ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಿ. ಟಿ. ರಾಜಪ್ಪ ೧೮೧ ಸಾಧಿಸಿರುವ ಕಲಾವಿದಗ್ಧತೆ ಭಾರತಕ್ಕೆ ಕೀರ್ತಿ ತರುವಂತಹದು. ಅವರ ವಾದ್ಯದ ಶ್ರುತಿಶುದ್ದತೆ, ನಾದಮಾಧುರ್ಯ, ಸ್ವರಾಂದೋಲನ, ಲಯವಿನ್ಯಾಸ ಬೆರಗುಗೊಳಿಸುತ್ತವೆ. ನುಡಿಸುವಾಗ ನಾದದಲ್ಲಿ ತಲ್ಲೀನರಾಗುತ್ತಾರೆ. ಜನರಿಗೆ ಪ್ರಿಯವಾಗುವಂತೆ ನುಡಿಸುವುದಕ್ಕೆ ಕಲೆಯ ಸತ್ವವನ್ನೇ ಅವರ ಮುಂದಿಟ್ಟು ರಂಜಿಸುವುದೊಳ್ಳೆಯದು ಎಂಬುದನ್ನು ರಾಜಪ್ಪನವರು ತಪ್ಪದೆ ಅನುಸರಿಸು ತ್ತಾರೆ. ತಾಯಪ್ಪನವರು ಗಳಿಸಿದ ಕಲಾಸಿದ್ದಿ, ಕೀರ್ತಿಯನ್ನು ಬೆಳಸಿ, ಕರ್ನಾಟಕ ಸಂಗೀತಕ್ಕೆ ಭದ್ರ ಬುನಾದಿ ಹಾಕುತ್ತಿರುವ ಪ್ರತಿಭಾವಂತ ಕಲಾವಿದರಲ್ಲಿ ರಾಜಪ್ಪನವರೊಬ್ಬರೆನ್ನು ವುದರಲ್ಲಿ ಸಂದೇಹವಿಲ್ಲ. * ರಾಜಪ್ಪನವರು ಮುಂಬಯಿ, ಪೂನಾ, ಸಿಲಾನ್, ತಿರುಚಿ, ಮದರಾಸ್, ಕೊಲಂಬೋ ನಗರಗಳಲ್ಲಿ ಅನೇಕಸಾರಿ ಪಿಟೀಲು ಕಛೇರಿ ಮಾಡಿದ್ದಾರೆ. ಇಂದು ಮದರಾಸು, ಮೈಸೂರು, ತಿರುಚನಾಪಳ್ಳಿ ಎ. ಐ. ಆರ್, ಸ್ಟೇಷನ್ನು ಗಳಲ್ಲಿ ಮೇಲಿಂದ ಮೇಲೆ ನುಡಿಸುತ್ತಾರೆ. * ಪಿಟೀಲು ವಾದ್ಯವನ್ನು ಹ ದಿ ನಾ ರಾ ಣೆ ಭಾರತೀಯ ವಾದ್ಯ ಮಾಡಿಕೊಂಡು, ಅದರ ಕಲಾಸೌಂದರ್ಯವನ್ನು ಅರ್ಥ ಮಾಡಿಕೊಂಡು ಕೀರ್ತಿಶೇಷ ಗೋವಿಂದಸ್ವಾಮಿ, ತಾ ಯ ಓ ನ ವ ರು, ಪುಟ್ಟಪ್ಪನವರು ಅದಕ್ಕೊಂದು ನೆಲೆಯನ್ನು ಕಲ್ಪಿಸಿಕೊಟ್ಟರು. ಶ್ರೀಗಳಾದ ದ್ವಾರಂ ವೆಂಕಟಸ್ವಾಮಿನಾಯಿಡು, ಶಿವರುದ್ರಪ್ಪನವರು, ರಾಜಮಾಣಿಕ್ಯಂಪಿಳ್ಳೆ ಮೊದಲಾದ ವಿದ್ವಾಂಸರು ಅದರ ವ್ಯಾಪ್ತಿಯನ್ನು ವಿಸ್ತರಿಸಿದರು. ಪಿಟೀಲು ನಾದ್ಯದ ಭವಿಷ್ಯವನ್ನು ಸಂಶೋಧಿಸುತ್ತಿರುವ ಜಿಜ್ಞಾಸುಗಳಲ್ಲಿ ರಾಜಪ್ಪನವರು ಗಣನೀಯರಾಗಿದ್ದಾರೆ. ಪಿಟೀಲಿನ ಮೂಲಕ ಅವರು ಅರಸುತ್ತಿರುವ ಸತ್ಯಸೌಂದರ್ಯದ ನಿಧಿ ಅವರಿಗೆ ದೊರೆಯಲೆಂದು ನಾನು ಮನಃಪೂರ್ವಕವಾಗಿ ಹಾರೈಸುತ್ತೇನೆ.