ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ xix ಗ್ರಂಥವನ್ನು ಅಂದವಾಗಿ ಮುದ್ರಿಸಿಕೊಟ್ಟಿರುವುದಲ್ಲದೆ ತಮ್ಮ ಕೆಲವು ಪಡಿಯಚ್ಚು ಗಳನ್ನೂ ಎರವಲಿತ್ತಿದ್ದಾರೆ. ಸೋದರಿ ಸಂಪಾದಕಿಯರಾದ ಸೌ, ಎಂ. ಆರ್. ಲಕ್ಷಮ್ಮನವರು ಶ್ರೀಮತಿ ಹಾನಗಲ್ ಗಂಗೂಬಾಯಿಯವರ ಪಡಿಯಚ್ಚು ಕೊಟಿದ್ದಾರೆ. ಈ ಗ್ರಂಥದಲ್ಲಿ ಪ್ರಕಟವಾಗಿರುವ ಕೆಲವು ಚರಿತ್ರೆಗಳನ್ನು ತಮ್ಮ 'ಜನಪ್ರಗತಿ'ಯಲ್ಲಿ ಶ್ರೀ ಎನ್.ಎಸ್.ಸೀತಾರಾಮ ಶಾಸ್ತ್ರಿಗಳೂ (ಸಂಪಾದಕರು) ಶ್ರೀ ಡಿ. ಎನ್. ಹೊಸಾಳಿಯವರೂ (ಮಾಲೀಕರು) ಪ್ರಕಟಿಸಿದ್ದಾರೆ. ಅನುಬಂಧದಲ್ಲಿ ನಾನು ಪ್ರಕಟಿಸಿರುವ ' ದಕ್ಷಿಣೋತ್ತರ ಸಂಗೀತ ಸಮನ್ವಯ ವೆಂಬ ಲೇಖನ ಧಾರವಾಡದ ಎ. ಐ. ಆರ್. ಸ್ಟೇಷನ್ನಿನಲ್ಲಿ ಸಂಗೀತರತ್ನ ಮಲ್ಲಿಕಾರ್ಜುನ್ ಮನ್ಸೂರ್ ಅವರು ಮಾಡಿದ ಭಾಷಣ. - ಪ್ರಜಾಮತ ' ಪತ್ರಿಕೆಯ ದೀಪಾವಳಿ ಸಂಚಿಕೆಯಲ್ಲಿ ತರುವಾಯ ಪ್ರಕಟವಾಯಿತು. ಈ ಲೇಖನವನ್ನು ಪುನರ್ಮುದ್ರಿಸಲು ಅನುಮತಿಯಿತ್ತ ಮನ್ಸೂರರು, ಧಾರವಾಡದ ಎ. ಐ. ಆರ್ ಅಧಿಕಾರಿಗಳು, ಪ್ರಜಾಮತ ಸಂಪಾದಕರಿಗೆ ನಾನು ಋಣಿಯಾಗಿದ್ದೇವೆ. ಇವರೆಲ್ಲರ ಉಪಕಾರವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇನೆ.

  • ಅನ್ನ ಪೂರ್ಣ ? ವಿಶ್ವೇಶ್ವರಪುರ, ಬೆಂಗಳೂರು-೪, ೨೫ - ಫೆಬ್ರುವರಿ, ೧೯೫೨

ಅ. ನ. ಕೃಷ್ಣರಾಯ