ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೨ ಕರ್ನಾಟಕದ ಕಲಾವಿದರು ಬೇಕು ಎನ್ನುವ ಪ್ರಸ್ಥಾನದಿಂದ ಹೊರಡುವ ಕಲಾವಿದ ಇತರ ಜಿಜ್ಞಾಸುಗಳು, ಮುಮುಕ್ಷುಗಳು ಮುಟ್ಟುವ ಗುರಿಯನ್ನೇ ಮುಟ್ಟುತ್ತಾನೆಂಬುದು ಸ್ವತಃಸ್ಸಿದ್ದ.

  • ಸತ್ಯವನ್ನು ಹೇಳು-ಆದರೆ ಹೇಳುವುದನ್ನು ಪ್ರಿಯವಾಗುವಂತೆ ಹೇಳು? ಎನ್ನುವುದು ಭಾರತೀಯರ ಅಭಿಮತ. ಪಾಶ್ಚಾತ್ಯರ ವಿಚಾರವೈಖರಿಗೂ ಭಾರತೀಯರ ವಿಚಾರವಾಹಿನಿಗೂ ಇಲ್ಲಿ ವಿಶೇಷ ಅಂತರ ಕಂಡುಬರುತ್ತದೆ. ಜೀವನವನ್ನು ಹೆಚ್ಚು ಹೆಚ್ಚು ಸುಂದರವಾಗಿ ಮಾಡುತ್ತ ಹೋಗುವುದೇ ಕಲಾ ವಿದನ ಗುರಿ. ಅದರಲ್ಲಿ ತಾಳ್ಮೆಯಿಲ್ಲವೆಂದಲ್ಲ. ಆದರೆ ಕಾಲೈಯನ್ನೆತ್ತಿ ತೋರಿ, ಮೊದಲೇ ವ್ಯಗ್ರವಾಗಿರುವ ಮನಸ್ಸನ್ನು ಮತ್ತಷ್ಟು ವ್ಯಗ್ರ ಮಾಡುವುದರಲ್ಲಿ ಅರ್ಥವಿಲ್ಲ, ಪ್ರಯೋಜನವಿಲ್ಲ. ದುಃಖವಿದೆಯೆನ್ನುವುದನ್ನು ಒಪ್ಪಿಕೊಂಡರೂ ಆ ಕಡೆಗೆ ಲಕ್ಷ್ಯಕೊಡದೆ ಮಾನವ ಕೇವಲ ಆನಂದಸಾಧಕನಾದರೆ ಅವನ ಬಾಳು ಹಸನಾಗುತ್ತದೆ, ರಮ್ಯವಾಗುತ್ತದೆ ಎಂದು ನಂಬಿದ ಭಾರತೀಯರು ರುದ್ರ, ಭೀಭತ್ಸ, ಭಯಾನಕ ರಸಗಳನ್ನು ಗೌಣವಾಗಿ ಭಾವಿಸಿದರು. ಅವರ ಕಾವ್ಯ, ನಾಟಕಗಳೆಲ್ಲಾ ಸುಖಪರ್ಯವಸಾಯಿಯಾದವು. ಗ್ರೀಕ್ ತತ್ತ್ವಜ್ಞಾನದಿಂದ ಸ್ಫೂರ್ತಿಗೊಂಡ ಪಾಶ್ಚಾತ್ಯ ಜಗತ್ತು, ಜೀವನದ ಕಾಳ್ಮೆಯನ್ನು ಕಳೆಯದಿದ್ದರೆ, ಮನವನ್ನು ತೊಳೆಯದಿದ್ದರೆ, ಅದರ ಸೌಂದರ್ಯ ಮಸುಕಾಗುತ್ತದೆ. ಕನ್ನಡಿ ಸ್ಪಷ್ಟವಾಗಿ ಕಾಣಬೇಕಾದರೆ, ಅದಕ್ಕೆ ಹತ್ತಿಕೊಂಡಿರುವ ಹೊಗೆಯ ಅವಕುಂಠನವನ್ನು ನಿವಾರಿಸಬೇಕು. ಜೀವನದಲ್ಲಿ ಶುಚಿ ಅಶುಚಿ, ಹೊಲಸು ಪರಿಶುದ್ಧತೆ, ಆಕಾರ ವಿಕಾರಗಳೆರಡೂ ಸಮಸಮವಾಗಿ ಸೇರಿಕೊಂಡಿರುತ್ತವೆ. ಅವುಗಳನ್ನು ವಿಂಗಡಿಸಿ ತೋರಿಸಬೇಕಾದುದಗತ್ಯ. ಸತ್ಯಾರ್ಥಿಯಾದವನು ಹೊಲಸಿನ ಕಡೆ ಕಣ್ಣು ಮುಚ್ಚಬಾರದು. ಅದನ್ನು ದಿಟ್ಟತನದಿಂದ ನೋಡಿ, ಅದರ ಮಾಲಿನ್ಯವನ್ನು ಕಳೆಯಬೇಕು ಎಂದು ವಾದಮಾಡಿದರು. ಇಬ್ಬನ್, ಬ್ಯೂ, ಷಾ, ಫ್ಲಾಬೋ, ವ್ಯಾಕ್ಕರ್ ಇವರ ಕೃತಿಗಳು ಈ ಉದ್ದೇಶದಿಂದಲೇ - ರೂಪುಗೊಂಡಿವೆ.

ಕಲೆಗೂ ಧರ್ಮಕ್ಕೂ ಇರಬೇಕಾದ ಸಂಬಂಧ ವಾದಗ್ರಸ್ತವಾದುದು. ಮಾನವನಿಗೆ ಖಜುಬೆಳ್ಳೆಯ ಪರಿಚಯ ಮಾಡಿಸುವ ಜೀವನಕಲೆಯೇ ಧರ್ಮವೆಂದು ಒಪ್ಪಿಕೊಂಡರೆ ಈ ಸಂಬಂಧದಲ್ಲಿ ಅವಿನಾಭಾವ ಕಂಡುಬರುತ್ತದೆ. ಜಗತ್ತಿನ ವಿವಿಧಭಾಗಗಳ ಶ್ರೇಷ್ಠ ಕಲೆ ಧರ್ಮದಿಂದಲೇ ಪ್ರೇರಿತವಾದುದು.