ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಿ, ಎಲ್, ಸೀತಾರಾಮ್ ೧೬೫ ಕೊಂಡ ಮಾನನ ಇಂದು ವ್ಯವಸಾಯ, ಕೈಗಾರಿಕೆ, ವೈದ್ಯಗಳಿಗೆ ಅಣುಶಕ್ತಿಯನ್ನು ಪಯೋಗಿಸಿಕೊಳ್ಳಲು ಹವಣಿಸುತ್ತಿದ್ದಾನೆ. ಛಾಯಾಚಿತ್ರಗ್ರಹಣ (Photography) ಯಂತ್ರಯುಗದ ಒಂದು ಪವಾಡ, ಸ್ಥಿರಚಿತ್ರಗಳನ್ನು (Still photogaphy) ಸಂಶೋಧನೆ ಮಾಡಿದ ಕುತೂಹಲ ಮುಂದುವರಿದು ಚಲನಚಿತ್ರಗಳಿಗೂ (Movies) ವಾತ್ರಗಳಿಗೂ (Talkies) ಎಡೆಮಾಡಿತು. ಸಾಮಾನ್ಯ ಮನುಷ್ಯನ ಬಾಳಿಗೆ ಸುಖವನ್ನೂ, ಕಲಾಮೋದವನ್ನು ಕೊಡುವುದಕ್ಕೆ ಛಾ ಯಾ ಚಿ ತ ಕ ಲೆ ನೆರವಾಯಿತು. ತನಗೆ ಪ್ರಿಯರಾದವರ ಒಂದು ಚಿತ್ರ ಮಾಡಿಸಿ ಮನೆಯಲ್ಲಿಟ್ಟು ಕೊಳ್ಳಲು ಐದುನೂರು ರೂಪಾಯಿ ತೈಲಚಿತ್ರಕ್ಕೆ ವ್ಯಯ ಮಾಡಬೇಕಾಗಿತ್ತು. ಇಂದು ಹತ್ತಿಪ್ಪತ್ತು ರೂಪಾಯಿಗಳಿಗೆ ಫೋಟೋ ರ್ಎಲಾರ್ಜ್‌ಮೆಂಟ್ ಮಾಡಿಸಿಟ್ಟುಕೊಳ್ಳಬಹುದು. ಫೋಟೋತಂತ್ರ ಯಂತ್ರಾಧೀನವಾದುದರಿಂದ ಇದನ್ನು ಲಲಿತಕಲೆಗಳ ಪಂಕ್ತಿಯಲ್ಲಿ ಸೇರಿಸಲು ಕಲಾವಿಮರ್ಶಕರು ಹಿಂಜರಿಯುತ್ತಾರೆ. ಛಾಯಾ ಚಿತ್ರಗ್ರಾಹಿ ಕಲಾವಿದನಾಗದೆ ಕೇವಲ ವ್ಯಾಪಾರಿಯಾದರೆ ಅವನ ಕ್ರಿಯೆ ಸಂಪೂರ್ಣವಾಗಿ ಯಂತ್ರಾಧೀನವಾಗುತ್ತದೆ. ಅ ವ ನು ತೆಗೆದುಕೊಡುವ ಚಿತ್ರವಾದರೊ ಯಂತ್ರದ ನಿರ್ಜಿವ ಪಡಿಯಚ್ಚು, ಛಾಯಾಚಿತ್ರದಲ್ಲಿಯೂ ಜೀವತುಂಬಬಹುದು, ವ್ಯಕ್ತಿಯ ಹೊರಮೈಯ್ಯನಲ್ಲದೆ ಒಳಮನಸ್ಸನ್ನೂ ಬಿಚ್ಚಿ ತೋರಿಸಬಹುದು ಎಂದು ಕೆಲವು ಛಾಯಾಚಿತ್ರಗಾರರು ಸಿದ್ಧ ಮಾಡಿ ಕೊಟ್ಟಿದ್ದಾರೆ. ಕತ್ತಲೆ, ಬೆಳಕುಗಳ ಯುಕ್ತನಿಯೋಜನೆಯಿಂದ ವ್ಯಕ್ತಿಯ ಅಂತರಾತ್ಮವನ್ನೇ ಬಿಚ್ಚಿ ತೋರಿದ ರೆಮ್ಬ್ರಾಂಟ್ + (೧೬೦೬-೬೯) ಇವರ ಆದ್ಯಗುರು. - ರೆಮ್ ಬ್ರಾಂಟ್ ತೈಲಚಿತ್ರಗಳಲ್ಲಿ ಮಾಡಿದ ಪ್ರ ಯೋ ಗ ನ ನ್ನು ಛಾಯಾಚಿತ್ರಗಳಲ್ಲಿ ಮಾಡಿ ಪರಿಣತರಾಗಿರುವ ಕನ್ನಡಕಲಾವಿದರಲ್ಲಿ ಶ್ರೀ ಬಿ. ಎಲ್. ಸೀತಾರಾಮ್ ಒಬ್ಬರಾಗಿದ್ದಾರೆ.

  • ರೆಮ್ ಬ್ಯಾಟನ ವಿಸ್ತ್ರತ ಪರಿಚಯಕ್ಕೆ ನನ್ನ ( ಭಾರತೀಯ ಚಿತ್ರಕಲೆಯಲ್ಲಿ ರಾಜಾ ರವಿವರ್ಮನ ಸ್ಥಾನ' ಗ್ರಂಥದ ಪುಟ ೬೫ ನೋಡಿ.

ಕೆ

- - -