ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಯಾಗುವುದು, ಪೂರ್ಣದೊಳಗಿಂದ ಪೂರ್ಣವನ್ನು ಕಳೆದರೂ ಪೂರ್ಣವು ಅಚ್ಚಳಿಯದೆ ಉಳಿಯುವುದು.” , - ಪೂರ್ಣತೆಯ ಕಡೆಗೆ ಧರ್ಮಜಿಜ್ಞಾಸು ಒಂದು ಮಾರ್ಗದಿಂದ ಹೋದರೆ ಕಲಾವಿದ ಬೇರೊಂದು ಮಾರ್ಗದಿಂದ ಹೋಗುತ್ತಾನೆ. ಆದರೆ ಎಲ್ಲಿ ಕಲಾವಿದನ ಮನಸೂ ಧರ್ಮಜಿಜ್ಞಾಸುವಿನ ಮನಸ್ಸಿನಂತಿರುತ್ತದೋ ಅಲ್ಲಿ ಧರ್ಮ, ಕಲೆಗಳ ಮಧುರಸಂಯೋಗವನ್ನು ನಾವು ಕಾಣುತ್ತೇವೆ. ಅಂಥ ಅಪ್ರತಿಮ ಮನೋಭಾವನೆ ಪಡೆದ ಶಿಲ್ಪಿ ಶ್ರವಣಬೆಳಗೊಳದ ಗೋಮಟೇಶ್ವರ ಸ್ವಾನಿಯನ್ನು ಕಡೆಯುತ್ತಾನೆ; ಗೀತಾಗೋವಿಂದ ಬರೆಯುತ್ತಾನೆ : ಒಂಭತ್ತನೆಯ ಸಿಂಫನಿ ಹಾಡುತ್ತಾನೆ. ಕಲಾವಿದ ನಾಡಸಂಸ್ಕೃತಿಯನ್ನು ರೂಪುಗೊಳಿಸುವ ರೂವಾರಿ. ಆದರೆ ನಾಡಿನಲ್ಲಿ ಹಲವು ಸಾವಿರ ವರ್ಷಗಳಿಂದ ಬೆಳೆದುಬಂದ ಸಂಸ್ಕೃತಿಯೊಂದು ಜೀವಂತವಾಗಿರುತ್ತದೆ. ಜೀವಂತ ಸಂಸ್ಕೃತಿಯ ಪರಂಪರೆಯಲ್ಲಿ ಬಂದ ಕಲಾವಿದ ಅದನ್ನು ತೊಳೆದು ಬೆಳಗಿಸುವ ಉದ್ಯಮದಲ್ಲಿ ಪ್ರವರ್ತನಾಗುವು ದಲ್ಲದೆ, ಆ ಸಂಸ್ಕೃತಿಗೆ ತನ್ನ ವಿಶಿಷ್ಟ ಕಾಣಿಕೆಯನ್ನು ಅರ್ಪಿಸುತ್ತಾನೆ. * ಕಲೆ ನಾಡಸಂಸ್ಕೃತಿಯ ಪ್ರತೀಕವಾದುದನ್ನು ಭಾರತವರ್ಷದಲ್ಲಿಯೇ ನಾವು ನೋಡಬದುದು. ವೇದಾಂತ, ಬೌದ್ಧ ಧರ್ಮಗಳ ಪ್ರಭಾವ ಉಜ್ವಲವಾಗಿದ್ದ ಕಾಲದಲ್ಲಿ ಅಜಂತೆಯ ಚಿತ್ರಕಾರರು ತಮ್ಮ ಅಮರಕೃತಿ ಗಳನ್ನು ರಚಿಸಿದರು. ಮಧ್ಯಕಾಲದಲ್ಲಿ ಇಸ್ಲಾಮಿನ ಸಂಸ್ಕೃತಿ, ಅದರ ಭೋಗಜೀವನ ವ್ಯಾಪಿಸಿದಾಗ ರಜಪೂತ (ಕಾಂಗ್ರಾ) ಮತ್ತು ಮುಘಲ ಚಿತ್ರಕಲಾ ಸ೦ ಪ್ರ ದಾ ಯ ಗ ಳು ಬೆಳೆದವು. ಇಂದು ಕ್ರಾಂತಿಯೇ ಜೀವನದುಸಿರಾಗಿರುವಾಗ ಜಾಮಿನಿ ರಾಯರ ಕಲೆ ಬೆಳೆಯು ದೆ. ಧರ್ಮದ ಪ್ರಾದುರ್ಭಾವವಿದ್ದ ಕಾಲಕ್ಕೆ ಭರತನಾಟ್ಯಶ: ಸ್ತ್ರ, ಕರ್ನಾಟಕಸಂಗೀತ, ಕಥಾಕಳಿ ತಲೆಯೆತ್ತಿದವು. ವಿಲಾಸಕ್ಕೆ ಬೆಲೆಬಂದ ಮಧ್ಯಕಾಲದಲ್ಲಿ ಹಿಂದೂಸ್ಥಾನಿ ಸಂಗೀತಸಂಪ್ರದಾಯ ಬೆಳೆಯಿತು ; ಕಥಕ್ ನಾಟ್ಯ ಪ್ರಚಾರಕ್ಕೆ ಬಂದಿತು. ಈಗಿನ ಅಲ್ಲೋಲಕಲ್ಲೋಲ ಜೀವನಕ್ಕನುಗುಣವಾಗಿ ಕಲಬೆರಕೆ ಸಿನಿಮಾ ಸಂಗೀತ ಬೆಳೆಯುತ್ತಿದೆ. ಪರಂಪರೆ, ಪರಿಸ್ಥಿತಿ ಎರಡೂ ಕಲಾವಿದನನ್ನು ಸದಾ ಜಗ್ಗು ತ್ತಲೇ