ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೫ ಪಿ. ಸುಬ್ಬರಾವ್ ೧೯೪೯ರಲ್ಲಿ ಒಂದು ವರ್ಷಕಾಲ 'ಕಲಾಮಂದಿರ'ದ ಅಧ್ಯಾಪಕರಾಗಿದ್ದರು. ಈಗ ಸ್ವಂತ ಚಿತ್ರಗಳ ನಿರ್ಮಾಣಕ್ಕೆ ಎಲ್ಲಾ ಕಾಲವನ್ನೂ ವಿನಿಯೋಗಿಸುತ್ತಿದ್ದಾರೆ. - ಸುಬ್ಬರಾಯರು ಪುಣೆಯ ಗೋಂದಲೇಕರ್‌ ಅವರ ಶಿಷ್ಯರಾಗಿದ್ದಾಗಲೇ ಆಧುನಿಕ ಚಿತ್ರಕಲಾಭಿರುಚಿ ಅವರಲ್ಲಿ ಆರಂಭವಾಯಿತು. ಆಗ ಮುಂಬಯಿಯ ಕಲಾಶಾಲೆಯಲ್ಲಿ ಕುಶಲತೆಗೆ ಹೆಚ್ಚು ಪ್ರಾಧಾನ್ಯವಿತ್ತೇ ವಿನಾ ಕ್ರಿಯಾಕಲೆ ಗಾಗಲಿ ವೈಯಕ್ತಿಕ ಪ್ರತಿಭೆಗಾಗಲಿ ಪ್ರಾಧಾನ್ಯವಿರಲಿಲ್ಲ. ಮುಂಬಯಿ ಸಂಪ್ರದಾಯದ ಕು ತ ಲ ತೆ ಸುಬ್ಬರಾಯರನ್ನು ಅತೃಪ್ತರನ್ನಾಗಿಮಾಡಿತು. ತಂತ್ರಶುದ್ದಿ ದೊರಕಿಸಿಕೊಂಡು ಸ್ವತಂತ್ರ ಮಾರ್ಗದಲ್ಲಿ ಮನಸ್ಸಿನ ಭಾವನೆ, ಚಿಂತನೆಗಳನ್ನೂ ವ್ಯಕ್ತಮಾಡಲು ಸುಬ್ಬರಾಯರು ನಿರ್ಧರಿಸಿದರು. - ಸುಬ್ಬರಾಯರ ಕಲಾಭಿಜ್ಞತೆಯನ್ನು ಅವರ ಚಿತ್ರಗಳ ಮೂಲಕವೇ ಮಾಡಿಕೊಳ್ಳುವುದು ಒಳ್ಳೆಯದು. ಸುಬ್ಬರಾಯರ ಕೃತಿಗಳನ್ನು ಸ್ಕೂಲವಾಗಿ ಐದು ವಿಭಾಗ ಮಾಡಬಹುದು : ಹಳ್ಳಿಯ ಜೀವನ ಚಿತ್ರಗಳು, ಸಾಮಾಜಿಕ ಜೀವನ ಚಿತ್ರಗಳು, ಪ್ರಕೃತಿ ದೃಶ್ಯ, ಭಾವನಾತ್ಮಕ ಚಿತ್ರಗಳು, ಸಮಸ್ಯಾತ್ಮಕ ಚಿತ್ರಗಳು. : ೧. ಹಳ್ಳಿಯ ಜೀವನ ಚಿತ್ರಗಳು : ಮೂರ್ತಿ ನಂ ತ ಕಲಾ ಸೌಂದರ್ಯಕ್ಕೆ ಅವರ 'ಬಣ್ಣದ ಮಡಿಕೆಗಳು' ನಿದರ್ಶನವಾಗಿದೆ. ಹಿನ್ನೆಲೆ ಯಲ್ಲಿ ಪ್ರಕೃತಿಯ ದೂರದೃಶ್ಯ. ಅತ್ತ ಮ ರ ಗ ಳ ಸಾಲು. ಮಧ್ಯೆ ನವಿಲುಗರಿಯಂತೆ ರೆಕ್ಕೆ ಬಿಚ್ಚಿಕೊಂಡು ನಿಂತಿರುವ ಮರ. ಅದನ್ನು ಬಳಸಿ ಎರಡು ಕಡೆಯಲ್ಲಿಯೂ ನದಿ ಹರಿಯು ದೆ. ಕಮಲಪತ್ರಗಳು, ಕಮಲ ಪುಷ್ಪಗಳು ಅಲ್ಲಲ್ಲಿ ನೀರಿನೊಂದಿಗೆ ಚಲ್ಲಾಟವಾಡುತ್ತಿವೆ. ಬಣ್ಣ ಬಣ್ಣಗಳಿಂದ ಅಲಂಕೃತವಾದ ನೀರಿನ ಕೊಡಗಳನ್ನು ಹೊತ್ತುಕೊಂಡು ಇಬ್ಬರು ಹಳ್ಳಿಯ ಮುಗ್ಗೆ ಯರು ನಿಂತಿದ್ದಾರೆ. ಅವರಲ್ಲಿ ಕಿರಿಯಳು ತನ್ನ ಕೈ ಕಡಗವನ್ನು ಸರಿಪಡಿಸಿಕೊಳ್ಳುತ್ತಿದ್ದಾಳೆ. ಹಿರಿಯಳ ಮುಖ ಕಾಣುವುದಿಲ್ಲ. ಅವಳ ನಿಲುವಿಕೆಯ ಭಂಗಿಯ ಕಡೆಗೆ ಚಿತ್ರಶಿಲ್ಪಿ ನಮ್ಮ ಲಕ್ಷವೆಳೆದಿದ್ದಾರೆ. * ಸೋದರಿಯರು ' ಹಳ್ಳಿಯ ಶ್ರಮ ಜೀ ವಿ ಗ ಳ ಚಿತ್ರ. ಹಿನ್ನೆಲೆಯಲ್ಲಿ ಎತ್ತುಗಳು ನಿಂತಿವೆ. ಬಿಳಿಯ ಹಸುವಿನ ಮುಂದೆ ಹಳ್ಳಿಯ ಹೆಣ್ಣು ಕುಳಿತು