ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೨ ಕರ್ನಾಟಕದ ಕಲಾವಿದರು ನಾಟಕಗಳು, ಸಂಗೀತ ಕಛೇರಿಗಳು, ನೆಳಲುಚಿತ್ರ ಪ್ರದರ್ಶನವೆಲ್ಲವನ್ನೂ ಕುತೂಹಲದಿಂದ ನೋಡಿ ಬಂದಿದ್ದ ಕರ್ಬಿಯವರು ಅವೆಲ್ಲಾ ಹಾಗಿರಲಿ, ಮೈಸೂರಿನ ಒಬ್ಬ ಹೆಣ್ಣು ಮಗಳ ಗಾನ ಕೇಳಿದೆ. ಹೆಸರು ಚೊಕ್ಕಮ್ಮನಂತೆ. ಏನವರ ಹಾಡುಗಾರಿಕೆ ! ಸಿಂಹದ ಹಾಗೆ ಗರ್ಜಿಸುತ್ತಾರೆ, ಹಕ್ಕಿಯಹಾಗೆ ಉಲಿಯುತ್ತಾರೆ, ಅವರ ವಯಸ್ಸು ವಿದ್ಯೆಯ ವಿಚಿತ್ರ ಸಂಗಮ ನೋಡಿ ನನಗೆ ಪರಮಾಶ್ಚರ್ಯವಾಯಿತು. ಅದೊಂದು ನಾನು ಮರೆಯಲಾಗದ ಸವಿದಿನ' ಎಂದರು. ಅಭಿಮಾನಕ್ಕೆ ಕಟ್ಟು ಬೀಳದೆ ಶ್ರೇಷ್ಠ ಕಲೆ ತಮ್ಮ ಮೇಲೆ ಮೂಡಿದ ದಿವ್ಯ ಪ್ರಭಾವವನ್ನು ಕರ್ಬಿಯವರು ಸಹಜವಾಗಿ ನುಡಿದರು. ಕರ್ನಾಟಕ ಸಂಗೀತವನ್ನು ಹೆಚ್ಚು ಕೇಳದಿರುವ, ಕರ್ನಾಟಕ ಸಂಗೀತದ ತಂತ್ರ ಪರಿಚಯವಿಲ್ಲದಿರುವ ಕರ್ಬಿಯವರ ಮನಸ್ಸಿನ ಮೇಲೆ ಚೊಕ್ಕಮ್ಮನವರ ಸಂಗೀತ ಶಾಶ್ವತ ಪರಿಣಾಮವನ್ನುಂಟುಮಾಡಬೇಕಾದರೆ ಕರ್ನಾಟಕ ಸಂಗೀತೋಪಾಸಕರ ಮನಸ್ಸಿನ ಮೇಲೆ ಯಾವ ಪರಿಣಾಮವನ್ನುಂಟುಮಾಡ ಬಹುದೆನ್ನುವುದನ್ನು ಸುಲಭವಾಗಿ ಊಹಿಸಬಹುದು. ಚೊಕ್ಕಮ್ಮನವರ ಸಂಗೀತದಲ್ಲಿರುವ ಚೊಕ್ಕತನ'ಕ್ಕೆ ಸಂರಪರಾಗತವಾದ ಅವರ ಗೃಹಸಂಸ್ಕೃತಿಯ ಕಾ ರ ಣ ವಾ ಗಿರ ಬೇಕು. ಅವರ ತಾಯಿ ತಂದೆ ಇಬ್ಬರೂ ಅರಮನೆಯ ಕಂಟ್ರೋಲರಾಗಿದ್ದ ದಿವಂಗತ ವಿ. ಎನ್. ನರಸಿಂಹಯ್ಯಂಗಾರ್ಯರ ವಂಶಿಕರು. ಚೊಕ್ಕಮ್ಮನವರ ತಂದೆ ದಿವಂಗತ ಎನ್. ನರಸಿಂಹಯ್ಯಂಗಾರ್ಯರು ಗಣಿ, ಭೂಗರ್ಭಶಾಸ್ತ್ರದ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿದ್ದರು. ಅವರಿಗೆ ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ವಿಶೇಷ ಪ್ರವೇಶವಿತ್ತು. ತಾಯಿ ರುಕ್ಕಮ್ಮನವರು ತಕ್ಕ ಮಟ್ಟಿಗೆ ವೀಣೆ ನಡೆಸುತಿದ್ದರು. ತಾಯಿಯ ಸಂಗೀತಪ್ರೇಮ, ತಂದೆಯ ಸಾಹಿತ್ಯ ಪ್ರೇಮ ಎರಡೂ ಮಗಳಲ್ಲಿ ಮೂರ್ತಿಭವಿಸಿದವು. ಮೈಸೂರು ಗಂಧದೆಣ್ಣೆ ಕಾರ್ಖಾನೆಯ ಜನರಲ್ ಮ್ಯಾನೇಜರಾಗಿ ನಿ ವೈ ತ ರಾ ಗಿ ರು ವ ಶ್ರೀ ಬಿ. ಶ್ರೀನಿವಾಸ ಅಯ್ಯಂಗಾರ್ಯರವರು ಚೊಕ್ಕಮ್ಮನವರ ಭಾವ. ಅವರಿಗೆ ಮಕ್ಕಳಿಲ್ಲದುದರಿಂದ ನಾದಿನಿ ಚೊಕ್ಕಮ್ಮನನ್ನೆ ಸಾಕಿಕೊಂಡು, 'ಆಕೆಯ ಸದಸ್ಯ ಶ್ರೇಯಸ್ಸಿಗೂ ಕಾರಣರಾದರು. - + ಚೊಕ್ಕಮ್ಮನವರ ಜನ್ಮದಿನ : ೧೮ ಆಗಸ್ಟ್ ೧೯೨೨,