ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಚನ ಸಾಹಿತ್ಯ ಮತ್ತು ಸಂಗೀತ ೨೮೫ ವಚನಸಾಹಿತ್ಯ ಪಾಂಡಿತ್ಯ, ಅನುಭಾವಪೂರ್ಣವಾಗಿರುವುದರಿಂದ ಅದರ ಮಹತ್ವ ಇಮ್ಮಡಿಯಾಯಿತು. :: ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ' ವಚನಸಾಹಿತ್ಯ ನಿರ್ಮಾಣದ ಮಹಾಮನೆಯಾಯಿತು, ಪ್ರತಿನಿತ್ಯ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಕಾಠ್ಯಕ್ರಮವನ್ನು ಶಾಂತರಸ ಸಂಗ್ರಹಿಸುತ್ತಿದ್ದ, ಮಾರನೆಯ ದಿನ ಅದನ್ನು ಮಹಾಸಭೆಯಲ್ಲಿ ಓದಿ ತಿದ್ದಪಡಿ ಸ್ವೀಕರಿಸಿ, ಬರೆದಿಡುತ್ತಿದ್ದ. ಭಕ್ತ ಜನ ಅದರ ಪ್ರತಿಮಾಡಿಕೊಂಡು ಕಂಠಪಾಠ ಮಾಡಿಕೊಳ್ಳುತ್ತಿದ್ದರು. ೧೫ನೆಯ ಶತಮಾನದಲ್ಲಿ ವೀರಶೈವ ಸಾಹಿತ್ಯ ಪುನರೋದ್ದಾರ ಕಾರ್ಯ ಚಾಮರಸನ ಪ್ರೋತ್ಸಾಹದಿಂದ ನಡೆಯಿತು. ಕೆಂಚವೀರಣೋಡೆಯ ವಚನಸಾಹಿತ್ಯವನ್ನು ಸಂಗ್ರಹಿಸಿ ತನ್ನ ಲೋಕಮಾನ್ಯ 'ಶೂನ್ಯಸಂಪಾದನೆ' ಗ್ರಂಥವನ್ನು ವಿರಚಿಸಿದ. 'ಶೂನ್ಯ ಸಂಪಾದನೆ'ಯನ್ನು ವೀರಶೈವ ಸಾಹಿತ್ಯದ ಪ್ರಮಾಣ ಗ್ರಂಥವೆಂದು ಸ್ವೀಕರಿಸುವುದರಲ್ಲಿ ಅಡ್ಡಿಯಿಲ್ಲ. ವಚನಗಳನ್ನು ಸಮಕಾಲೀನರೂ, ತರುವಾಯದವರೂ ಕಂಠಪಾಠ. ಮಾಡುತ್ತಿದ್ದರೆಂದು ಆಧಾರ ದೊರೆಯುತ್ತದೆ. ಸಾಮಾನ್ಯವಾಗಿ ಗದ್ಯ ಸಾಹಿತ್ಯ ಕಂಠಪಾಠ ಮಾಡಲು ಸಾಧ್ಯವಿಲ್ಲ. ಕಂಠಪಾಠಕ್ಕೂ ಅನುಕೂಲವಾಗುವಂತೆ ವಚನಸಾಹಿತ್ಯ ಗದ್ಯದ ಲಾಲಿತ್ಯ, ಸೌಲಭ್ಯ, ಪದ್ಯದ ಶ್ರಾವಕತೆಗಳನ್ನು ಸಮಾವೇಶಗೊಂಡವು ಎಂದು ನಾವು ಊಹಿಸಬಹುದು. ವಚನಗಳನ್ನು ನೆನಪಿಗೆ ತಂದುಕೊಂಡ ಭಕ್ತರು ಅ ವು ಗಳ ನ್ನು ಸ್ತೋತ್ರಪಾಠದಂತೆ ಉಪಯೋಗಿಸಿಕೊಳ್ಳುತ್ತಿದ್ದರು ; ಪಾರಾಯಣ ಮಾಡು ತಿದ್ದರು. ಹಲವರ ಕಿವಿಯ ಮೇಲೆ ವಚನ `ಳು ಬಿದ್ದು ಮನಸ್ಸಿನಲ್ಲಿ ಉಳಿಯುವಂತೆ ಹಾಡುತ್ತಿದ್ದರು. ಅನುಭವ ಮಂಟಪದಲ್ಲಿ ಕಿನ್ನರಿ ಬೊಮ್ಮಯ್ಯ ನೆಂಬ ಶರಣ ವಾದ್ಯ ಸಮೇತವಾಗಿ ವಚನಗಳನ್ನು ಹಾಡುತ್ತಿದ್ದನೆಂದು ಉಲ್ಲೇಖವಿದೆ. ಆದರೆ ಅವನು ಹಾಡುತ್ತಿದ್ದ ಬಗೆಯಾವುದು ? ವಚನಗಳನ್ನು ಗಮಕದ ರೀತಿಯಲ್ಲಿ ಹಾಡುತ್ತಿದ್ದನೋ, ತಾಳಯುಕ್ತವಾಗಿ ಕೀರ್ತನೆಗಳಂತೆ ಹಾಡುತ್ತಿದ್ದನೋ ನಮಗೆ ತಿಳಿದುಬರುವುದಿಲ್ಲ. ಹನ್ನೆರಡನೆಯ ಶತಮಾನಕ್ಕೆ ಪೂರ್ವದಲ್ಲಿಯೇ ಕನ್ನಡದಲ್ಲಿ ವಿಪುಲವಾಗಿ ಹಾಡುಗಬ್ಬಗಳು ವಿರಚಿತವಾದವು. ನಿಜಗುಣ ಶಿವಯೋಗಿ ಸಹಸ್ರಾರು