ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ಸಿ. ಸುಬ್ಬರಾವ್ ೨. ಸಾಮಾಜಿಕ ಜೀವನ ಚಿತ್ರಗಳು : ಈ ಸ೦ ಕ್ಕಿ ಯಲ್ಲಿ ಸುಬ್ಬರಾಯರು ರಚಿಸಿರುವ (ತಾಯಿ-ಮಗು' ಅವರ ಕಲಾಕೃತಿಯಾಗಿದೆ. ತಾಯಿ-ಮಗು ಭಾರತೀಯ ಚಿತ್ರಗಾರರಿಗೆ ಅತ್ಯಂತ ಪ್ರಿಯವಾದ ವಸ್ತು, ಅಜಂತೆಯ ಚಿತ್ರಗಾರರು, ರಜಪೂತ, ಮೊಘಲ, ಚಿತ್ರಗಾರರಲ್ಲದೆ ಆಧುನಿಕರಲ್ಲಿ ಅವನೀಂದ್ರ ಠಾಕೂರ್, ನಂದಾಲಾಲ್ ಬಸು, ದೇವಿಪ್ರಸಾದ ರಾಯಚೌಧುರಿ, ಜಾಮಿನಿರಾಯ್, ಅಬ್ದುಲ್ ರಹಮಾನ್ ಚುಕ್ತಾ ಮೊದಲಾದವರು ಈ ವಸ್ತುವನ್ನು ಚಿತ್ರಿಸಿದ್ದಾರೆ. ಎಷ್ಟು ಮಂದಿ ಚಿತ್ರ ಗಾ ರ ರು, ಎಷ್ಟು ಸಲ ಚಿತ್ರಿಸಿದರೂ ಬೇಸರ ಬರಿಸದ ವಸ್ತು ತಾಯಿ-ಮಗು, ಸುಬ್ಬರಾಯದ ಚಿತ್ರದಲ್ಲಿ ಹಿನ್ನೆಲೆಯಲ್ಲಿ ತಾಯಿ ಕುಳಿತಿದ್ದಾಳೆ. ತಾಯಿಯುದ್ದಕೂ ಮರು ನಿಂತಿದೆ. ಮಗುವನ್ನು ಅಲಂಕರಿಸಿ, ಕಂಕುಳಿಗೆ ಪುಸ್ತಕದ ಚೀಲ ತಗುಲಿ ಶಾಲೆಗೆ ಕಳಿಸುವುದರಲ್ಲಿದ್ದಾಳೆ. ಮಗು ಹೊರಡುವ ಮುನ್ನ ತಾಯಿಯೊಮ್ಮೆ ಅಪ್ಪಿ ಕೊಂಡಿದ್ದಾಳೆ. ಮಗು ಮೃದುವಾಗಿ ತಾಯಿಯ ಕಪೋಲಗಳ ಮೇಲೆ ಬೆರಳಾಡಿಸುತ್ತಿದೆ. ಮಗುವಿನ ಮುಖ ತಾಯಿಯ ಮುಖವನ್ನು ಪೂರ್ಣವಾಗಿ ಮುಚ್ಚಿ ಬಿಟ್ಟಿದೆ. ತಾಯಿ ಮಗುವಿನಲ್ಲಿ ಲಿ ನ ವಾ ಗಿ ದ್ದಾ ಳೆ೦ ದು ಶಿಲ್ಪಿ ಸೂಚಿಸುತ್ತಿದ್ದಾರೆ. (ಒಳಸಂಚು' ಚಿತ್ರದಲ್ಲಿ ಶಿಲ್ಪಿ ವಿಸ್ತಾರ ಭೂಮಿಕೆ ತೆ 'ದುಕೊಂಡಿದ್ದಾರೆ. ಮನೆಯ ಒಳಅಂಗಳ, ಹಿಂಬದಿಯಲ್ಲಿ ಹೆಂಗಳೆಯರು ಗುಂಪು ಗುಂಪಾಗಿ ಗುಪ್ತಾಲೋಚನೆ ನಡೆಸಿದ್ದಾರೆ. ಮುಂಬದಿಯಲ್ಲಿ ಇಬ್ಬರು ಸಮವಯಸ್ಕರಾದ ಹೆಣ್ಣು ಮಕ್ಕಳು ಆಪ್ತಾಲೋಚನೆ ನಡೆಸುತ್ತಿದ್ದಾರೆ. ಒಳಸಂಡೇ ಆಗಿರಬಹುದು. ಒಂದು ಪಕ್ಕದಲ್ಲಿ ನೀರಿನಕೊಡ ಉರುಳಿ ನೀರು ಚೆಲ್ಲಿಹೋಗಿದೆ. ಅತ್ತ ಲಕ್ಷವಿಲ್ಲ. ತಾಯಿಯ ತೊಡೆಯ ಮೇಲೆ ಮಗು ಕೈ ಯೂರಿಕೊಂಡು ಆಸಕ್ತಿಯಿಂದ ತಾಯಿಯ ಚಿತ್ರವರ್ಣನೆ ಕೇಳುತ್ತಿದೆ. ಪ್ರಕೃ'ದೃಶ್ಯ, ಮನೆಯೊಳಗಣ ನೋಟ ಹಾಗೂ ವ್ಯಕ್ತಿಚಿತ್ರಗಳ ಮಧುರ ಮೇಳವನ್ನು ಚಿತ್ರಶಿಲ್ಪಿ ಈ ಕೃತಿಯಲ್ಲಿ ಸಾಧಿಸಿದ್ದಾರೆ. ಇನ್ನು ಚಿಂತೆಯಿಲ್ಲ” ಹೆಚ್ಚು ಗಭೀರವಾದ ವಸ್ತುವಿನ ಮೇಲಣ ಚಿತ್ರ. ಮಗಳು ದುಃಖಿತಳಾಗಿ ಬಂದು ತಾಯಿಯ ಮರೆಹೊಕ್ಕಿದ್ದಾಳೆ. ಅವಳು ಕೆನ್ನೆ ಮುಟ್ಟಿಕೊಳ್ಳುತ್ತಿರುವುದನ್ನು ನೋಡಿದರೆ ಗಂಡಹೊಡೆದಂತೆ ಕಂಡುಬರುತ್ತದೆ. ಮರೆಹೊಕ್ಕ ಮಗಳ ಮನೋವೇದನೆಗೆ ತಾಯಿಯ ಕರುಣಾಪೂರಿತ ಕಂಬನಿ ಸಿದೌಷದವಾಗಿದೆ.