ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೮ ಕರ್ನಾಟಕದ ಕಲಾವಿದರು ವಾಗಿ ಅವರು ಕೂಡಿಸಿ ಹಾಡಿದ ವಚನಗಳನ್ನು ಕೇಳಿ ಮೈಸೂರು ಸಂಗೀತ ವಿದ್ವನ್ಮಂಡಳಿ ಬೆರಗಾಯಿತು. ಸುಮಾರು ಅದೇ ಕಾಲಕ್ಕೆ ಕನ್ನಡನಾಡಿನ ಪ್ರತಿಭಾವಂತ ಸಂಗೀತ ವಿದ್ವಾಂಸರಾದ ಸಂಗೀತರತ್ನ ಮಲ್ಲಿಕಾರ್ಜುನ ಮನಸೂರ್ ಅವರು ಔತ್ತರೇಯ ಪದ್ಧತಿಯಲ್ಲಿ ವಚನಗಳನ್ನು ಕೂಡಿಸಿದರು. ತಾಳರಾಗಯುಕ್ತವಾಗಿ ಅವರು ಕೂ ಡಿ ಸಿ ದ “ನೀನೊಲಿದರೆ ಕೊರಡು ಕೊನರುವುದಯ್ಯ' ವಚನ ಎಚ್. ಎಂ. ವಿ. ಕಂಪೆನಿಯಲ್ಲಿ ರಿಕಾರ್ಡೊ ಆಯಿತು. ಮನಸೂರ್‌ ಅವರ ಪ್ರಯತ್ನ ವಚನದ ವ್ಯಾಪ್ತಿಯನ್ನು ತೋರಿಸಿದುದು ಮಾತ್ರವಲ್ಲದೆ, ಕನ್ನಡಿಗರು ಕ್ರಿಯಾತ್ಮಕವಾದ ಒಂದು ಸಂಗೀತ ಸಂಪ್ರದಾಯ ವನ್ನು ಬೆಳಸಿಕೊಳ್ಳಬಹುದೆಂಬುದನ್ನೂ ನಿ ದೆ ೯ : ಶಿ ಸಿ ತು. ರಾಗ, ತಾಳಯುಕ್ತವಾಗಿ ವಚನಗಳನ್ನು ಅರ್ಥಗರ್ಭಿತವಾಗಿ ಹಾಡಬಹುದೆಂಬುದನ್ನೂ ಮನಸೂರ್‌ ತೋರಿಸಿಕೊಟ್ಟು ಮಹೋಪಕಾರ ಮಾಡಿದರು. ಇಂದು ನಮ್ಮ ಕೈಗೆ ಸಹಸ್ರಾರು ವಚನಗಳು ದೊರೆತಿವೆ. ಅವೆಲ್ಲವನ್ನೂ ಒಂದಲ್ಲ ಒಂದು ರಾಗ, ತಾಳದಲ್ಲಿ ಹಾಡುವುದು ಸಾಧ್ಯ. ಕೆಲವು ವಚನಗಳನ್ನು ಜನಬಳಕೆಯಲ್ಲಿರುವ ಆದಿ, ಅಮ್ಮ, ಝುಂಪಾ ತಾಳಗಳಲ್ಲಿ ಹಾಡಬಹುದು ; ಕೆಲವು ವಚನಗಳನ್ನು ಜನ ಬಳಕೆಯಲ್ಲಿಲ್ಲದ ಧನ, ಲಕ್ಷ್ಮಿ, ಗಣೇಶ, ರುದ್ರ ತಾಳಗಳಲ್ಲಿ ಕೂಡಿಸಬಹುದು. ಹಿಂದೆ ಈ ಪ್ರಯತ್ನ ನಡೆದಿಲ್ಲವೆಂದು ಮುಂದೆಯೂ ಆಗಬಾರದೆಂದು ವಾದ ಮಾಡುವುದು ಯಾವ ನ್ಯಾಯ ? ನಮ್ಮ ಸಾಹಿತ್ಯ, ಶಿಲ್ಪ, ಚಿತ್ರಕಲೆ ಪ್ರಾಗತಿಕಮಾರ್ಗವನ್ನನುಸರಿಸಬೇಕೆಂದು ನಾವು ಹಂಬಲಿಸುವಂತೆ ನಮ್ಮ ಸಂಗೀತವೂ ಪ್ರಾಗತಿಕವಾಗಬೇಕೆಂದು ಬಯಸುವುದು ಮಹಾಪರಾಧವೇ ? ಈಗ ವಚನಸಂಗೀತ ಸಶಾಸ್ತ್ರೀಯವಾಗಿರ ದಿದ್ದರೆ ಅದಕ್ಕೆ ಶಾಸ್ತ್ರೀಯರೂಪ ಕೊಡುವುದು ನಾಡಿನ ಕಲಾವಿದರ ಜವಾಬುದಾರಿ. ವಚನ ಸಂಗೀತ ಬೆಳವಳಿಗೆಗೆ ಅಡ್ಡಿ ಬರುವ ಯಾರಾದರೂ ನಾಡಿನ ಸಂಸ್ಕೃತಿಯ ಸಂವರ್ಧನಕ್ಕೆ ಕೊಡಲಿಪೆಟ್ಟು ಕೊಡುತ್ತಿದ್ದಾರೆಂಬುದನ್ನು ಮರೆಯಬಾರದು. ( ನವಯುಗ'ದೀಪಾವಳಿ ಸಂಚಿಕೆ, ೧೯೫೧,