ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನುಬಂಧ-೩ ಲಲಿತಕಲೆಗಳು ಲಿತ, ಆದರ್ಶ, ನೈಸರ್ಗಿಕ ಮೊದಲಾದ ವಿಶೇಷಣಗಳೊಂದಿಗೆ ಕಲೆ ಆ ಶಬ್ದವನ್ನು ನಾವು ಧಾರಾಳವಾಗಿ ಬಳಸುತ್ತ ಬಂದಿದ್ದೇವೆ. ಕಲಾವಿದ ಮಾಡಿದ ಕೃತಿಯನ್ನು ಒಂದು ಶ್ರೇಣಿಗೆ ಸೇರಿಸಿ, ಅದಕ್ಕೆ ಒಂದು ನಿಷ್ಕೃಷ್ಟವಾದ ಹೆಸರು ಕೊಟ್ಟ ಹೊರತೂ ವಿಮರ್ಶಕರಿಗೆ ಸಮಾಧಾನವಿಲ್ಲ. ವಿಷಯ ಅತ್ಯಂತ ವಿಪುಲವೂ ವಿಶಾಲವೂ ಆದುದರಿಂದ ಅದನ್ನು ಒಂದು ಪ್ರಮಾಣದೊಳಗೆ ಅಳವಡಿಸಿದಲ್ಲಿ ಸಾಮಾನ್ಯ ಮನುಷ್ಯ ಅದರ ಅರ್ಥವನ್ನು ಗ್ರಹಿಸಬಹುದೆಂಬ ಉದ್ದೇಶವೂ ಇದಕ್ಕೆ ಕಾರಣವಾಗಿರಬಹುದು, ಇಂದು ನಾವು ಕಲೆಯನ್ನು ಹೆಚ್ಚು ಕಡಿಮೆ ಎರಡು ಭಾಗವಾಗಿ ವಿಂಗಡಿಸಿದ್ದೇವೆ. ಯಾವದು ಕೇವಲ ಮಾನಸಿಕ ಉಲ್ಲಾಸವನ್ನು ಕೊಡುವುದೋ ಅದು ಲಲಿತ ಕಲೆ; ಯಾವದು ಹೊಟ್ಟೆಯ ಹೋರಾಟಕ್ಕೆ ನೆರವಾಗುವುದೋ ಅದು ಉಪಯುಕ್ತ ಕಲೆ. ಲಲಿತಕಲೆ ನಿತ್ಯ ಜೀವನದ ದೃಷ್ಟಿಯಿಂದ ಪ್ರಯೋಜನಕಾರಿಯಲ್ಲ ಎಂಬ ಸಿದ್ದಾಂತ ನಮ್ಮೆದುರು ನಿಲ್ಲುತ್ತದೆ. ಜೀನ್ ಪಾಲ್ ರೀಷರ್‌ ಸಮನ್ವಯ ತರಲೆತ್ನಿಸಿ * ಕಲೆ ಜೀವನದ ಅನ್ನವಲ್ಲಜೀವನದ ಮಧು'ವೆಂದು ಹೇಳುತ್ತಾನೆ. ಮಧುವಿಲ್ಲದೆ ಮನುಷ್ಯನು ಬಾಳಬಹುದು, ಅನ್ನವಿಲ್ಲದೆ ಅವನು ಬದುಕಬಲ್ಲನೇ ಎಂದು ವಿಮರ್ಶಕ ಕೇಳುತ್ತಾನೆ. ಲಲಿತ ಕಲೆಗಳಿಗೆ ದೊರೆತಿರುವ, ದೊರೆಯುತ್ತಿರುವ ಶ್ರೇಷ್ಠ ಸ್ಥಾನವನ್ನು ಟಾಲಸ್ಟಾಯ್, ಎರಿಕ್ ಜಿಲ್ ಒಪ್ಪುವುದಿಲ್ಲ. ಸುಂ ದ ರ ವಾ ಗಿ ದ್ದ ರೂ ನಿಷ್ಟ್ರಯೋಜಕವಾದ ವಸ್ತುವನ್ನು ಸೃಜಿಸುವವನು ಆಲಸಿಗರಾದ ಶ್ರೀಮಂತರ ಕೈಗೂಸು, ಅವನಿಂದ ಜಗತ್ತಿನ ಕಲ್ಯಾಣವಾಗುವುದಿಲ್ಲ ಎಂದು ಅವರು ನಾದಮಾಡುತ್ತಾರೆ. ಈ ವಾದವಿವಾದಗಳ ಸೂಕ್ಷಾರ್ಥ ತಿಳಿಯುವುದಕ್ಕೆ ಮೊದಲು ನಾವು * ಕಲೆಯೆಂದರೇನು' ಎಂದು ಖ ಚಿ ತ ಪ ಡಿ ಸಿ ಕೊಳ್ಳ ಬೇಕು. ಮಾನವ 14