ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲಲಿತಕಲೆಗಳು ೨ಎn ವಿಡಂಬನೆಮಾಡುತ್ತಿರಬಾರದೇಕೆ ? ಅವನು ಕಂಡುದು ಸತ್ಯವಾದರೆ ಇತರರು ಕಂಡುದೂ ಸತ್ಯ ವಾ ಗಿ ರ ಬೇ ಕು ? ಸತ್ಯಕ್ಕೆ ಎಷ್ಟು ಮುಖವಿದೆ ? ಪ್ರತಿಯೊಬ್ಬನೂ ತಾನು ಕಂಡುದು, ಆಡುವುದೇ ಸತ್ಯವೆಂದು ಸಾರುತ್ತ ಬಂದರೆ ನಾವು ಯಾವದನ್ನು ಸತ್ಯವೆಂದು ಪರಿಗ್ರಹಿಸಬೇಕು ಎಂಬ ಸಮಸ್ಯೆಗಳು ತಲೆದೋರುತ್ತವೆ. ಸತ್ಯದ ವ್ಯಾಖ್ಯೆ ಬದಲಾಯಿಸುವುದು, ಆದರೆ ಸತ್ಯ ತನ್ನ ಸ್ವರೂಪವನ್ನು ಬದಲಾಯಿಸುವುದಿಲ್ಲ. 'ಏಕಂ ಸತ್ ವಿಪ್ರಾ ಬಹುಧಾವದಂತಿ | ಎಂದು ಹೇಳಿದ ಉಪನಿಷತ್ತಿನ ಋಷಿ ಇದೇ ತತ್ತ್ವವನ್ನು ಮಂಡಿಸುತ್ತಿದ್ದಾನೆ. ಹೇಳುವ ಮಾತು ಹಲವು ಬಗೆಯಾದರೂ ಅದರ ಹಿಂದಣ ಮನೋಭಾವ ಒಂದೇ ಆಗಿರುತ್ತದೆ. ಒಬ್ಬನಿಗೆ ಕಲೆ ದಾರಿತೋರಿಸಬಹುದು, ಇನ್ನೊಬ್ಬನಿಗೆ ಯೋಗ ದಾರಿತೋರಿಸಬಹುದು, ಮಗದೊಬ್ಬನಿಗೆ ಕರ್ಮ ದಾರಿ ತೋರಿಸ ಬದುದು. ಇವರೆಲ್ಲಾ ಮುಟ್ಟುವುದು ಒಂದೇ ಗುರಿಗೆ. ಎರಡು ಭಿನ್ನ ಸಂಪ್ರದಾಯಗಳಿಗೆ ಸೇರಿದ ಗ್ರೀಕರ, ಭಾರತೀಯರ ತತ್ರ ದರ್ಶನದಲ್ಲಿ ಸಮದರ್ಶನ ಕಂಡುಬರುತ್ತದೆ. ಐಕಾನಂದೇಚ್ಚುಗಳಾದ ಗ್ರೀಕರೂ ಸತ್ಯ ಸೌಂದರ್ಯ, ಶೀಲಗಳಿಗೆ ಬೆಲೆಯಿತ್ತರು; ಆಮುಷ್ಮಕಾನಂದೇಚ್ಚುಗಳಾದ ಭಾರತೀಯರು ಸತ್ಯಂ ಶಿವಂ ಸುಂದರಂ ಎಂದು ಸಾರಿದರು. - ಕಲೆಗೆ ಮಾನದಂಡವನ್ನು ಗೊತ್ತುಪಡಿಸುವಾಗ ಟಾಲಸ್ಟಾಯ್ ಮೂರು ಗುಣಗಳ ಕಡೆಗೆ ನಮ್ಮ ಲಕ್ಷವನ್ನೆಳೆಯುತ್ತಾನೆ. ೧) ನಿರ್ಮಾಣವಾಗುವ ಕಲಾಕೃತಿಗೂ, ನಿರ್ಮಾತೃವಾದ ಕಲಾವಿದನಿಗೂ ನಿಕಟವಾದ ನೈತಿಕ ಸಂಬಂಧವಿರಬೇಕು. ೨) ಕಲಾಕೃತಿಯ ಆಕಾರ ಸುಂದರವಾಗಿ 5ವುದಾಗಿರ ಬೇಕು. ಉಚ್ಚಾರಣೆ ಸುಲಭವಾಗಿರಬೇಕು. ೩) ತಾನು ಚಿತ್ರಿಸುವ ವಸ್ತುವಿನ ಬಗ್ಗೆ ಕಲಾವಿದ ಶ್ರದ್ಧಾವಂತನಾಗಿರಬೇಕು. ಅದರಲ್ಲಿನ ಒಳ್ಳೆಯದನ್ನು ಅವನು ಪ್ರೀತಿಸುವವನೂ, ಕೆಟ್ಟದನ್ನು ದ್ವೇಷಿಸುವವನೂ ಆಗಿರಬೇಕು. ಟಾಲಸ್ಟಾಯ್ ಹೆಚ್ಚು ಕಡಿಮೆ ಸತ್ಯ, ಶಿವ, ಸುಂದರ ತತ್ತ್ವವನ್ನು ಒಪ್ಪಿಕೊಂಡು ಮಂಡಿಸುತ್ತಿದ್ದಾನೆ.

  • ಕಲಾಕೃತಿ ಸತ್ಯ ಸೌಂದರ್ಯಗಳಿಂದ ಕೂಡಿದ್ದರೆ ಸಾಲದು, ಅದು ಶಿವಮಯವಾಗಿರಬೇಕು. ಆ ಕೃತಿಯಿಂದ ಲೋಕಕ್ಕೆ ಮಂಗಳ (ಶಿವ) ವಾಗ