ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಭಾರತಕ್ಕೆ ಮುಸ್ಲಿಮರ ಪ್ರವೇಶವಾಗಿ ಮುಘಲ ಸಾಮ್ರಾಜ್ಯ ನೆಲೆಯಾಗಿ ನಿಂತಿತು. ಮುಘಲರು ಅವರ ಮೊದಲಿನ ಧಾಳಿಕಾರರಂತೆ ಭಾರತಕ್ಕೆ ಬಂದು ಸುಲಿಗೆಮಾಡಿ ಹೊರಟುಹೋಗದೆ ಭಾರತದಲ್ಲಿಯೇ ಶಾಶ್ವತವಾಗಿ ನೆಲಸಿ, ಆದರ ಕಲೆಗಳನ್ನು ಪ್ರೋತ್ಸಾಹಿಸಿ, ತನ್ನೊಂದಿಗೆ ಕರೆತಂದಿದ್ದ ಕಲಾವಿದರ ಪ್ರಭಾವವನ್ನು ಭಾರತದ ಮೇಲೂ ಬೀರಿಸಿ ಒಂದು ಸಮನ್ವಯ ಕಲೆ ದುಟ್ಟು ವುದಕ್ಕೆ ನೆರವಾದರು. ಇವರ ಪ್ರಯತ್ನದಿಂದಲೇ ಉತ್ತರಾದಿ ಸಂಪ್ರದಾಯದಲ್ಲಿ ಶುದ್ದ ಭಾರತೀಯ ಸಂಪ್ರದಾಯ ಹಾಗೂ ಭಾರತದ ಹೊರಗಿನ ಸಂಗೀತ ಸಂಪ್ರದಾಯಗಳ ಕೆಲವು ಅಂಶಗಳು ಸಮರಸಗೊಂಡವು. ದಕ್ಷಿಣದಲ್ಲಿ ಮುಸ್ಲಿಮರ ಪ್ರಭಾವ ಬೆಳೆಯಲಿಲ್ಲವಾದುದರಿಂದ, ಅದು ತನ್ನ ಪೂರ್ವ ಸ್ವರೂಪವನ್ನು ರಕ್ಷಿಸಿಕೊಂಡು ಬಂದಿತು. ೧೪ನೆಯ ಶತಮಾನಕ್ಕೆ ಮೊದಲು ದಕ್ಷಿಣೋತ್ತರ ಸಂಪ್ರದಾಯಗಳೆಂಬ ಭೇದವಿಲ್ಲದೆ ಇಡಿಯ: ಭಾರತ ಒಂದೇ ಸಂಪ್ರದಾಯವನ್ನು ಅವಲಂಬಿಸಿತ್ತೆನ್ನು ಇದರಲ್ಲಿ ಸಂಶಯವಿಲ್ಲ. * ವೈದಿಕಗಾನ ಮತ್ತು ಜಾನಪದಗಾನ ಇಂದಿಗೂ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಒಂದೇ ಆಗಿರುವುದು ಸ್ಪಷ್ಟವಾಗಿದೆ. ಸಂಗೀತದಲ್ಲಿ ಪ್ರಭೇದಗಳುಂಟಾಗುವುದಕ್ಕೆ ಅರಮನೆಯ ವಾತಾವರಣದಲ್ಲಿ ಬೆಳೆದ ನಗರ ಸಂಸ್ಕೃತಿಯೇ ಮೂಲಕಾರಣವಾಯಿತು. ಅವು ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಪ್ರಭಾವಗಳಿಗೊಳಗಾದುದರಿಂದ ಈ ಪ ಫ ? ದ ಪಡೆಯಲವಕಾಶವಾಯಿತು. ಒಂದೂಸ್ಥಾನಿ, ದಕ್ಷಿಣಾದಿ ಸಂಪ್ರದಾಯಗಳಲ್ಲಿ ಒಡಮೂಡಿರುವ ಭೇದಗಳನ್ನು ಪರಿಗಣಿಸೋಣ. ಉದಾಹರಣೆಗಾಗಿ - ಭೈರವಾಗ 'ದ ಆರೋಪ ಅವರೋಹಗಳು. ಸಾ, ರಿ, ಗ, ಮ, ಸ, ದ, ನಿ, ಸಾ.' ಹಿಂದೂಸ್ತಾನಿಯಲ್ಲಿ ಈ ಸ್ವರಗಳಿಗೆ ಹೀಗೆ ಹೆಸರುಕೊಡುತ್ತಾರೆ-ಸಡ್ಡ, ಕೋವಲರಿಷಭ, ತೀವ್ರಗಾಂಧಾರ, ಕೋಮಲ ಗಾಂಧಾರ, ಮಧ್ಯಮ, ಪಂಚಮ, ಕೋಮಲ ದೈವತ, ತೀವ್ರನಿಷಾದ ಹೀಗೆ ಇರುತ್ತವೆ. ದಕ್ಷಿಣಾದಿಯಲ್ಲಿ ಷಡ್ಡ, ಶುದ್ಧ ರಿಷಭ, ಅಂತರ ಗಾಂಧಾರ, ಶುದ್ದ ಮಧ್ಯಮ, ಪಂಚಮ, ಶುದ್ದ ದೈವತ, ಕಾಕಿನಿಷಾದ ಈ ರೀತಿಯಾಗಿದ್ದು ಸ್ಥಾನದ ವ್ಯತ್ಯಾಸವಿಲ್ಲದೆ ಬರೀ ಹೆಸರುಗಳು ವ್ಯತ್ಯಾಸವು ಮಾತ್ರ ಕಂಡುಬರುತ್ತದೆ.