ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಿ. ಎಲ್. ಸೀತಾರಾಮ್ ೧೬೯ ೨, ಪರಂಪರೆಯ ಪತನ, ಕಲೆಯ ಅವನತಿಗೆ ಪ್ರೋತ್ಸಾಹ ದಾರಿದ್ರ, ಕಾರಣವಾದಂತೆ ಕ ಲಾ ವಿ ದರ ಅಲ್ಪತೃಪ್ತಿಯೂ ಕಾರಣವಾಯಿತೆಂದು ಸೀತಾರಾಮ್ ಈ ಚಿತ್ರದಲ್ಲಿ ತೋರಿಸಲೆತ್ನಿಸಿದ್ದಾರೆ. ನಮ್ಮ ಲಲಿತಕಲೆಗಳು ಇಂದು ಪರಂಪರೆಯ ಬೆಂಬಲ ಕಳೆದುಕೊಂಡಿವೆ. - ನೂತನ ಸೃಷ್ಟಿ ಮಾಡಲು 'ಹೊರಡುವ ಅರ್ವಾಚೀನ ಜಗತ್ತು, ದಾರಿಗಾಣದೆ ತೊಳಲಾಡುತ್ತಿದೆ. ಪರಂಪರೆಯ ಗಂಟೆ ಸಾರಿಸಾರಿ ಹೇಳುತ್ತಿದೆ 'ಶಾಶ್ವತವಾದುದನ್ನು ಅರಸು. ಕ್ಷಣಭಂಗುರವಾದುದಕ್ಕೆ ಮನಸ್ಸು ತೆತ್ತು ಅಪಗತಿಯ ಮಾರ್ಗ ಹಿಡಿಯಬೇಡ'. ಕಾಲಚಕ್ರ ಉರುಳುತ್ತಿದೆ. ಪರಂಪರಾಗತವಾದ ಸಂಸ್ಕೃತಿಯನ್ನು ಸರಪಳಿಯಲ್ಲಿ ಬಿಗಿದು ಆಧುನಿಕ ಜೀವಿಯೊಂದು ಕಲಾರಾಧನೆಗೆ ಹೊರಟಿದೆ. ಕೈಯ್ಯಲ್ಲಿ ವೀಣೆ, ಎದುರಿಗೆ ಪುಸ್ತಕ. ಅಂತರಂಗದಿಂದ ಮಿಡಿಯುವ, ಅನುಭವದಿಂದ 'ಬೆಳಗುವ ವಿದ್ಯೆಗಲ್ಲ ಬೆಲೆ. ಪುಸ್ತಕ ಪಾಂಡಿತ್ಯಕ್ಕೆ! ಹೆಣ್ಣು ವೀಣೆಯ ಮೇಲೆ ಕೈಯಾಡಿಸಿರುವ ಬಗೆಯಲ್ಲಿ ಅಸಡ್ಡೆ ತುಂಬಿದೆ, ಅವಳ ಬೆರಳುಗಳ ವಕ್ರಗತಿಯಲ್ಲಿ ಛಾಯಾಶಿಲ್ಪಿ ಅವಳ ಕಲೆಯ ಹದನನ್ನು ಸೂಕ್ಷವಾಗಿ ಸೂಚಿಸಿದ್ದಾರೆ.. ೩, ಪುನರೋದಯ: ಸೀತಾರಾಮ್ ನಿರಾಶಾವಾದಿಯಲ್ಲ. ಕಲೆಯ 'ಪರಿಸ್ಥಿತಿಯನ್ನು ವಿವರಿಸಿದ ಮೇಲೆ ಅದರ ಭವಿಷ್ಯವನ್ನೂ ಸೂಚಿಸಿದ್ದಾರೆ. ಕಲೆಯ ಜೀವನ ಅನಂತ - ಅದರ ಬದುಕು ಅವಿನಾಶಿ, ಪ್ರಾಚೀನದ ಬೆಂಬಲ ವಿಟ್ಟುಕೊಂಡು ಅರ್ವಾಚೀನ ಕಲೆಯನ್ನು ಬೆಳೆಸಬಲ್ಲ ಕಲಾವಿದರು ಬಂದೇ ಬರುತ್ತಾರೆ. ಅವರ ಸೇವೆಯ ಪ್ರಭಾವದಿಂದ ಕಲೆ ತಲೆಯೆತ್ತಿ ನಿಲ್ಲುತ್ತದೆ. ಲೋಕ ನಕ್ಕುನಲಿಯುತ್ತದೆ. ತನ್ನ ಚೇತೋಹಾರಿತ್ವದಿಂದ ಲೋಕದ ಜಂಜಡ ಅಳಿಸಿ ಕಲೆ ಮಾನವ್ಯದ ಉದ್ಧಾರಮಾಡುತ್ತದೆ. ಹೆಣ್ಣು ವೀಣೆ ನುಡಿಸುತ್ತಿದೆ. ಆದರ ಕೈ ಬೆರಳಿನ ಚಲನವಲನದಲ್ಲಿ ಅಸ್ಥಿರತೆಯಿಲ್ಲ, ಅಪಕ್ವತೆಯಿಲ್ಲ. ನರ್ತಕಿ ಸಂಪ್ರದಾಯದ ಭರತನಾಟ್ಯ ಅಭಿನಯಿಸುತ್ತಿದ್ದಾಳೆ. ಚಿತ್ರಗಾರ ಅವಳ ಭಂಗಿಯ ಬೆಡಗನ್ನು ಚಿತ್ರಕ್ಕಿಳಿಸುತ್ತಿದ್ದಾನೆ. ಈ ನವೋದಯದ ಜಾಜ್ವಲ್ಯ ಕಂಡು ತಾರುಣ್ಯ ಹಿಗ್ಗಿನಿಂದ ನಗುತ್ತಿದೆ. ಚಿತ್ರಗಾರನ ಮುಂದಿರುವ ಅಣುಚಿತ್ರದಲ್ಲಿ ಸೀತಾರಾಮ್ ಭಾವಚಿತ್ರಕಲೆಯ ರೂಪರೇಷೆಯನ್ನು ಸ್ಪಷ್ಟವಾಗಿ ಮೂಡಿಸಿರುವುದು ಚಿತ್ತಾಕರ್ಷಕವಾಗಿದೆ.