ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೬ ದಕ್ಷಿಣೋತ್ತರ ಸಂಗೀತ ಸಮನ್ವಯ ಅವುಗಳ ಬಗ್ಗೆ ಗ್ರಂಥಗಳು ರಚಿಸಲ್ಪಟ್ಟವು. ಇತಿಹಾಸಿಕ ಪರಿಸ್ಥಿತಿಗೆ ಕಟ್ಟು ಬಿದ್ದ ವಿ ವಿ ಧ ಭಾ ಗ ಗ ಳ ಜನರು ಅವುಗಳಿಗೆ ಪ್ರತ್ಯೇಕ ಸ್ವರೂಪ ಕೊಡುವ ಪ್ರಯತ್ನವನ್ನೂ ಮಾಡಿದರು. ಕೇವಲ ವೈದಿಕವಾಗಿದ್ದ ಗಾನವಿದ್ಯೆ ಪುರಾಣಗಳ ಕಾಲಕ್ಕೆ ವ್ಯಾಖ್ಯಾನಗಾನ ಸ್ವರೂಪವನ್ನೂ ತರುವಾಯ ಲೌಕಿಕಗಾನ ಸ್ವರೂಪವನ್ನೂ ತಳೆದವು. ಸಾಮಾನ್ಯ ಜನತೆಯಲ್ಲಿ ಜಾನಪದ ಸಂಪ್ರದಾಯ ಬೆಳೆಯಿತು. ಲೌಕಿಕ, ವೈದಿಕ ; ದಕ್ಷಿಣ ಉತ್ತರ ಎಂಬ ಸಂಪ್ರದಾಯಗಳೇ ಪ್ರತ್ಯೇಕ ಎಂಬ ಭಾವನೆ ಜನಗಳ ಮನಸ್ಸಿನಲ್ಲಿ ಬೆಳೆಯುವುದಕ್ಕೆ ದೇಶದ ಇತಿಹಾಸವೂ ಕಾರಣವಾಯಿತು. ದಕ್ಷಿಣದವರಿಗೂ ಉತ್ತರದವರಿಗೂ ಸಾಂಸ್ಕೃತಿಕ ಸಂಬಂಧ ಕಡಿಮೆಯಾದಂತೆ ಅವುಗಳ ಪ್ರತ್ಯೇಕ ಬೆಳವಳಿಗೆಗೆ ಇಂಬು ಸಿಕ್ಕಿತು. ದಕ್ಷಿಣೋತ್ತರ ಸಂಪ್ರದಾಯಗಳು ಪರಸ್ಪರ ಸಂಬಂಧವಿಲ್ಲದ ಪ್ರತ್ಯೇಕ ಸಂಪ್ರದಾಯಗಳೆ ಅಥವಾ ನಿಕಟ ಸಂಬಂಧವುಳ್ಳ ಒಂದೇ ಕಲೆಯ ಎರಡು, ರೂಪಗಳೋ ಎಂದು ವಿಚಾರ ಮಾಡಬೇಕಾದುದಗತ್ಯ. - ಭಕ್ತ ಭಗವಂತನಿಗೆ ತನ್ನ ಕೃತಜ್ಞತೆಯನ್ನು ತೋರಿಸಿ ಆತ್ಮಾರ್ಪಣ ಮಾಡುವ ಭಾವದಿಂದಲೇ ಭಾರತೀಯ ಸಂಗೀತ ಆರಂಭವಾಯಿತು. ಭಕ್ತಿಯೇ ಭಾರತೀಯ ಸಂಗೀತದ ಬುನಾದಿ ಎಂದು ನಾವು ಗ್ರಹಿಸಬಹುದು. ವೇದ ಪುರಾಣಗಳ ಕಾಲವಾದ ಮೇಲೆ ಭಾರತದಲ್ಲಿ ವಿವಿಧ ಭಾಷೆಗಳು ಬೆಳದಂತೆ ಆಯಾ ಭಾಷೆಗಳಲ್ಲಿ ಭಕ್ತಿಗೀತೆಗಳ ನಿರ್ಮಾಣ ಆರಂಭವಾಯಿತು, ಪುರಾಣಗಳ ಕಾಲದಿಂದ ಮುಸಲ್ಮಾನರ ಆಳ್ವಿಕೆಯವರೆಗೆ ಲೌಕಿಕಗಾನ ಬೆಳೆದರೂ, ಆ ಬಗ್ಗೆ ನಮಗೆ ಸಾಕಷ್ಟು ಗ್ರಂಥಾಧಾರ ಇಲ್ಲದಿರುವುದರಿಂದ ಅದರ ಸ್ವರೂಪನೆಂಥದು ಎಂದು ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಮಧ್ಯಕಾಲದ ತರುವಾಯ ಉತ್ತರಾದಿ ಸಂಪ್ರದಾಯ ವಿಶೇಷ ಬೆಳೆದಂತೆ ಶಾಸ್ತ್ರಕಾರರು ಅವುಗಳನ್ನು ಗ್ರಂಥಸ್ಥೆ ಮಾಡಿದರು. ೧೪ ಮತ್ತು ೧೫ ನೆಯ ಶತಮಾನಗಳಲ್ಲಿ ಉತ್ತರಾದಿ ಸಂಗೀತ ಬೆಳೆದು ೧೬ ನೆಯ ಶತಮಾನದಲ್ಲಿ ತಾನಸೇನನಿಂದ ಒಂದು ಕ್ರಮಾಗತ ರೂಪವನ್ನು ಪಡೆದಂತೆ ತಿಳಿದುಬರುತ್ತದೆ. ಇದಕ್ಕೆ. ಮುಂಚೆ ಭರತ, ನಾರದ, ಮತಂಗ ಮುನಿ, ಮಮ್ಮಟ, ಅಭಿನವಗುಪ್ತ,. ಸೋಮನಾಥ, ಸಾರಂಗದೇವ, ಕಲ್ಲಿನಾಥ ಮೊದಲಾದ ಲಾಕ್ಷಣಿಕರು ಸಂಗೀತಶಾಸ್ತ್ರದ ಬೆಳವಳಿಗೆಗೆ ಕಾರಣರಾದರು.