ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನುಬಂಧ-೪ ದಕ್ಷಿಣೋತ್ತರ ಸಂಗೀತ ಸಮನ್ವಯ ಸೇತುಹಿಮಾಚಲಪರ್ಯಂತವಾದ ಭಾರತ ಒಂದು. ಉ ತ ರ ದ ಕೊನೆಯಿಂದ ದಕ್ಷಿಣದ ಕೊನೆಯವರೆಗೆ ಹಲವು ಭಾಷೆಗಳನ್ನು ಮಾತಾಡುವ ಜನರು, ಹಲವು ಬಗೆಯ ಆಚಾರ ವ್ಯವಹಾರಗಳನ್ನು ಅನುಸರಿಸುವ ಜನರು, ಹಲವು ಮತಗಳನ್ನು ಮಾನಿಸುವ ಜನರಿದ್ದರೂ ಇವರೆಲ್ಲರನ್ನೂ ಕಟ್ಟುವ ತಂತುವೆಂದರೆ ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕೃತಿಯನ್ನು ಆರ್ಷಯದಿಂದ ಬೆಳೆದು ಬಂದಿರುವ ಅದರ ವೈದಿಕ, ಲೌಕಿಕ ಸಾಹಿತ್ಯ, ಜನರ ಆಚಾರ ವ್ಯವಹಾರಗಳು, ನಾಡಿನ ಕಲಾಪ್ರಕಾರಗಳಿಂದ ನಾವು ನಿರ್ದೆಶಿಸಬಹುದು. ಶಿಲ್ಪ, ಚಿತ್ರ, ವಾಸ್ತುಶಿಲ್ಪ, ಸಂಗೀತಕಲೆಗಳಲ್ಲಿ ಉತ್ತರ, ದಕ್ಷಿಣನೆಂಬ ವಿಭೇದಗಳಾಗಿದ್ದರೂ ಅವುಗಳ ಹಿಂದಣ ಸ್ಪೂರ್ತಿ, ಕ್ರತುಶಕ್ತಿ, ಒಂದೇ ಆಗಿದೆಯೆಂದು ನಿಸ್ಸಂದೇಹವಾಗಿ ಹೇಳಬಹುದು. ದಕ್ಷಿಣಾದಿ ಸಂಗೀತದಲ್ಲಿ ವಿದ್ವಾಂಸರು ಪರಂಪರಾನುಗತವಾಗಿ ಪ್ರಥಮದಲ್ಲಿ ರಾಗ ಮತ್ತು ತಾನ, ಪಲ್ಲವಿ ಸ್ವರವಿನ್ಯಾಸ ಇತ್ಯಾದಿ ಕ್ರಮದಿಂದ ಹಾಡುತ್ತಿರುವುದು ಕಂಡುಬರುತ್ತದೆ. ಹಾಗೆಯೇ ಹಿಂದೂಸ್ಥಾನಿ ಸಂಗೀತ ದಲ್ಲಿಯೂ ಪ್ರಥಮದಲ್ಲಿ ರಾಗಾಲಾಪನೆಯನ್ನು ಮಾಡಿ ಅನಂತರ ದೃಪದ್, ಧಮಾರ್‌ ಇತ್ಯಾದಿ ಕ್ರಮದಿಂದ ಹಾಡುತ್ತಿರುವುದು ತಿಳಿದ ವಿನಯವೇ ಆಗಿದೆ. ಹೀಗೆ ಭಾರತೀಯ ಸಂಸ್ಕೃತಿಯ ಏಕತ್ರನನ್ನು ಅದರ ಸಂಗೀತ ಸ್ಪಷ್ಟವಾಗಿ ನಿರ್ದೆಶಿಸುತ್ತದೆ. ವೇದಕಾಲದಲ್ಲಿ ಆರಂಭವಾದ ಸಂಗೀತ ಪರಂಪರೆ ಇಂದಿನವರೆಗೆ ಸತತವಾಗಿ ನಡೆದುಬಂದಿದೆ. ಆದರೆ ಕಾಲ ಧರ್ಮ ಪ್ರಭಾವದಿಂದ ಇತಿಹಾಸದ ಆಗುಹೋಗುಗಳಿಂದ ಅದರ ಬಾಹ್ಯಸ್ವರೂಪ ವ್ಯತ್ಯಾಸಹೊಂದುತ್ತ ಬಂದಿದ್ದರೂ, ಮೂಲೋದ್ದೇಶಕ್ಕಾಗಲಿ, ಸಂಗೀತದ ಸಜೀವ ಚೈತನ್ಯ ಕ್ಕಾಗಲಿ ಯಾವ ಧಕ್ಕೆಯೂ ತಗುಲಿಲ್ಲ. ಸಂಗೀತದಲ್ಲಿ ದಕ್ಷಿಣೋತ್ತರ ಸಂಪ್ರದಾಯಗಳು ನಿರ್ದಿಷ್ಟವಾದ ಮೇಲೆ,