ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೬ ಕರ್ನಾಟಕದ ಕಲಾವಿದರು ನಿರ್ದೆಶಿಸುತ್ತಿದ್ದರು. ಮಹಾಭಾರತದ ಶಿಲ್ಪಿಯನ್ನು ಮತ್ತೆ ಕಡೆದು ನಮ್ಮ ಮುಂದೆ ನಿಲ್ಲಿಸುತ್ತಿದ್ದರು. ಸ್ವಾನಿಸಲಾನ ಹೇಳಿದಂತೆ ಪಾತ್ರ ಸತ್ಯವ್ಯಕ್ತಿ ಯಾಗಿ ನಮ್ಮ ಮುಂದೆ ನಿಲ್ಲುತ್ತಿದ್ದ. ಹರಿಶ್ಚಂದ್ರನ ಉದಾತ್ತ ಗಾಂಭೀರ್ಯ, ಸತ್ಯ ಸಂ ಧ ತೆ, ಅಚಲ ಮನೋದಾರ್ಥ ಸಿದ್ದರಾಮಪ್ಪನವರಿಗೆ ಕ ರ ತ ಲಾ ಮ ಲ ಕ ವಾ ಗಿ ತ್ತು. ಚಂದ್ರಮತಿಯನ್ನು ಮಾಡುವಾಗ ದೊರೆ ತೋರುವ ದಾರ್ಢ, ಮಗನ ಕಳೇಬರವನ್ನು ಕಂಡು ಮರುಗುವ ತಂದೆಯ ಅಂತಃಕಣ ಅವರ ಪ್ರತಿಭೆಯ ಮೂಸೆಯಲ್ಲಿ ಪುಟಗೊಂಡು ಕಂಗೊಳಿಸು ದ್ದ ವು. ಸಿದ್ದರಾಮಪ್ಪನವರ ಕಾರ್ಯಕ್ಷೇತ್ರ ವಿಜಾಪುರ ಜಿಲ್ಲೆಗೇ ಅಡಕವಾಯಿತು. ೦ಪೆನಿಯ ಸ್ಥಿತಿಯಲ್ಲಿ ಅದನ್ನು ಹೊರಗೆ ದೊಡ್ಡ ಊರುಗಳಿಗೆ ತರಲು ಅವರು ಧೈರ್ಯಮಾಡಲಾಗುತ್ತಿರಲಿಲ್ಲ. ಹೀಗಾಗಿ ಬಹಳ ಜನರಿಗೆ ಅವರ ಪ್ರತಿಭೆಯನ್ನು ಕಾಣುವ ಸುಯೋಗ ದೊರೆಯಲಿಲ್ಲ. ೧೯೪೭ ರಲ್ಲಿ ತಮ್ಮ 'ಚಂದ್ರಹಾಸ' ಚಿತ್ರಕ್ಕೆ ಶಾಂತೇಶ ಪಾಟೀಲರು ಸಿದ್ದರಾಮಪ್ಪನವರನ್ನು ಎಳೆದು ಅವರಿಂದ ದುಷ್ಟ ಬುದ್ದಿ ಪಾತ್ರ ಅಭಿನಯಿಸಿಸಿ, ಕನ್ನಡ ಕಲಾರಂಗಕ್ಕೆ ಮಹೋಪಕಾರ ಮಾಡಿದ್ದಾರೆ. ಕನ್ನಡ ಕಲಾವಿಭೂತಿಯೊಬ್ಬನ ಪ್ರತಿಭೆಯ ಕೆಲವಂಶವಾದರೂ ಜೀವಂತವಾಗಿರುವಂತೆ ಮಾಡಿದ್ದಾರೆ. ದುಷ್ಟಬುದ್ದಿ ಯ ಸಂಧಾನಚಾತುರ್ಯ, ಸ್ವಾರ್ಥಸಾಧನೆ, ಕ್ಷೌರ್ಯಗಳನ್ನು ಸಿದ್ದರಾಮಪ್ಪನವರು ಚಿತ್ರಪಟದಲ್ಲಿ ಅನಾದೃಶವಾಗಿ ಚಿತ್ರಿಸಿದ್ದಾರೆ. , ಸಿದ್ದರಾಮಪ್ಪನವರು ಕನ್ನಡ ನಾಟಕ ಕಲೆಗೆ ಅಸ್ತಿಭಾರ ಹಾಕಿದ ಮಹಾನಟರ ವರ್ಗಕ್ಕೆ ಸೇರಿದವರು. ಎ. ವಿ. ವರದಾಚಾರ್ಯ, ಮಹಮ್ಮದ್ ಪೀರ್, ರಂಗನಾಥಭಟ್ಟ, ಸದಾಶಿವ ಗರೂಡ ಇವರ ಮಟ್ಟದಲ್ಲಿ ನಿಲ್ಲುವ ಪ್ರತಿಭೆ ಸಿದ್ದರಾಮಪ್ಪನವರದು. ಕನ್ನಡ ಜನತೆಯಲ್ಲಿ ಸಾಕಷ್ಟು ಕಲಾಭಿಮಾನ ಮೂಡಿದ್ದರೆ ಅವರ ಪ್ರತಿಭೆಯ ಮಹಾಪ್ರಸಾದ ನಾಡವರಿಗೆ ಸಾಕಷ್ಟು ದೊರೆಯುತ್ತಿತ್ತು. , ಸಿದ್ದರಾಮಪ್ಪನವರ ದೈವದ ಗುಣವೆಂದರೆ ಅವರ ಧ್ವನಿ. ಅದರ ಸಂಪೂರ್ಣ ಸ್ವಾಮ್ಯ ಅವರದಾಗಿತ್ತು. ಮಾತುಗಳಲ್ಲಿ ರಸ ತುಂಬುವ ರಹಸ್ಯ,