ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೯ ಪಿ. ಸುಬ್ಬರಾವ್ ಅವನಿಗೆ ತೃಪ್ತಿ-ಶಾಂತಿ ದೊರಕಿದೆಯೇ ? ಬೇಕೆನ್ನುವಷ್ಟು ದಿನವೂ ಬವಣೆ `ಹರಿಯುವುದಿಲ್ಲ. ಬೇಡವೆನ್ನುವುದರಲ್ಲಿ ಶಾಂತಿ ಅಡಗಿದೆ. ಬೇಡುವವನ ಎಂದಿದ್ದರೂ ಅತೃಪ್ತನೇ ! ನೀಡುವ ಮಾನವನ ಮನಸ್ಸು ಶಾಂತಿಯರಮನೆ ಯಾಗುತ್ತದೆ. • ಭಂಗ' ಚಿತ್ರದಲ್ಲಿ ಕವಿ ತಲೆಯಮೇಲೆ ಕೈ ಹೊತ್ತು ನಿಂತಿದ್ದಾನೆ. ಅವನ ಚಿತ್ತೈಕಾಗ್ರತೆಗೆ ಭಂಗ ಬಂದಿದೆ. ಯೋಗ, ಭೋಗ ಪರಾಕ್ರಮ, ವಿಲೋಭನೆ ಮೂರ್ತಿ ಪಡೆದು ಅವನ ಮನಸ್ಸನ್ನು ಕದಡುತ್ತಿವೆ. ವಿಚಾರಸರಂಪರೆಯ ಗೊಂದಲಕ್ಕೆ ಬಿದ್ದ ಕವಿಯ ಮುಖದಲ್ಲಿ ಅಸಹನೀಯ ಯಾತನೆ ಕಂಡು ಬರುತ್ತಿದೆ. ( 1) ೫. ಸಮಸ್ಯಾತ್ಮಕ ಚಿತ್ರಗಳು : ಆಧುನಿಕ ಜೀವನದ ಕೆಲವು ಸಮಸ್ಯೆಗಳ ಬಗ್ಗೆ ಚಿತ್ರತಿ ವಿಚಾರಮಾಡಿದ್ದಾರೆ. ಘರ್ಷಣೆ ” ಯಲ್ಲಿ ಅವರು ಸಾಂಕೇತಿಕವಾಗಿ ಅಣ್ಣತಮ್ಮಂದಿರ ಕಲಹವನ್ನು ಚಿತ್ರಿಸಿದ್ದಾರೆ. ಇಬ್ಬರೂ ಕೊಡಲಿ ಹಿಡಿದು ಮರ ಉರುಳಿಸಲು ಉದ್ಯುಕ್ತರಾಗಿದ್ದಾರೆ. ಎದುರಿಗೆ ಮುದಿ ತಾಯಿ ಕಂಬನಿಗರೆಯುತ್ತಿದ್ದಾಳೆ. ಜಾತಿ, ಮತ, ವಿಚಾರ ಪರಂಪರೆಯ ಹೆಸರಿನಲ್ಲಿ ನಡೆಯುವ ಘರ್ಷಣೆ ಮೂಲವೃ ಕಕ್ಕೇ ಕೊಡಲಿ ಯಾಗುತ್ತದೆಂದು ಅಲ್ಲಿ ಸೂಚಿಸುತ್ತಿದ್ದಾರೆ. ( ಶಾಂತಿ'ಯಲ್ಲಿ ಶಾಂತಿದೇವಿ ತನ್ನಿಬ್ಬರು ತುಂಟುಮುಕ್ಕಳನ್ನು ಬಲವಾಗಿ ಹಿಡಿದಪ್ಪಿಕೊಂಡಿದ್ದಾಳೆ. ಒಬ್ಬನ ಕೈಯಲ್ಲಿ ತಕ್ಕಡಿ, ಇನ್ನೊಬ್ಬನ ಕೈಯಲ್ಲಿ ಖಡ್ಡ-ಇಬ್ಬರೂ ಲೋಕನಾಶಕ್ಕೆ ಹೊರಟಿದ್ದಾರೆ. ಅವರೆದುರು ಶಾಂತಿ ದೇವಿಯ ಜೀವನಕ್ಕಿ - ಪಾರಿವಾಳ ಕುಳಿತಿದೆ. ಪಿ. ಸುಬ್ಬರಾಯರು ಚಿತ್ರಕಲೆಯ ವ್ಯಾಪ್ತಿಯನ್ನು ವಿಸ್ತರಿಸಲು ಮಾಡುತ್ತಿರುವ ಸಾಧನ ಗಮನಾರ್ಹವಾದುದಾಗಿದೆ. ಅವರ ಚಿತ್ರಗಳಲ್ಲಿ ಭಾವನೆಗೆ, ಅನುಭವಕ್ಕೆ ಪ್ರಾಧಾನ್ಯ, ವ್ಯಕ್ತಿಗಳ ದೇದಚಿತ್ರಿಸುವುದರ ಕಡೆಗೆ ಅವರು ಹೆಚ್ಚು ಲಕ್ಷ ಕೊಡುವುದಿಲ್ಲ. ವ್ಯಕ್ತಿಯ ಮನಸ್ಸಿನ ಒಳಗೆ ಆಗುತ್ತಿರುವ ಆಂದೋಲನ, ಅನುಭವವನ್ನು ಚಿತ್ರಿಸಲು ಅವರು ಪ್ರಯತ್ನಿಸಿದ್ದಾರೆ. ಅವರು ಅಳವಡಿಸಿಕೊಂಡಿರುವ ತಂತ್ರವೂ ಭಾವಕ್ಕಧಿನವಾಗಿಯೇ ಇದೆ. ವರ್ಣಗಳ ಸಾಮರಸ್ಯಕ್ಕೂ ಕತ್ತಲೆ, ಬೆಳಕಿನ ನಿಯೋಜನೆಗೂ ಅವರು ಹೆಚ್ಚು ಗಮನ ಕೊಡುತ್ತಾರೆ. 0 1