ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಿ, ಎಲ್. ಸೀತಾರಾಮ್ ೧೬೬ ಸಮಾರಂಭದಲ್ಲಿ ಮಾಡಿ ಕಲಾಭಿಮಾನಿಗಳ ಕಣ್ಮನಗಳಿಗೆ ಹಬ್ಬವನ್ನುಂಟು ಮಾಡಿದರು. ಚಿತ್ರಕಲೆಯಲ್ಲಿ ನಾನಾ ಭಾಗಗಳಿರುವಂತೆ ಛಾಯಾಚಿತ್ರಕಲೆಯಲ್ಲಿಯೂ ನಾನಾ ಭಾ ಗ ಗ ಳಿವೆ. ಪ್ರಕೃತಿ ದೃಶ್ಯ (Landscapes), ಮೇ ಳ ನ (Composition), x2:3233; (Portraiture), %09385, (Still Life) ಇತ್ಯಾದಿ. ಈ ನಾಲ್ಕು ವಿಭಾಗಗಳಲ್ಲಿಯೂ ಸೀತಾರಾಮ್ ದೊರಕಿಸಿಕೊಂಡಿರುವ .ಪ್ರಾವೀಣ್ಯತೆ ಗಮನಾರ್ಹವಾದುದು. ನಾನು ಇಲ್ಲಿ ಅವರ ಭಾವಚಿತ್ರ ಹಾಗೂ ಮೇಳನ ಚಿತ್ರಗಳ ಬಗ್ಗೆ ಮಾತ್ರ ಪ್ರಸ್ತಾಪಮಾಡುತ್ತೇನೆ. : ವ್ಯಕ್ತಿಯ ಮೂಗು, ಕಣ್ಣು, ಕಿವಿ, ಉಡುಗೆತೊಡಿಗೆಗಳನ್ನು ಯಾವ ಫೋಟೊಯಂತ್ರ ಬೇಕಾದರೂ ಗ್ರಹಣಮಾಡುತ್ತದೆ. ಆದರೆ ಈ ಕ್ರಿಯೆಯಿಂದ ನಮಗೆ ದೊರೆಯುವ ಫಲಿತಾಂಶ ವ್ಯಕ್ತಿಯ ದೇಹದ ಚಿತ್ರವೇ ವಿನಾ ಮನಸ್ಸಿನ ಚಿತ್ರವಲ್ಲ. ವ್ಯಕ್ತಿಯನ್ನು ನಿರ್ದೆಶಮಾಡುವುದು ಅವನ ಗುಣವೇ ವಿನಾ ದೇಹವಲ್ಲ. ಕರ್ಮಕುಶಲನಾದ ಚಿತ್ರಗಾರನಿಗೆ ಹೆಚ್ಚು ಸ್ವಾತಂತ್ರವಿರುತ್ತದೆ. ತಾನು ಕಾಣುವ ವ್ಯಕ್ತಿಯನ್ನು ಅವನು ಚಿತ್ರಿಸಬಲ್ಲ. ತಪ್ಪಿಹೋದರೆ ತಿದ್ದಲು ಅವನಿಗೆ ಅನುಕೂಲವಿದೆ, ವರ್ಣಗಳ ನೆರವಿದೆ, ಛಾಯಾ ಚಿತ್ರಗಾರನಿಗೆ ಈ ಸೌಕರ್ಯಗಳಿಲ್ಲ. ಛಾಯಾ ಚಿತ್ರಗಾರ ಕೇವಲ ನೆಳಲು ಬೆಳಕಿನ (Light and Shadow) ನೆರವಿನಿಂದ ವ್ಯಕ್ತಿಯ ನಿಜರೂಪವನ್ನು ಚಿತ್ರಿಸಬೇಕು. ಛಾಯಾಚಿತ್ರ ನೋಡಿದ ಕೂಡಲೇ ಇವನು ಕಲಾವಿದ, ಕವಿ, ಕಾಳಸಂತೆ ಕೋರ, ಧನದಾಸ, ಜಿಪುಣ, ಕ್ರೂರಿ, ವಂಚಕ ಎಂಬುದು ಥಟ್ಟನೆ ನಮ್ಮ ಮನಸ್ಸಿಗೆ ಭಾಸವಾಗಬೇಕು, ಛಾಯಾಚಿತ್ರಗಾರ, ತೈಲ, ಜಲಚಿತ್ರಗಾರರಂತೆ (Water Colour and Oil Colour Painters) ಮನಶಾಸ್ತ್ರಜ್ಞನಾಗಿರ ಬೇಕಾದುದು ಅತ್ಯವಶ್ಯಕ. ಸೀತಾರಾಮ್ ತೆಗೆದಿರುವ ನೂರಾರು ಚಿತ್ರಗಳಲ್ಲಿ ಈ ಗುಣವನ್ನು ಕಾಣಬಹುದು. ಮುಖದ ಮೇಲಣ ಯಾವದೋ ಅಂಗ ಅನೈಚ್ಛಿಕವಾಗಿ ಮನುಷ್ಯನ ಸ್ವಭಾವವನ್ನು ಸಾರುತ್ತದೆ. ಕಣ್ಣು ಆತ್ಮನ ಕಿಟಕಿ' (Eyes are the Windows of the soul) ಎಂದು ಹೇಳುವುದುಂಟು. ಕಣ್ಣು ಮಾತ್ರವೇ ಅಲ್ಲ-ಮೂಗು, ಕಿವಿ, ಬಾಯಿ, ತುಟಿ, ಗಲ್ಲಗಳು, ಕಂಠ, ಕೈಗಳು (ಮುಖ್ಯವಾಗಿ ಬೆರಳುಗಳು), ಕಾಲುಗಳು-ನಗೆ ಮಾನವನ ಸ್ವಭಾವವನ್ನು