ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ALL ಕರ್ನಾಟಕದ ಕಲಾವಿದರು ಸೀತಾರಾಮ್ ತಂದೆ ಕೀರ್ತಿಶೇಷ ಶ್ರೀ ಲಕ್ಷ್ಮಣಸ್ವಾಮಿನಾಯಿಡು, ದೊಡ್ಡಣ್ಣನವರ ಶಾಲೆಯಲ್ಲಿ ಕಲಾಶಿಕ್ಷಕರಾಗಿದ್ದರು. ಕಲಾಭಿರುಚಿ ಇವರಿಗೆ ತಂದೆಯವರಿಂದ ಬಂದಿತೆಂದು ಹೇಳಬಪುದು. ಸೀತಾರಾಮ್ ಮಿಡ್ಸ್ ಸ್ಕೂಲ್ ಎರಡನೆಯ ಫಾರ್ಮಿನಲ್ಲಿ ಓದುತ್ತಿದ್ದಾಗ, ಎಂಟನೆಯ ವಯಸ್ಸಿನಲ್ಲಿ ತಂದೆ ತೀರಿಕೊಂಡರು. ಇವರ ತಾತಂದಿರ ಗೆಳೆಯರಾದ ರಾಮ್ ಕಹೋ ಸೀತಾರಾಮ್ ಎನ್ನುವ ಔದ್ಯೋಗಿಕ ಚಿತ್ರ ವ್ಯವಸಾಯಿಗಳು ಸೀತಾರಾಮ್ ಅವರಿಗೆ ಚಿತ್ರಕಲಾಭ್ಯಾಸ ಮಾಡಿಸಲಾರಂಭಿಸಿದರು. ಎರಡು ವರ್ಷ ಅಭ್ಯಾಸ ಸಾಗಿತು. ಚಿತ್ರಕಲಾಭ್ಯಾಸದ ಜತೆಗೆ ಸ್ವಂತಸಂತೋಷಕ್ಕಾಗಿ ಸೀತಾರಾಮನ್' ಛಾಯಾಚಿತ್ರಗ್ರಹಣವನ್ನೂ ಅಭ್ಯಾಸಮಾಡುತ್ತಿದ್ದರು. ಜೀವನ ನಡೆಯ ಬೇಕಾಗಿತ್ತು. ಸೀತಾರಾಮ್ ಸಂಪಾದನೆ ಮಾಡಿದ ಹೊರತೂ ಗತ್ಯಂತರ ವಿರಲಿಲ್ಲ. (ಆರ್ ಲಿಥೋ ಪ್ರೆಸ್' ಸೇರಿ ಲಿಥೋಗ್ರಾಫರಾಗಿ ಮೂರು ವರ್ಷ ಇದ್ದರು. ಲಿಥೋಗ್ರಫಿಯ ಜತೆಗೆ ಛಾಯಾಚಿತ್ರಗ್ರಹಣದ ಅಭ್ಯಾಸ, ಪ್ರಯೋಗ ನಡೆದೇ ಇತ್ತು. - ಛಾಯಾಚಿತ್ರಗ್ರಹಣದ ಬಗ್ಗೆ ಸೀತಾರಾಮರಿಗಿದ್ದ ಅಭಿರುಚಿಗೆ ೧೯೨೨ ರಲ್ಲಿ 'ವಿಚಾರದರ್ಪಣ ನ್ಯೂಡಿಯೊ' ಒಡೆಯರಾದ ಶ್ರೀ ಎಂ. ರಾಮಯ್ಯನವರು ಪುಟಗೊಟ್ಟರು. ಅವರ ಸೂಡಿಯೊ ಕಲಾವಿದರಾಗಿ ಸೀತಾರಾಮ್ ಹನ್ನೊಂದು ವರ್ಷವಿದ್ದರು. ತರುವಾಯ ಶ್ರೀ ಇ.ಜಿ. ಕೃಷ್ಣಯ್ಯ ಶೆಟ್ಟಿ ಅಂಡ್ ಸನ್ ಸಂಸ್ಥೆಯ ಶ್ರೀ ಇ, ಕೆ. ಗೋವಿಂದರಾಜರ ಬಳಿ ಎರಡು ವರ್ಷವಿದ್ದರು. ಈ ಅವಧಿಯಲ್ಲಿ ಮುಂಬಯಿ, ಕಲ್ಕತೆ, ದೆಹಲಿ ನಗರಗಳ ಪ್ರ ವಾ ಸ ಕೈಗೊಂಡು ಅಲ್ಲಿನ ಕಲಾವಿದರ ಕೃತಿಗಳನ್ನು ನೋಡಿ, ವಿಚಾರವಿನಿಮಯ ಮಾಡಿಕೊಂಡು ಬಂದರು. ೧೯೩೫ರಲ್ಲಿ ಸೀತಾರಾಮ್ ಕೈ ಯಲ್ಲಿ ದ್ದ ಅಲ್ಪ ಹಣದೊಂದಿಗೆ ಸ್ವಂತ (ನಾನ್‌ಡೈಕ್ ಸ್ಟುಡಿಯೋ' ಆರಂಭಿಸುವ ಧೈರ್ಯಮಾಡಿದರು. ಹದಿನೇಳು ವರ್ಷಕಾಲ ಅವಿಶ್ರಾಂತ ಸಾಧನೆಯಿಂದ ಸೀತಾರಾಮ್ ರಚಿಸಿರುವ ನೂರಾರು ಕಲಾಕೃತಿಗಳನ್ನು ನೋಡಿದವರಿಗೆ ಅವರ ಅದ್ಭುತ ಕ್ರಿಯಾಶಕ್ತಿ, ಕರ್ಮ ಕೌಶಲ್ಯ, ಶ್ರದ್ದೆ ಬೆರಗುಗೊಳಿಸದಿರದು. ೧೯೪೭ರಲ್ಲಿ ತಮ್ಮೆಲ್ಲ ಕೃತಿಗಳ ಪ್ರದರ್ಶನವನ್ನು ಸೂಡಿಯೋದ ಹ ೩ ರ ಡ ನೆ ಯ ವಾರ್ಷಿಕೋತ್ಸವ * ಬಿ. ಎಲ್. ಸೀತಾರಾಮನ್ ಅವರ ಜನ್ಮ ದಿನ 4 ಡಿಸೆಂಬರ್ ೧೯ce occer NUdate