ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ceses ಕರ್ನಾಟಕದ ಕಲಾವಿದರು ಸಹಾನುಭೂತಿ ಬಯಸುವ ಮಗಳ ಭಂಗಿ, ಅನುಕಂಪ ಸೂಚಿಸುವ ತಾಯಿಯ ಮುಖಭಾವ ಶಕ್ತಿಯುತವಾಗಿವೆ. ( ಅರಳುವ ಹೂಗಳು' ಶಿಲ್ಪಿ ಯ ಸೌಂದರ್ಯಾನುಭೂತಿಯ ಪ್ರತೀಕವಾಗಿದೆ. ವನಪ್ರಾಂತ್ಯವೆಲ್ಲಾ ಹೂಗಳಿಂದ ಶೋಭಿತವಾಗಿದೆ. ಗಿಡಮರಗಳಲ್ಲಿ ಹೂವರಳುತಿದೆ-ಕೊಳದಲ್ಲಿ ಕ ಮ ಲ ಆರಳು ದೆ. ಆ ಬನಸಿರಿಯನ್ನು ನೋಡುತ್ತ ಇಬ್ಬರು ಯುವತಿಯರು ಮೈ ಮರೆತಿದ್ದಾರೆ. ಅವರ ಸೌಂದರ್ಯ ನೋಡಿ, ಮರೆಯಲ್ಲಿ ನಿಂತ ಯುವಕ ಮೈ ಮರೆತಿದ್ದಾನೆ. ಅವನ ಮನಸ್ಸಿನಲ್ಲಿ ಒಂದು ಪ್ರಶ್ನೆ-ಯಾವ ಸೌಂದರ್ಯ ಚೆನ್ನು ? ಬನದ ಸೂಸಿರಿಯೋ ?ಹೆಣ್ಣಿನ ಸೌಂದರ್ಯ ಸಿರಿಯೊ ? • ನಿರೀಕ್ಷಣೆ? ಮಧ್ಯವಯಸ್ಸು ದಾಟಿದ ತಾಯಿ ಬಾಗಿಲಿನ ಅರೆಮರೆಯಲ್ಲಿ ನಿಂತು ಕಾಯುತ್ತಿದ್ದಾಳೆ. ಊಳಿಗಕ್ಕೆ ಹೋದ ಗಂಡನಿಗೋ ?-ಶಾಲೆಗೆ ಹೋದ ಕಂದನಿಗೊ ? ಆ ಹಳ್ಳಿಯ ಹೆಣ್ಣಿನ ಮುಖಮುದ್ರೆಯಲ್ಲಿ ಸಂಸಾರಜೀವನದ ಸಾರಸರ್ವಸ್ವವನ್ನೇ ಶಿಲ್ಪಿ ತುಂಬಿದ್ದಾರೆ. ೩. ಪ್ರಕೃತಿ ದೃಶ್ಯ : : ಓ ! ಆ ಇರುಳು ' ಸಂಧ್ಯಾ ಸಮಯವನ್ನು ನಿರ್ದೇಶಿಸುವ ಪ್ರಕೃತಿನೋಟ ಹಿನ್ನೆಲೆಯಲ್ಲಿ ದಟ್ಟವಾದ ಮರಗಿಡಗಳು, ಅವುಗಳ ಮುಂಭಾಗದಲ್ಲಿ ನದಿ ಮಂದಗಮನದಿಂದ ಸಾಗುತ್ತದೆ. ಮುಂಬದಿಯಲ್ಲಿ ಒಂದು ಆರಾಮತಾಣ. ಮಂಟಪದ ಮುಂಭಾಗದಲ್ಲಿ ಮೂವರು ಚೆಲುವೆಯರು ವಿಶ್ರಾಂತಿ ಪಡೆಯುತ್ತಿದ್ದಾರೆ. ಇಲ್ಲಿ ವ್ಯಕ್ತಿಗಳಿಗಲ್ಲ ಪ್ರಾಧಾನ್ಯ ಪ್ರಕೃತಿಗೆ. ( ಕೆಂಪು ಆಕಾಶ > ನಿಸರ್ಗದ ಪ್ರಮವಿಲಾಸವನ್ನು ಪ್ರತಿಬಿಂಬಿಸುವ ಚಿತ್ರ. ಪ್ರಕೃತಿ ವಿವಿಧ ವರ್ಣವೈಖರಿಯನ್ನು ಬೆಳಗುತ್ತಾ ಹಸಿರಿನಿಂದ ಹೂವಿಂದ ತುಂಬಿ ತೊನೆಯುತ್ತಿದೆ. ಆ ಚೆಲುವಿನ ಬಲೆಯಲ್ಲಿ ಒಂದು ಹರಿಣಿ, ಪ್ರಕೃತಿಯ ಚೆಲುವಿನ ಸಿರಿಯನ್ನು ನೋಡುತ್ತ ಹರಿಣಿ ವಿಭ್ರಾಂತವಾಗಿಲ್ಲ. ತಲೆಯೆತ್ತಿ ದಿಟ್ಟಿಸಿ ನೋಡಿ " ನಾನೇನು ಕಡಿಮೆ ಎಂದು ಕೇಳುತ್ತಿದೆ. ೪. ಭಾವನಾತ್ಮಕ ಚಿತ್ರಗಳು: ( ಮುಕ್ತಿ ಮಾರ್ಗ' ದಲ್ಲಿ ಮಾನವ ಅಜೇಯನಾಗಿ ಬೆಳೆದಿದ್ದಾನೆ. ಪ್ರತಿಲೋಕವನ್ನೇ ಸೃಷ್ಟಿ ಮಾಡಿದ್ದಾನೆ. ತನಗೆ ಬೇಕಾದುದನ್ನು ದೋಚಿಕೊಂಡಿದ್ದಾನೆ. ಇದರಿಂದ