್. ಸ್ವಾಮಿಯವರು ಆ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ. ಪಂದನಲ್ಲೂರು ಸಂಪ್ರದಾಯಕ್ಕೆ ಮಾರುವೋಗಿರುವ ಮೈಸೂರು ನೃತ್ಯ ಕಲಾವಿದರೂ ತಮ್ಮ ಗುರುಪರಂಪಕ ಯನ್ನೇ ಮರೆತು ಪಂದನಲ್ಲೂರು ಗೋತ್ರೋದ್ಧವಸ್ಯರೆಂದು ಹೇಳಿಕೊಳ್ಳು ತಿರುವುದು ನಾಚಿಕೆಗೇಡು. ಮೈಸೂರಿನ ನೃತ್ಯ ಕಲಾ ಸಂಪ್ರದಾಯವನ್ನು ಉಳಿಸಿಕೊಳ್ಳುವ ಪ್ರಯತ್ನ ಅವಶ್ಯಕವಾಗಿ ನಡೆಯಬೇಕು. ಆ ಸಂಪ್ರದಾಯ ದಲ್ಲಿ ನುರಿತಿರುವ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹವಿತ್ತು ಮೈಸೂರಿನ ಕಲಾ ಸಂಪ್ರದಾಯದ ಒಂದು ವಿಶಿಷ್ಟಾಂಗ ಊನವಾಗದಂತೆ ನೋಡಿ ಕೊಳ್ಳಬೇಕು.

  • ೫) ಜನಪದಕಲೆ: ನಮ್ಮ ನಾಡಿನ ಎಲ್ಲ ಕಲೆಗಳಿಗೂ ಮಾತ್ರ ಪ್ರಾಯವಾದುದು ನಮ್ಮ ಜನಪದ ಕಲೆಗಳು, ಜನಪದ ಕಲಾವಿದರ ಕೃತಿಗಳು ಅವರು ಉಪಯೋಗಮಾಡುತ್ತಿದ್ದ ತಂತ್ರ ಇಂದು ನಾಮಾವಶೇಷವಾಗಿದೆ ಮುದ್ದಣ್ಣ ಮಹಾಕವಿ ' ಯ ಕ್ಷಗಾ ನ' ನಾಟಕಗಳನ್ನು ಬರೆದಿದ್ದಾನೆ ಚಿತ್ರದುರ್ಗದ ಶ್ರೀ ಉಂತಕಲ್ ಶ್ರೀನಿವಾಸರಾಯರು ಇಂದಿಗೂ ಬಯಲು ನಾಟಕ ' ಬರೆಯುತ್ತಿದ್ದಾರೆ. ಈ ಬಗೆಯ ಸಾಹಿತ್ಯ ಸಂಗ್ರಹವಾಗಬೇಕು ನಾಟಕಗಳಿಗೆ ಪರಂಪರಾಗತವಾಗಿ ಅವರು ಉಪಯೋಗಿಸುತ್ತಿದ್ದ ತಂತ್ರ, ವೇಷಭೂಷಣ, ರಂಗನಿರ್ಮಾಣಗಳನ್ನು ರಕ್ಷಿಸಿಕೊಳ್ಳಬೇಕು. ದೇಶೀಯ ಚಿತ್ರಗಾರರು ತಮ್ಮ ಕೃತಿನಿರ್ಮಾಣಕ್ಕೆ ತಾವೇ ಬಣ್ಣಗಳನ್ನು ಮಾಡಿಕೊಳ್ಳು ತಿದ್ದರು ಅವರ ತಂತ್ರದ ಪುನರುಜ್ಜಿವನವಾಗಬೇಕು. ಹಳ್ಳಿಯ ಹಾಡುಗಳು, ಲಾವಣಿಗಳು, ಕೋಲಾಟದ ಪದಗಳನ್ನು ರಿಕಾರ್ಡು ಮಾಡಿಸಿಡಬೇಕು. ಕರ್ನಾಟಕದ ಬೇರೆಬೇರೆ ಭಾಗಗಳ ಬಯಲುನಾಟಕ, ಯಕ್ಷಗಾನ, ಹಗಲಾ ಗಳನ್ನು ವಾಕ್ಷಿ ಯಂತ್ರ ಸಹಾಯದಿಂದ ಧ್ವನಿಗ್ರಾಹಕ ಯಂತ್ರದ ಸಹಾಯದಿಂದ ರಿಕಾರ್ಡ್ ಮಾಡಿಸಬೇಕು.

ಎಲ್ಲಾ ಲಲಿತಕಲೆಗಳ ಸಂವರ್ಧನಕ್ಕೆ ಮಾಸಲಾದ 'ಕಲಾ ಪರಿಷತ್ತು