ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಗಮಾಲಾ ಚಿತ್ರಗಳು ಎಂಬ ಇಂಗ್ಲೀಷ್ ಚಿ ತ ಗಾ ರ ರು ಟೊಪಿನ್, ಷುನುನ್ ಮೊದಲಾದ ವಾಗ್ಗೇಯಕಾರರ ಕೃತಿಗಳ ಆಧಾರದ ಮೇಲೆ ಚಿತ್ರಗಳನ್ನು ಬರೆಯಲೆತ್ನಿಸಿದರು. ಆದರೆ ಇಂಥ ಪ್ರಯತ್ನ ಯೂರೋಪಿನಲ್ಲಿ ದೊಡ್ಡ ಪ್ರಮಾಣದ ಮೇಲೆ ಆಗದಿರು. ವುದು ಗಮನಾರ್ಹವಾದುದಾಗಿದೆ. ಹತ್ತೊಂಭತ್ತನೆಯ ಶತಮಾನದ ಕೊನೆಗೆ ಭಾರತದಲ್ಲಿ ಚಿತ್ರಕಲಾ ಪುನರೋದಯ ಆರಂಭವಾಯಿತು. ಕಲ್ಕತ್ತಾ, ಲಕ್ಕೋ, ಲಾಹೋರ್ ಶಾಂತಿನಿಕೇತನ, ಮದರಾಸು, ಮುಂಬಯಿಗಳಲ್ಲಿ ಚಿತ್ರ ಶಾಲೆ ಗ ಳೂ, ಚಿತ್ರಗಾರರೂ ಸ್ವತಂತ್ರ ಭಾರತ ಸಂಪ್ರದಾಯದ ಆವಿಷ್ಕಾರಕ್ಕೆ ಬದ್ಧ ಕಂಕಣ. ರಾದರು. ಆದರೆ ಅವರ ಲಕ್ಷ ರಾಗಮಾಲಾ ಶ್ರೇಣಿಯ ಕಡೆಗೆ ಬೀಳಲಿಲ್ಲ. ಪ್ರಾಯಶಃ ಈ ಕೆಲಸದ ಹೊರೆ ಹುಬ್ಬಳ್ಳಿಯ ಕಲಾಮಂದಿರದ ಪ್ರಾಧ್ಯಾಪಕ ರಾದ ಶ್ರೀ ಮಿಣಜಗಿಯವರಿಗೆ ಮಾಸಲಾಗಿತ್ತೆಂದು ಕಾಣುತ್ತದೆ. ಸೌತ್ ಕೆನ್ಸಿಂಗ್ಟನ್ನಿನಲ್ಲಿರುವ 'ರಾಯಲ್ ಕಾಲೇಜ್ ಆಫ್ ಆರ್' ಸಂಸ್ಥೆಯಲ್ಲಿ ಸರ್ ವಿಲಿಯಂ ರಾಥನ್ ಸ್ಟೀನರ 8 ಪ್ಯ ರಾ ಗಿ ಕಲಾಭ್ಯಾಸಮಾಡಿ ಬಂದ ಮಿಣಜಿಗಿಯವರು ಕೆಲವು ಕಾಲ ಮುಂಬಯಿಯಲ್ಲಿದ್ದು ಕನ್ನಡನಾಡಿನ ಕರೆಗೆ ಓಗೊಟ್ಟು ಹುಬ್ಬಳ್ಳಿಗೆ ಬಂದು ನೆಲಸಿ ಒಂದು ಕಲಾ ಮಂ ದಿ ರ ನ ನ್ನು ನಡೆಸುತ್ತಿದ್ದಾರೆ. ಅವರ ಪ್ರತಿಭಾವಂತ ಕುಂಚದಿಂದ ಉದಯಿಸಿರುವ ಅಮೃತ ಪುಷ್ಪಗಳೆಂದರೆ 'ರಾಗಮಾಲಾ' ಚಿತ್ರಗಳು. ರಾಗಮಾಲಾ ಚಿತ್ರಗಳ ಕಡೆಗೆ ನಮ್ಮ ಸಂಗೀತ ವಿದ್ವಾಂಸರ ಲಕ್ಷ ಬೀಳ ಬೇಕಾಗಿತ್ತು. ದೃಶ್ಯ ಸಂಗೀತ (Visualised Music) ಎನ್ನಿಸಿ ಕೊಂಡಿರುವ 'ರಾಗಮಾಲಾ' ಚಿತ್ರಗಳು ಸಂಗೀತ ವಿದ್ವಾಂಸರಿಗೂ ಸ್ಫೂರ್ತಿ ಕೊಡಲು ಸಮರ್ಥವಾಗಿವೆ. ಕಲಾ ವಿಮರ್ಶಕರೂ ' ರಾಗಮಾಲಾ' ಚಿತ್ರಗಳನ್ನು ಉಪೇಕ್ಷೆ ಮಾಡುತ್ತಾ ಬಂದಿದ್ದಾರೆ. ಅವ್ಯಕ್ತನಾದಕ್ಕೆ ವ್ಯಕ್ತಿಸ್ವರೂಪಕೊಡುವುದು ಶುದ್ಧ ಅವಿವೇಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಗಮಾಲಾ ಚಿತ್ರಗಳು ರಾಗದೇಹವನ್ನು ಚಿತ್ರಿಸುತ್ತವೆ ಎಂದು ಅವರು ಭಾ ವಿ ಸಿ ರು ವು ದೇ ಈ ಉಪೇಕ್ಷೆಯ ಮೂಲಕಾರಣ. ರಾಗ ರಾಗಿಣಿಗಳು ದೇಶ, ಪ್ರಕೃತಿ, ಋತುಮಾನ, ರಸಭಾವಗಳನ್ನೂ