ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೦ ಕರ್ನಾಟಕದ ಕಲಾವಿದರು ಕಲ್ಯಾಣಕ್ಕೆ ಹೇತುವಾದುದು ಕಲೆ ಎಂದು ಟಾಲಸ್ಟಾಯ್, ನಾನವನ ಚಿತ್ರರಂಗ ದಿಗ್ದರ್ಶನವೇ ಕಲೆಯೆಂದು ಹೆಬ್ಬಲ್, ನಿಸರ್ಗದ ರಸಘಟ್ಟಿಯೇ ಕಲೆಯೆಂದು ಬಾಲ್ ಜಾಕ್, ಜೀವನದರ್ಶನ ಮಾಡಿಸುವುದೇ ಕಲೆಯೆಂದು ಹ್ಯಾವಲಾಕ್ ಇಲ್ಲಿನ, ನಾಡಿನ ಸಂಸ್ಕೃತಿಯ ಪ್ರತೀಕವೇ ಕಲೆಯೆಂದು ಸಿ. ಇ. ಎಮ್, ಜೋಡ್, ಆತ್ಮದರ್ಶನ ಮಾಡಿಸುವುದೇ ಕಲೆಯೆಂದು ಅರವಿಂದ ಯೋಗಿಗಳು ಅಭಿಪ್ರಾಯಪಡುತ್ತಾರೆ. ಕಲೆಯ ಸಂಬಂಧ ಜೀವನ, ಧರ್ಮ, ಸಂ ಸ್ಯ ತಿ ಗ ಳೊಂ ದಿ ಗೆ ನಿಕಟವಾಗಿರುವಂತೆ ಕಂಡುಬರುತ್ತದೆ. ಈ ಸಂಬಂಧವನ್ನು ನಾವು ಸ್ವಲ್ಪ ವಿವರವಾಗಿ ವಿಚಾರಮಾಡುವುದಗತ್ಯ. ಕಲಾವಿದನಿಗೂ ಜೀವನಕ್ಕೂ ವಿಚಿತ್ರ ಸಂಬಂಧವೇರ್ಪಟ್ಟಿರುತ್ತದೆ. ಜೀವನವನ್ನು ಒಂದು ಸಮಾಜದ ಮಾನದಂಡದಿಂದ ಅಳೆಯುವಾಗ ಕಲಾವಿದ ಸಮಾಜದ ಮುಖಂಡನೂ ಆಗುತ್ತಾನೆ. ಸಮಾಜಬಾಹಿರನೂ ಆಗುತ್ತಾನೆ. ಸಮಾಜ ನಡಸುನ ಜೀವನವನ್ನು ಅವನು ಒಪ್ಪಬಹುದು, ಒಪ್ಪದಿರಬಹುದು. ಅವನು ಒಪ್ಪಿದಾಗ ಸಮಾಜ ಅವನನ್ನು ಆದರಿಸುತ್ತದೆ. ತನ್ನ ಪ್ರತಿನಿಧಿಯಾಗಿ ಪರಿಗ್ರಹಿಸುತ್ತದೆ. ಸಮಾಜ ರವಿವರ್ಮನಿಗೆ ಕೊಡುವ ಮಾನ್ಯತೆಯನ್ನು ಜಾಮಿನಿ ರಾಯರಿಗೆ ಕೊಡುವುದಿಲ್ಲ. ಸಮಾಜವನ್ನು ಸಮಾಜದ ಕಣ್ಣಿನಿಂದಲೇ ನೋಡುವ ಗುಣ ರವಿವರ್ಮನಿಗೆ ಸಾಧಿಸಿದ್ದರೆ, ಅದನ್ನು ತನ್ನ ಕಣ್ಣಿನಿಂದ ನೋಡುವ ಗುಣ ಜಾಮಿನಿ ರಾಯರಿಗೆ ಸಾಧಿಸಿದೆ. ಜೀವನ ಹಲವು ಬಣ್ಣಗಳನ್ನು ಹಲವು ಬಗೆಯಲ್ಲಿ ಚೆಲ್ಲುವ ಕಾಮನ ಬಿಲ್ಲಿನಂತಿದೆ. ಅದರ ಸಮಗ್ರ ನೋಟ ಸಿಗುವುದು ದುಸ್ತರ. ಸಮಾಜ, ಸಂಪ್ರದಾಯದ ಕಣ್ಣಿನಲ್ಲಿ ಜೀವನವನ್ನು ನೋಡಿದರೆ ಕಲಾವಿದ, ವೈಯಕ್ತಿಕ ಪ್ರತಿಭೆ, ವಿಚಾರಗಳ ಕಣ್ಣಿನಿಂದ ನೋಡುತ್ತಾನೆ. ಅವನ ನೋಟ ಸಂಪ್ರದಾಯದ ನೋಟಕ್ಕಿಂತ ತೀಕ್ಷ. ಅವನು ಇದ್ದುದನ್ನು ನೋಡುವಂತೆ ಇರಬೇಕಾದುದನ್ನೂ ನೋಡುತ್ತಾನೆ. ತನ್ನ ನಿಜರೂಪದರ್ಶನ ಮಾಡಿಸುವ ಕಲಾವಿದನ ಎದೆಗಾರಿಕೆಗೆ ಅಂಜಿ ಸಮಾಜ ಅವನನ್ನು ತುಳಿಯಲೆತ್ನಿಸುತ್ತದೆ. ಆದರೆ ಕಲಾವಿದನ ನೋಟ ಸತ್ಯಪೂರ್ಣವಾದುದೇ ? ಪ್ರತಿಭೆಯ ಪ್ರಭಾವಕ್ಕೆ ಸಿಲುಕಿಯೊ, ಮಾನಸಿಕ ವಿಭ್ರಾಂತಿಯಿಂದಲೋ ಅವನು ಜೀವನದ