ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಚನ ಸಾಹಿತ್ಯ ಮತ್ತು ಸಂಗೀತ ೨೦೭ ವಚನಗಳು ಹಾಡುವದಕ್ಕೆ ವಿರಚಿತವಾದುವಲ್ಲ, ಕೇವಲ ಓದುಗಾರಿಕೆಗೆ ಮಾತ್ರ ಅದು ತಕ್ಕುದೆಂದು ಹಟಹಿಡಿಯುವುದು ವಿವೇಕದ ಲಕ್ಷಣವಲ್ಲ. ಆದರೆ ಅವುಗಳು ಹಾಡುವುದಕ್ಕೆ ಅಳವಡುವುದೆಂದು ಮನಸ್ಸು ಬಂದಂತೆ ಮಾಡುವುದೂ ನ್ಯಾಯವಲ್ಲ. * ಸಂಗೀತದಲ್ಲಿ ರಾಗ, ತಾಳಕ್ಕೆ ಎಷ್ಟು ಪ್ರಾಧಾನ್ಯವೋ ಸಾಹಿತ್ಯಕ್ಕೂ ಅಷ್ಟೇ ಪ್ರಾಧಾನ್ಯವಿದೆ. ಸಾಹಿತ್ಯ ವಿರಹಿತವಾದ ಸಂಗೀತ ಮೂಗಿಲ್ಲದ ಸುಂದರಿಯಂತೆ ! ರಾಗ, ತಾಳ ಸಾಹಿತ್ಯಕ್ಕೆ ಪೋಷಕವಾಗುವಂತೆ ಅವುಗಳನ್ನು ಉಪಯೋಗಿಸಿಕೊಳ್ಳಬೇಕು. ತಪ್ಪು ರಾಗ, ತಾಳದಲ್ಲಿ ವಚನಗಳನ್ನು ಹಾಡಿದರೆ ಅವು ಕರ್ಕರವಾಗುವಂತೆ ದಾಸರ ಪದಗಳೂ, ತ್ಯಾಗರಾಜರ ಕೀರ್ತನೆಗಳೂ, ಸದಾರಂಗನ ಚೀಸುಗಳೂ ಕರ್ಣಕಠೋರವಾಗುತ್ತವೆ. ವಚನಗಳನ್ನು ಸಂಗೀತಕ್ಕೆ ಅಳವಡಿಸುವ ಪ್ರಯತ್ನ ಕಾಲುಶತಮಾನ ದಿಂದ ಕನ್ನಡನಾಡಿನಲ್ಲಿ ನಡೆದಿದೆ. ತಜ್ಞರಲ್ಲದ ಸಂಗೀತಗಾರರ ಕೈಗೆ ಸಿಕ್ಕಿ ಅವು ವಿಕ್ಷತವಾಗಿವೆ. ಉತ್ತರ ಕರ್ನಾಟಕದ ಅರೆನುರಿತ ಗವಗಳು ಮರಾಟ ಪದಗಳ ಸಿಲುಬೆಗೆ ವಚನಗಳನ್ನೇರಿಸಿ ಅವುಗಳ ಅಂದಚೆಂದ ಕೆಡಿಸಿದ್ದಾರೆ. ಒಂದು ದೃಷ್ಟಾಂತ ತೆಗೆದುಕೊಳ್ಳೋಣ. ಸರ್ವಧರ್ಮದ ಮೂಲ ದಯೆಯೆಂದು ಸಾರಿದ ಬಸವಣ್ಣನ ಒಂದು ಮಹತ್ವದ ವಚನವಿದೆ. 'ದಯೆಯಿಲ್ಲದ ಧರ್ಮವದಾವುದಯ್ಯ ; ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.' ಇದನ್ನು ಮರಾಟ ಪದದ ಬಗೆಯಲ್ಲಿ ಪಟ್ಟ ದೀಪ ರಾಗದಲ್ಲಿ ಹಾಡಿದರೆ ವಚನಕಾರರಿಗೆ ಘೋರ ಅಪಚಾರಮಾಡಿದಂತಾಗುತ್ತದೆ. ವಚನದ ನಡೆಗನುಗುಣವಾದ ಶಾಂತಿರಸ ಪ್ರಧಾನವಾದ ರಾಗದಲ್ಲಿ ವಿಳಂಬವಾಗಿ ವಚನವನ್ನು ಹಾಡಿದರೆ ಅದರ ಪೂರ್ಣಕಳೆ ಹೊರಬೀಳುತ್ತದೆ. * ವಚನಗಳ ಅರ್ಥಕುಂದದಂತೆ ಸಶಾಸ್ತ್ರೀಯವಾಗಿ ಕ ನಾ ೯ ಟ ಕ ದ ಪದ್ದತಿಯಲ್ಲಿ ಅವುಗಳನ್ನು ಹಾಡುವ ಪ್ರಯತ್ನವನ್ನು ೧೯೩೭ನೆಯ ಇಸವಿಯಲ್ಲಿ ಸಂಗೀತವಿದ್ವಾನ್ ಚಕ್ರಕೋಡಿ ನಾರಾಯಣಶಾಸ್ತ್ರಿಗಳವರು ಮಾಡಿದರು. ಅದಕ್ಕೂ ಪೂರ್ವದಲ್ಲಿ ಆಸ್ಥಾನವಿದ್ವಾನ್ ಸಂಗೀತರತ್ನ ದೇವೇಂದ್ರಪ್ಪನವರು ಕೆಲವು ವಚನಗಳನ್ನು ಸಶಾಸ್ತ್ರೀಯವಾಗಿ ಹಾಡುತ್ತಿದ್ದರು. ರಾಗ ತಾಳಯುಕ್ತ 0 &