ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲಲಿತಕಲೆಗಳು ೨೧೨ ಮೈಖೇಲ್ ಆ೦ಜೆಲೋ, ಪೊಟಾಸಿಲಿ, ರಾಫೆಲ್, ರೆಂಬ್ರಾಂಟ್, ಅಜಂತೆಯ ಚಿತ್ರಕಾರರು ಮೊದಲಾದ ಕುಂಚ ಶಿಲ್ಪಿಗಳೂ, ಬಾಕ್, ಬಿಡೋವನ್, ಮೊಜಾರ್, ತ್ಯಾಗರಾಜ, ಪುರಂದರ, ಮೊದಲಾದ ನಾದಶಿಲ್ಪಿ ಗಳೂ, ವಾಲ್ಮೀಕಿ, ಪರಿಹರ, ಬೈಕ್, ಡನ್, ಅಕೆ೦ಸಿಸ್, ಅಕ್ಕಮಹಾದೇವಿ ಮೊದಲಾದ ಶಬ್ಬ ಶಿಲ್ಪಿಗಳೂ ಧರ್ಮದಿಂದಲೇ ಸ್ಫೂರ್ತಿಗೊಂಡವರು. ಆದರೆ ಧರ್ಮದ ದಾರಿಯಲ್ಲೆ ಕಲೆ ನಡೆಯಬೇಕು, ಕಲೆ ಧರ್ಮದ ಛಾಯಾನುವರ್ತಿ ಯಾಗಿರಬೇಕು ಎಂಬ ವಾದ ತಕ್ಕುದಲ್ಲ. ಧರ್ಮದ ಸಮಗ್ರ ನೋಟವನ್ನು ತಂದುಕೊಳ್ಳುವುದು ಎಷ್ಟು ಕಷ್ಟವೋ ಜೀವನದ ಸಮಗ್ರ ನೋಟವನ್ನು ತಂದುಕೊಳ್ಳುವುದೂ ಅಷ್ಟೇ ಕಷ್ಟ. ಧರ್ಮದ ಪ್ರಚಂಡಪ್ರಭಾವವನ್ನು ನೋಡಲಾಗದ ಮಾನವ ಅದರ ಒಂದು ಅಂಶವನ್ನೇ ಆಶ್ರಯಿಸಿ ತೃಪ್ತನಾಗು ತ್ತಾನೆ. ಅದೇ ಪರಿಪೂರ್ಣವೆಂಬ ಕಲ್ಪನೆ, ಭ್ರಾಂತಿ ಅವನಲ್ಲಿ ಮೊಳೆಯುತ್ತದೆ. ಶ್ರೀ ಕೃಷ್ಣನ ವಿಶ್ವರೂಪದರ್ಶನಮಾಡಲಸಮರ್ಥನಾದ ಪಾರ್ಥ ಸ್ವಾಮಿ – ನನಗೆ ಈ ಬೃಹತ್ ನೋಟ ಸಾಕು. ನೀನು ನನ್ನ ಗೆಳೆಯ ಕೃಷ್ಣನಾಗಿಯೇ ಕಾಣಿಸಿಕೋ ' ಎಂದು ಬೇಡಿದನಂತೆ. ಪಾರ್ಥನ ಶ್ರೀಕೃಷ್ಣ ಸರ್ವಾಂತ ಶ್ಯಾವಿಯ ವಿಶ್ವರೂಪಿಯೂ ಆದ ಭಗವಂತನೇ ಹೌದು; ಆದರೆ ಭಗವಂತ ಶ್ರೀಕೃಷ್ಣ ಮಾತ್ರವೇ ಅಲ್ಲ. ಅವನ ರೂಪ, ಪ್ರಭಾವ, ಪ್ರಕಾಶ ಅದಕ್ಕಿಂತಲೂ ನೂರ್ಮಡಿ ಮಿಗಿಲಾದುದು. ಧರ್ಮಾನುವರ್ತಿಯಾದ ಕಲೆಯಲ್ಲಿ ಈ ಸಂಕುಚಿತಭಾವನೆ ಅನಿವಾರ್ಯವಾಗುತ್ತದೆ. ಸ್ಥಿತಪ್ರಜ್ಞನಾದ ಕಲಾವಿದ ಸೂರ್ಯರಶ್ಮಿಯಲ್ಲಿ ತೃಪ್ತನಾಗುವುದಿಲ್ಲ, ಅವನಿಗೆ ಸ್ವಯಂ ಸೂರ್ಯನೇ ಬೇಕು. ಈಶಾವಸ್ಕೋಪನಿಷತ್ತಿನ ಶಾಂತಿಮಂತ್ರನನ್ನು ಸುರಿದ ಮಹರ್ಷಿ ಇದೇ ತತ್ತ್ವವನ್ನು ಪ್ರತಿಪಾದಿಸುತ್ತಿದ್ದಾನೆ. “ ಓಂ ಪೂರ್ಣಮದಃ ಪೂರ್ಣಮಿದಂ ಪೂಣಾ೯ತ್ತೂರ್ಣಮುದಚ್ಯತೆ | ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವ ಶಿಷ್ಯತೆ !! ” - “ ಪರಾತ್ಪರ ವಸ್ತುವು ಸರ್ವಸಂಪೂರ್ಣವಾದುದು. ವ್ಯಕ್ತ ವಿಶ್ವವು ಸರ್ವಸಂಪೂರ್ಣವಾದುದು. ಪೂರ್ಣದಿಂದ ಪೂರ್ಣದ ಉತ್ಪತ್ತಿ