ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೮ ಕರ್ನಾಟಕದ ಕಲಾವಿದರು ಸ್ಪಷ್ಟವಾಗಿ ನಿರ್ದೆಶಿಸುತ್ತವೆ. ತಾರಾಚೌಧುರಿಯವರ ಛಾಯಾಚಿತ್ರದಲ್ಲಿ ಸೀತಾರಾಮ್ ಕತ್ತಲೆ ಬೆಳಕಿನ ಚಮತ್ಕಾರ ಮಾಡಿ ತೋರಿಸಿದ್ದಾರೆ. ಹುಬ್ಬಿನ ಮೇಲ್ಬಾಗದ ಹಿನ್ನೆಲೆ ಕತ್ತಲೆಯಿಂದ ಕೂಡಿದೆ. ಕಣ್ಣಿನ ನೇರಕ್ಕೆ ಸರಿಯಾಗಿ ಬೆಳಕು ಮೂಡಿದೆ. ಮುಖದ ಮುಂಬದಿಯಲ್ಲಿ ಬೀಳುವ ಪ್ರಬಲ ಬೆಳಕಿಗನುಗುಣವಾಗಿ ಕಪೋಲದ ಮೇಲೆ ಬೆಳಕು ಮಂದವಾಗಿದೆ. ಈ ನಿಯೋಜನೆಯಿಂದ ಚೌಧುರಿಯ ಕಣ್ಣಿಗೆ ಪೂರ್ಣ ಪ್ರಾಧಾನ್ಯ ದೊರೆತಿದೆ. ಮೂಗು, ತುಟಿಗಳು ಸ್ಪಷ್ಟವಾಗಿ ಮೂಡಿವೆ. ಮುಘಲ ರಾಜಕುಮಾರಿಯ ಭೂಮಿಕೆ ಧರಿಸಿರುವ ನರ್ತಕಿಯ ಮುಖದಲ್ಲಿ ರಾಜಠೀವಿ, ಗಾಂಭೀರ್ಯ ಮೂಡಿದೆ. ಆಕೆ ಧರಿಸಿರುವ ಆಭರಣಗಳು, ಹೂವು, ಆಕೆಯ ವಸ್ತ್ರದ ಮೇಲಿರುವ ನಕಾಶೆ ವಿವರವಾಗಿ ಕಂಡುಬರುತ್ತದೆ. ಮನೋವ್ಯಾಪಾರವನ್ನರಿಯುವ ರಹಸ್ಯ ಸೀತಾರಾಮ್ ಅವರಿಗೆ ದೀರ್ಘ ಕಾಲದ ಅಭ್ಯಾಸ, ಪ್ರಕೃತಿವಿಕ್ಷಣೆ, ಆಳವಾದ ವಿಚಾರ ಮತ್ತು ಪ್ರತಿಭೆಗಳ ಪ್ರಸಾದವಾಗಿ ದೊರೆತಿದೆ. ಛಾಯಾಚಿತ್ರಗಾರರೆಂದರೆ ಸಾಧಾರಣವಾಗಿ ಭಾವಚಿತ್ರ ತೆಗೆಯುವವರು. ಭಾವಚಿತ್ರಗ್ರಹಣ ಸಂಪಾದನೆಗೆ ಸ ಹಾ ಯ ಕ ವಾ ಗು ವ೦ತೆ ಮೇಳನ ಚಿತ್ರವಾಗುವುದಿಲ್ಲ. ತಮ್ಮ ಕಲೆಯನ್ನು ವ್ಯಾಪಾರದ ದಾಸ್ಯಕ್ಕೆ ಕೆಡವದೆ ಕಲಾರಾಧಕರಾಗಿರುವ ವಿರಳರಲ್ಲಿ ಸೀತಾರಾಮ ಒಬ್ಬರು. (ಜೀವನ-ಕಲೆ'ಯ ವಸ್ತುವನ್ನೇ ಆಧಾರವಾಗಿಟ್ಟುಕೊಂಡು ಅವರು ಕೆಲವು ಮೇಳ ಚಿತ್ರಗಳನ್ನು ಮಾಡಿದ್ದಾರೆ. S ೧. ಕಲೆಯ ಅವನತಿ : ಹಿನ್ನೆಲೆಯಲ್ಲಿ ಹೆಣ್ಣು ಕಂಬನಿಗೆರೆಯು ತ್ತಿದೆ. - ಮುಂಬದಿಯಲ್ಲಿ ಹೆಣ್ಣು ವೀಣೆ ನುಡಿಸುತ್ತಿದ್ದಾಳೆ. ದುಃಖತಪ್ತವಾಗಿದೆ ಅವಳ ಜೀವನ, ಕಲಾವಿದೆಯಲ್ಲಿಯೇ ಆನಂದವಿಲ್ಲದಿರುವಾಗ ಅವಳ ಕಲೆಯಲ್ಲಿ ಆನಂದವನ್ನು ನಿರೀಕ್ಷಿಸುವುದು ಸಾಧ್ಯವೇ ? ಯಾರಿಗಾಗಿ ನುಡಿಸಲಿ ? ಲಲಿತ ಕಲೆ ಯಾರಿಗೆ ಬೇಕು ? ಎಂಬ ಪ್ರಶ್ನೆ ಅವಳ ಮುಖದಲ್ಲಿ ತಾಂಡವವಾಡುತ್ತಿದೆ. ಲಲಿತಕಲೆಗಳ ಪ್ರಕೃತ ಪರಿಸ್ಥಿತಿಯನ್ನು ಈ ಚಿತ್ರ ರುದ್ರಗಭೀರವಾಗಿ ಚಿತ್ರದ ಮೇಲೆ ಅಚ್ಚೆತ್ತುತ್ತದೆ.