ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಗಮಾಲಾ ಚಿತ್ರಗಳು Jok ಅವಲಂಬಿಸಿದೆ. ಪುಂಗಿ ಊದುವ ಜೋಗಿಣಿಯ ಬಾಯಿತುಂಬ ಗಾಳಿ ತುಂಬಿರುವುದು ಗಮನಾರ್ಹವಾದುದಾಗಿದೆ. (೬) ಮೇಘ ಮಲ್ಲಾರ : ಮಲ್ಲಾರರಾಗಿಣಿ ಮೇಘ ರಾಗವನ್ನು ನುಡಿಸಿ ಮಳೆ ಬರಿಸುತ್ತಾಳೆ. ನೀರಿಲ್ಲದೆ ಪರಿತಪಿಸುತ್ತಿರುವ ಜಿಂಕೆಗಳು, ನವಿಲು, ಬಕಗಳು ವರ್ಷಾಗಮನವನ್ನು ನಿರೀಕ್ಷಿಸುತ್ತಿವೆ. ಮೋಡಗಳು ಕವಿಯುತ್ತಿವೆ. ಮಿಣಜಿಗಿಯವರ ಚಿತ್ರ ಮೇಘರಾಗದ ವೀರರಸವನ್ನು ಪ್ರತಿಪಾದಿಸುತ್ತಿಲ್ಲ. ಮಲ್ದಾರ ರಾಗಿಣಿಯ ಕರುಣಾರಸವನ್ನು ಪ್ರತಿಪಾದಿಸುತ್ತಿದೆ. - ಮಿಣಜಿಗಿಯವರ ಈ ದಿವ್ಯ ಕೃತಿಗಳು ಆಧುನಿಕ ಭಾರತೀಯ ಚಿತ್ರಕಲೆಯ ಅತ್ಯಮೂಲ್ಯ ರತ್ನಗಳೆಂದರೆ ಉತ್ಪಕ್ಷೆಯಲ್ಲ. ವ್ಯಕ್ತಿಗಳನ್ನು ಚಿತ್ರಿಸುವಾಗ ಭಾವೋಚಿತವಾಗಿ ಅವರು ಉಪಯೋಗಿಸುವ ತಂತ್ರ, ವಸ್ತ್ರ, ಆಭರಣ ಅಲಂಕರಣಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಕು ಸು ರಿ ಯ ಕೆಲಸ, ಮೃಗಪಕ್ಷಿಗಳನ್ನು ಚಿತ್ರಿ ಸು ವಾ ಗ ಅವರು • ತೋರುವ ಅಂತಃಕರಣ, ವರ್ಣನಿಯೋಜನೆಯಲ್ಲಿ ಅವರು ಸಾಧಿಸಿರುವ ಸರಳ ಸೌಂದರ್ಯ, ಸಮರಸ, ಮಹಾಸಾಧನೆಯ ಕಳಿತ ಫಲಗಳಾಗಿವೆ. ಸೌಂದರ್ಯಾರಾಧಕರಾದ ಮಿಣಜಿಗಿಯವರು ಪ್ರಕೃತಿಯ ಸೌಂದರ್ಯ ಭಂಡಾರವನ್ನು ಸೂರೆಮಾಡಿ ಧಾರಾಳವಾಗಿ ಹಂಚುತ್ತಿದ್ದಾರೆ. ಅವರ ಚಿತ್ರಗಳಲ್ಲಿ ಭಾರತೀಯ ಜೀವನದ ಸೊಗಸು, ಸೌಂದರ್ಯ, ಸುಭಗತೆ ಮೈಮರೆತು ರಾರಾಜಿಸಿವೆ. ಈ ರಸಋಷಿಯ ಸೇವೆಯಿಂದ ಕನ್ನಡನಾಡು, ಭಾರತದ ಕೀರ್ತಿ ಮತ್ತಷ್ಟು ವಿಸ್ತರಿಸಿದೆ. 'ಜನಪ್ರಗತಿ'.... ದೀವಳಿ ವಿಶೇಷ ಸಂಚಿಕ, ೧೯೫೧