ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ಕರ್ನಾಟಕದ ಕಲಾವಿದರು ಚೊಕ್ಕಮ್ಮನವರು ಘನರಾಗವನ್ನೇ ಹಾಡಲಿ ರಾಗಿಣಿಯನ್ನೆ ಹಾಡಲಿ ಸಿಂಪಸ್ಸರ್ಯದಿಂದ ಹಾಡುತ್ತಾರೆ. ರಸಭಾವಗಳಿಂದ ತುಂಬಿ ರಾಗ ಉಕ್ಕಂದವಾಗಿ ಹರಿಯುತ್ತದೆ. ಪರ್ವತದಿಂದಿಳಿಯುವ ಜಲಧಾರೆಯಂತೆ ಸ್ವರದ ಆವರ್ತಗಳು ನಡೆಯುತ್ತವೆ. ಒಂದೇ ರಾಗ ಕೇಳಿದರೆ ಮನಸ್ಸು ತುಂಬುತ್ತದೆ. ಬೇರೆ ಬೇರೆ ಪ್ರಭಾವಗಳಿಗೆ ಸಿಕ್ಕಿ ಕರ್ನಾಟಕ ಸಂಗೀತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವಾಗ ಅದು ನಾಶವಾಗದಂತೆ ರಕ್ಷಿಸುತ್ತಿರುವ ಕನ್ನಡ ಕಲಾವಿದರಲ್ಲಿ ಚೊಕ್ಕಮ್ಮನವರು ಒಬ್ಬರಾಗಿದ್ದಾರೆಂದು ನಿಸ್ಸಂದೇಹವಾಗಿ ಹೇಳಬಹುದು.