ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಗಮಾಲಾ ಚಿತ್ರಗಳು son ದಿಗ್ವಿಜಯವನ್ನು ಕುರಿತು ಚಿಂತಿಸುತ್ತಾನೆ.”1 ಮಾಲಕಂಸ ರಾಗದಲ್ಲಿ ಕರುಣ, ಕೌದ್ರರಸಗಳಿಗೆ ಪ್ರಾಧಾನ್ಯ, ಹೌ ದ ನಾ ದ ರೋ ವೀರದ್ರನಲ್ಲ; ನಸುಕೋಮಲವಾದ ಪ್ರಣಯ ರೌದ್ರ, ಮಿಣಜಿಗಿಯವರು ತಮ್ಮ ಚಿತ್ರದಲ್ಲಿ ನಲ್ಲೆ ಮುನಿಸುಗೊಂಡು ನಲ್ಲನನ್ನು ಒಲಿಸಿಕೊಳ್ಳುತ್ತಿರುವ ಭಾವ ಬೀರಿದ್ದಾರೆ. ಅವಳು ಗೆಳತಿಯರ ನೆರವು ತೆಗೆದುಕೊಂಡು ಹಾಡಿದ್ದಾಳೆ, ಕುಣಿದಿದ್ದಾಳೆ. ಆದರೂ ನಲ್ಲನ ಮುನಿಸು ಹೋಗಿಲ್ಲ. ವಿನೀತಳಾಗಿ ಅವನನ್ನು ಅಪ್ಪಿದ್ದಾಳೆ. ಗಂಡು ಇನ್ನೂ ತನ್ನ ಗಡುಸುತನ ಬಿಟ್ಟಿಲ್ಲ. ಅಪ್ಪುಗೆಯಲ್ಲಿರುವ ಅವಳ ಎಡಗೈ ಯನ್ನೂ ಅವನು ಕಿತ್ತು ಹಾಕಲೆತ್ನಿಸಿರುವುದು ಗಮನಾರ್ಹವಾಗಿದೆ. ' , (೨) ಗುರ್ಜರಿ : ಕವಚತೊಟ್ಟು ನೃತ್ಯ ಭಂಗಿ ಯ ಲ್ಲಿ ತನ್ನ ಗೆಳತಿಯರೊಂದಿಗೆ ಹೆಣ್ಣು ಆಡುತ್ತಿರುವಂತೆ ಈ ರಾ ಗ ಭಾವ ಎಂದು ಗಂಗೂಲಿಯರು ರಾಗ ಸಾಗರ'ದ ಆಧಾರದಿಂದ ಹೇಳುತ್ತಾರೆ. ರಾಗ ಗುರ್ಜರಿ, ಮೇಘ ರಾಗದ ಮಾತೃದೇವತೆ. ತಾವರೆ ಕೊಳದಲ್ಲಿ ತಾವರೆಯ ತೆಪ್ಪದಲ್ಲಿ ಈಕೆ ಕುಳಿತಿದ್ದಾಳೆ. ಮೇಘಗಳು ಬಂದು ಅವಳ ಸುಕೋಮಲ ದೇಹವನ್ನಾಚ್ಯಾ ದಿಸುತ್ತವೆ. ತನ್ನ ಗೆಳತಿಯರೊಡಗೂಡಿ ಆಕೆ ಕಮಲದ ಮೇಲೆ ಕುಳಿತು ಹಾಡು, ಕುಣಿತದಲ್ಲಿ ಮಗ್ನಳಾಗಿದ್ದಾಳೆ ಎಂದು ಅತೀಯಾ ಬೇಗಂ ವರ್ಣಿಸುತ್ತಾರೆ. ಮಿಣಜಿಗಿಯವರು ತಮ್ಮ ಚಿತ್ರದಲ್ಲಿ ಕೊಟ್ಟಿರುವ ಕಲ್ಪನೆಯೇ ಬೇರೆ ವಿಧವಾಗಿದೆ. ನಲ್ಲನೊಂದಿಗೆ ಕಾದಾಡಿ ಮುನಿಸಿಕೊಂಡ ನಲ್ಲಿ ನೀರಿಗೆ ಬಂದಿದ್ದಾಳೆ. ಅವನಿಗೆ ಮನೆಯಲ್ಲಿ ಜೀವ ನಿಲ್ಲದು. ಅವಳನ್ನು ಸಂತೈಸುವುದಕ್ಕೆ ನಲ್ಲ ಕೊಳದ ಬಳಿಗೇ ಬಂದಿದ್ದಾನೆ. “ ಒಲ್ಲೆನೆನ್ನುವ ಅವಳ ಕೈಮುದ್ರೆ', 'ಬಾರೆಂದು' ವಿನೀತನಾಗಿ ಅವನು ಪ್ರಾರ್ಥಿಸುವ ಭಾವ ಮಧುರವಾಗಿ ಚಿತ್ರಿತವಾಗಿವೆ. * (೩) ಪಟನಂಜರಿ : ದ್ರಾಕ್ಷಿ ಬಳ್ಳಿ ಗ ಳ ಮಧ್ಯೆ, ಅತ್ತಿತ್ತ ಸಖಿಯರಿಂದಾವೃತಳಾಗಿ, ಕಿರೀಟ ಕಂಕಣ ಧರಿಸಿ ಪಟಮಂಜರಿ ನಿಂತಿದ್ದಾಳೆ ಮಿಣಜಿಗಿಯವರ ಚಿತ್ರದಲ್ಲಿ ಅಭಿಸಾರಿಕೆಯ ಭಾವ ವ್ಯಕ್ತವಾಗಿದೆ. ನಲ್ಲೆ i Ragas and Raginis: 0.C. Gangoly (P. 135) 2 Sangit of India : Atiya Begum (P. 66) 3 Ragas and Raginis : Gangoly (P. 108)