ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನುಬಂಧ-೧ ಶ್ರೀ ಮಿಣಜಿಗಿಯವರ 'ರಾಗಮಾಲಾ' ಚಿತ್ರಗಳು ಗಜಪೂತ ಸಂಪ್ರದಾಯದ ಚಿತ್ರಗಳಲ್ಲಿ 'ರಾಗಮಾಲಾ' ಚಿತ್ರಗಳಿಗೂ, * (ನಾಯಕ-ನಾಯಿಕಾ' ಭಾವದ ಚಿತ್ರಗಳಿಗೂ ವಿಶಿಷ್ಟ ಸ್ಥಾನವಿದೆ. ಅಜಂತಾ ಚಿತ್ರಕಲೆ ಕೇವಲ ಸಂಪ್ರದಾಯವನ್ನನುಸರಿಸಿದರೆ ಮುಘಲ ಚಿತ್ರಕಲೆ ಸಂಪ್ರದಾಯವನ್ನು ನಿರಾಕರಿಸಿ ಪ್ರಗತಿಮಾರ್ಗವನ್ನು ಹಿಡಿಯಿತು. ಅಜಂತಾ ಕೇವಲ ಪಾರಮಾರ್ಥಿಕವಾದರೆ, ಮುಘಲ ಚಿತ್ರಕಲೆ ಕೇವಲ ಪ್ರಾಪಂಚಿಕ ನಾಯಿತು, ಇ ವ ರ ಡ ರ ಮಧ್ಯೆ ಸೇತುವೆ ಕಟ್ಟಿ 'ಸುನರ್ಣಮಾಧ್ಯಮ' ಮಾರ್ಗವನ್ನು ಅಳವಡಿಸಿಕೊಂಡ ಕೀರ್ತಿ ರಜಪೂತ ಚಿತ್ರಗಾರರಿಗೆ ಸೇರಬೇಕು. ಹದಿನಾರನೆಯ ಶತ ಮಾ ನ ದ ಮಧ್ಯಭಾಗದಿಂದ ಸಂಭತ್ತನೆಯ ಶತಮಾನದವರೆಗೆ, ಅಂದರೆ ಸುಮಾರು ಮೂರುವರೆ ಶತಮಾನಕಾಲ ಈ ಚಿತ್ರ ಕಲಾ ಸಂಪ್ರದಾಯ ಭಾರತವನ್ನು ಬೆಳಗಿಸಿತು, - ರಜಪೂತ ಚಿತ್ರಗಾರರು ರಾಮಾಯಣ, ಮಹಾಭಾರತ, ಭಾಗವತ ಶೈವಪುರಾಣಗಳು, ವೈಷ್ಣವ ಪುರಾಣಗಳಿಂದ ವಸ್ತುಗಳನ್ನಾಯ್ದುಕೊಂಡದ್ದಲ್ಲದೆ ನಿತ್ಯಜೀವನವನ್ನೂ ಆಧಾರವಾಗಿಟ್ಟುಕೊಂಡರು. ಅವರಲ್ಲಿ ನಗರಗಳನ್ನನ ಲಂಬಿಸಿದ ಒಂದು ಪದ್ದತಿ, ಹಳ್ಳಿಗಳನ್ನವಲಂಬಿಸಿದ ಒಂದು ಪದ್ದತಿ ಪ್ರತ್ಯೇಕವಾಗಿ ಬೆಳೆದಹಾಗೆ ಕಂಡುಬರುತ್ತದೆ. ನಾಯಕ-ನಾಯಿಕಾ ಭಾವದ ಚಿತ್ರಗಳನ್ನು ಶ್ರೀಮಂತರ ಆಶ್ರಯದಲ್ಲಿ ನಾಗರಿಕ ಚಿತ್ರಗಾರರೂ, ದೇವದೇವತಾ ಚಿತ್ರಗಳನ್ನು ಹಳ್ಳಿಗಳಲ್ಲಿ (ಸಹ) ವಾಸಮಾಡುತ್ತಿದ್ದ ಚಿತ್ರಗಾರರೂ ರಚಿಸಿರ ಬಪುದು. ಆದರೆ ಇಬ್ಬರೂ ಒಂದೇ ಬುಡಕಟ್ಟಿಗೆ ಸೇರಿದುದರಿಂದ ಅವರ ತಂತ್ರದಲ್ಲಿ ವಿಶೇಷ ವ್ಯತ್ಯಾಸ ಕಂಡುಬರುವುದಿಲ್ಲ.” 'ರಾಗಮಾಲಾ' ಚಿತ್ರಗಳು ಭಾರತೀಯ ಚಿತ್ರಕಲಾ ಇತಿಹಾಸದಲ್ಲಿ ಮಾತ್ರವೇ ಅಲ್ಲ, ಜಗತ್ತಿನ ಚಿತ್ರ ಕಲಾ ಇತಿಹಾಸದಲ್ಲಿ ಅನ್ಯಾದೃಶವಾಗಿವೆ. ಈ ಸಂಪ್ರದಾಯವನ್ನು ಅನುಸರಿಸಿದವರೂ, ಅನುಕರಿಸಿದವರೂ ವಿರಳ. ಈಗ್ಗೆ ಕೆಲವು ವರ್ಷಗಳ ಹಿಂದೆ ರಾಬರ್ ಕ್ರೈಸ್, ಪಮೇಲಾ ಕೋಲ್ಮನ್ ಸ್ಮಿತ್