ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮ಲ ಕರ್ನಾಟಕದ ಕಲಾವಿದರು ಶೃಂಗೇರಿಯ ಈಗಿನ ಹಿರಿಯ ಜಗದ್ಗುರುಗಳನ್ನೂ ಜನ ಹುಚ್ಚರೆಂದರು. ಜನ ಸಾಮಾನ್ಯಕ್ಕೆ ಅರ್ಥವಾಗದ ಭವ್ಯ ವಿಷಯಗಳಿಗೆ ಮನಸ್ಸು ಕೊಡುವವರು ಜನರ ದೃಷ್ಟಿಯಲ್ಲಿ ಹುಚ್ಚರು ತಾನೇ ! ನಿಮ್ಮ ಸಾಧನೆ ಒಂದು ಘಟ್ಟಕ್ಕೆ ಮುಟ್ಟದೆಯಂದಿರಿ. ಅದು ಏನೆಂದು ತಿಳಿಯಬಹುದೇ ? ”

    • ಮಂದ್ರ, ಮಧ್ಯ, ತಾರ, ಅತಿ ತಾರ, ಅತಿ ತಾರತಾರ ಇವೈದು ಸ್ನಾಯಿಗಳಿವೆ. ಮಂದ್ರಕ್ಕೆ ವಾತಾಪಿಗಣಪತಿ೦, ಮಧ್ಯಕ್ಕೆ ಸ್ವರರಾಗಸುಧಾ, ತಾರಕ್ಕೆ ಅವರನಿ, ಅನಿತಾರಕ್ಕೆ ಶ್ರೀ ಸುಬ್ರಮ್ಹುಣ್ಯನಮಸ್ತೆ, ಅತಿತಾರತಾರಕ್ಕೆ ಮಾನಾಕ್ಷಿಮುದಂ ಕೀರ್ತನೆಗಳು ದೃಷ್ಟಾಂತವಾಗಿವೆ. ಇನೈದು ಸ್ವಾಯಿಗಳಲ್ಲದೆ ಒಂದೊಂದು ಸ್ಥಾಯಿಗೂ ಇದೇ ಕ್ರಮದಲ್ಲಿ ಐದು ಸ್ನಾಯುಗಳಿವೆ. ಮಂದ್ರಮಂದ್ರಮಂದ್ರ, ಮಂದ್ರ ಮಧ್ಯ, ಮಂದ್ರ ತಾರ, ಮಂದ್ರ ಅತಿತಾರ, ಮಂದ್ರ ಆತಿತಾರತಾರ. ಆ ಸ್ವಾಮಿಗಳಿಂದಲೂ ಮತ್ತೆ ಪಂಚಸ್ತಾಯಿಗಳನ್ನು ಬಿಡಿಸಬಹುದು. ಹೀಗೆ ಸ್ಥಾಯಿಗಳನ್ನು ಬಿಡಿಸಿಕೊಂಡು ಹೋದಂತೆ ನಮಗೆ ಶುದ್ದನಾದಸ್ವರೂಪ ಗೊತ್ತಾಗುತ್ತದೆ. ನಾನು ಈ ದಾರಿಯಲ್ಲಿ ಸ್ವಲ್ಪ ಪ್ರಯಾಣ ಮಾಡಿದ್ದೇನೆ.”

“ ಕರ್ನಾಟಕ ಸಂಗೀತದ ಅಸ್ತಿಭಾರ ಯಾವದು ? ”

  • ಎಪ್ಪತ್ತೆರಡು ಮೇಳಕರ್ತ ರಾಗಗಳು. ಇದು ಅತ್ಯಂತ ವೈಜ್ಞಾನಿಕ ವಾಗಿದೆ. ಆ ಎಪ್ಪತ್ತೆರಡರ ಪರಿಮಿತಿಯಲ್ಲಿ ಇಡಿಯ ವಿಶ್ವ ಸಂಗೀತವೇ ಬರುತ್ತದೆ. ನಮ್ಮ ತಂದೆಯವರೂ ಇದೇ ಅಭಿಪ್ರಾಯವಿಟ್ಟು ಕೊಂಡಿದ್ದರು.”
  • ಪಿಟೀಲು ಭಾರತೀಯ ವಾದ್ಯವೇ ? ”

“ ಇದು ಭಾರತೀಯವೆಂದೇ ನನ್ನ ಅಭಿಪ್ರಾಯ. ಇದನ್ನು ನಾವು ನಾಗವಾದ್ಯವೆಂದು ಕರೆಯಬಹುದು. ನೋಡಿ, ಪಿಟೀಲಿನ ಆಕಾರವೇ ನಾಗದ ಹಾಗಿದೆ. ನಾಗದ ತಲೆಯಮೇಲೆ ಲಿಂಗ, ಕಮಾನೇ ಈಶ್ವರನ ತ್ರಿಶೂಲ. ನಾಲ್ಕು ತಂತಿಗಳೇ ನಾಲ್ಕು ಪ್ರಾಣಸ್ವರಗಳು, ಜೀವನೆಂಬ ನಾದಸಮುದ್ರವನ್ನು ಭಗವಂತ ತನ್ನ ತ್ರಿಶೂಲದಿಂದ ಕಡೆಯುತ್ತಾನೆ ” ರಾಜಪ್ಪನವರು ಹೆಚ್ಚು ಮಾತನಾಡುವ ಸ್ವಭಾವದವರಲ್ಲ. ಆತ್ಮ ಪ್ರಶಂಸೆಮಾಡಿಕೊಳ್ಳುವುದು ಅವರಿಗೆ ಬಾರದು. ಅವರ ಮನೋಭಾವ ವಿದ್ಯಾರ್ಥಿ ಮನೋಭಾವ. ಆದರೆ ರಾಜಪ್ಪನವರು ಪಿಟೀಲುವಾದ್ಯದಲ್ಲಿ