ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xviii ಮುನ್ನುಡಿ (Arts Academy) ಸ್ಥಾಪನೆಯಾಗಿ ಅದು ಮನಃಪೂರ್ವಕವಾಗಿ ಶ್ರಮಿಸಿದರೆ ಕನ್ನಡ ನಾಡಿನಲ್ಲಿ ಕಲಾ ಪುನರೋದಯವನ್ನು ತರುವುದಲ್ಲದೆ ಭಾರತೀಯ ಕಲೆಗಳ ಮೇಲೂ ಕನ್ನಡನಾಡು ತನ್ನ ಪ್ರಭಾವ ಬೀರುವಂತೆ ಮಾಡಬಹುದು. ಆದರೆ ಇಂಥ ಸಂಸ್ಥೆ ಕೋಮುವಾರು ಭೂತಕ್ಕೆ ಬಲಿಯಾಗದೆ ಕಲಾರಂಗದಲ್ಲಿ ತ್ರಿಕರಣಪೂರ್ವಕವಾಗಿ ಶ್ರಮಿಸಿರುವ ಎಲ್ಲರನ್ನೂ ಸಮಾವೇಶಗೊಳಿಸಿಕೊಳ್ಳ ಬೇಕೆಂದು ಸೂಚಿಸುವುದು ತಪ್ಪಾಗಲಾರದಷ್ಟೆ, ನಮ್ಮ ನಾಡಿನ ಕಲೆಯ ಪರಿಸ್ಥಿತಿ, ಕಲಾವಿದರ ದುಸ್ಥಿತಿ ಕಂಡು ಕಂಡು ನನ್ನ ಕಣ್ಣುಗಳಿಂದ ಮಿಡಿಯುವ ರಕ್ತಾಶ್ರುಗಳಿಗೆ ಮಾತು ಕೂಡಿಸಲೆತ್ನಿಸಿದ್ದೇನೆ. ಎಂಥ ದುರ್ದೈವಿ ಜನ ನಾವು ? ಕಲಾಪ್ರತಿಭೆಯಿಂದ ವಿಶ್ವವನ್ನು ಬೆಳಗಿಸಬಲ್ಲ ರಸಋಷಿಗಳಿಗೆ ಈ ನಾಡು ಜನನವೀಯುತ್ತದೆ. ಆದರೆ ಅವರಿಗೆ ಅನ್ನ ಹಾಕದೆ, ಬಟ್ಟೆ ಕೊಡದೆ, ಒಂದು ಒಳ್ಳೆಯ ಮಾತು ಆಡದೆ ಕೊರಗಿಸುತ್ತದೆ. ನೆರೆಹೊರೆಯ ತಮಿಳರನ್ನು, ಮಹಾರಾಷ್ಟ್ರದವರನ್ನು ನೋಡಿ ನನ್ನ ಜನ-ನಮ್ಮ ಸರ್ಕಾರ ನಾಚಬೇಡವೇ ? ಕನ್ನಡ ನಾಡಿನ ಲಲಿತಕಲೆಗಳ ಪರಿಷೋಷಣೆಯ ಬಗ್ಗೆ ನಾನು ಅನೇಕ ವರ್ಷ ಮಾಡಿರುವ ವಿಚಾರ, ಶೋಧ, ಅಭ್ಯಾಸಗಳ ಫಲವನ್ನು ಈ ಗ್ರಂಥ ರೂಪದಲ್ಲಿ ಒಪ್ಪಿಸಿದ್ದೇನೆ. 'ಕರ್ನಾಟಕದ ಕಲಾವಿದರು, ಭಾಗ ೧' (೧೯೪೬) ಪ್ರಕಟವಾದ ಕೂಡಲೆ ಈ ಗ್ರಂಥವನ್ನು ಪ್ರಕಟಿಸಬೇಕೆಂದು ಮನಸ್ಸು ಮಾಡಿದ್ದೆ. ನಮ್ಮ ನಾಡಿನಲ್ಲಿ ಇಂಥ ಸಾಹಿತ್ಯ ಪ್ರ ಕ ಟ ಸು ದು ಎಷ್ಟು ಕಷ್ಟಸಾಧ್ಯವೆನ್ನುವುದು ಬಲ್ಲವರಿಗೆ ಗೊತ್ತು. ಆರುವರ್ಷಗಳ ತರುವಾಯ ವಾದರೂ ಈ ಗ್ರಂಥ ಬರಲು ಸಾಧ್ಯವಾದುದಕ್ಕೆ ನಾನು ಸಂತೋಷಿಸುತ್ತೇನೆ. ಪ್ರಕಟನೆಯ ಭಾರ ಹೊತ್ತು ಮೆಸರ್ ಆನಂದ್ ಬ್ರದರ್, ಪ್ರಕಾಶಕರು ಮಹೋಪಕಾರ ಮಾಡಿದ್ದಾರೆ. ಮುಂದೆ ಕ ನಾ ೯ ಟ ಕ ದ ಕ ಲಾ ವಿ ದ ರು ಭಾಗ ೩, ೪, ೫, ಪ್ರಕಟಿಸುವ ಯೋಚನೆಯೂ ಇದೆ. ಈ ಗ್ರಂಥಕ್ಕೆ ಬೇಕಾದ ಕೆಲವು ಚಿತ್ರಗಳು, ವಿಷಯಗಳನ್ನು ಸಂಗ್ರಹಿಸಿ ಕೊಟ್ಟ "ಶ್ರೀ ಎಂ. ಎಸ್. ನಟರಾಜನ್, ಶ್ರೀ ಬಿ. ಎಲ್. ಸೀತಾರಾಮ್ (ವಾನ್ ಡೈಕ್ ಸ್ಟುಡಿಯೋ) ಶ್ರೀ ರಾಜಾಸಿಂಗ್, ಶ್ರೀ ಎ. ಎನ್. ಸುಬ್ಬರಾವ್, ಶ್ರೀ ಬಿ.ಮರುಳಪ್ಪ(ಆಕ್ಯುಪೇಷನಲ್ ರ್ಇಸ್ಟಿಟ್ಯೂಟ್) ಉಪಕಾರ ಮಾಡಿದ್ದಾರೆ. ಈಸ್ಟರ್ನ್ ಪ್ರೆಸ್ ಒಡೆಯರಾದ ಶ್ರೀ ಎಂ. ಎಸ್. ಚಿಂತಾಮಣಿಯವರು