ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಹಾಯ್ದು ಹೋಗಬೇಕಾಗಿತ್ತು. ಅಲ್ಲಿ ಕೆತ್ತನೆಯ ಕೆಲಸಗಾರರು ವಿಗ್ರಹ ಗಳನ್ನು ಮಾಡಿ ಅದಕ್ಕೆ ಬಣ್ಣ ಕೊಡುತ್ತಿದ್ದುದನ್ನು ಮಿಣಜಿಗಿ ನೋಡು ತಲೇ ಇದ್ದರು. ಅವರು ಮಾಡುತ್ತಿದ್ದುದನ್ನು ತಾವೂ ಮಾಡುವ ಆಸೆ. ಗಣಪತಿಯ ವಿಗ್ರಹಗಳನ್ನು ಮಾಡಿ ಬಣ್ಣ ಕೊಡಲಾರಂಭಿಸಿದರು. ಅನುಕರಣ ಸ್ವಭಾವ ಬೆಳೆಯಿತು. ರಾಜಾ ರವಿವರ್ಮನ ಚಿತ್ರಗಳನ್ನು ಪ್ರತಿ ತೆಗೆಯ ಲಾರಂಭಿಸಿದರು. ಶಾಲೆಯಲ್ಲಿ ಇವರ ಉತ್ತಮ ನಕ್ಷೆಗಳನ್ನೂ, ಚಿತ್ರಗಳನ್ನೂ ಕಂಡು ಶಿಕ್ಷಕರು ಪ್ರೋತ್ಸಾಹಿಸಲಾರಂಭಿಸಿದರು. ಒಮ್ಮೆ ಮುಂಬಯಿ ಗವರ್ನರ್ ಸರ್ ಜಾರ್ಜ್ ಲಾಯಿಡರು ಶಾಲೆಗೆ ಬಂದಾಗ ಅವರ ಸ್ವರೂಪ ಚಿತ್ರವನ್ನು ತೆಗೆದು ಅವರಿಗೇ ಕೊಟ್ಟರು. ಲಾಯಿಡರು ಎಳೆಯ ಚಿತ್ರ ಗಾರನ ಕೈ ಕುಲುಕಿಸಿ ನಾಲ್ಕು ಸವಿಯಾದ ಮಾತುಗಳನ್ನಾಡಿದರು. ಶಾಲೆ ಯಲ್ಲಿ ಓದುತ್ತಿರುವಾಗಲೇ ಇಂಟರ್ ಮೀಡಿಯೇಟ್ ಡ್ರಾಯಿಂಗ್ ಪರೀಕ್ಷೆಗೆ ಕುಳಿತು ಜಯಶೀಲರಾಗಿ ಪಾರಿತೋಷಕವನ್ನೂ ಪಡೆದರು. ಮುಂದೆ ಚಿತ್ರ ಕಲೆಯನ್ನೆ ಅಭ್ಯಾಸ ಮಾಡಬೇಕೆಂಬ ಆಸೆ ಬಲವಾಗಿ ಮೂಡಿತು. ಹಿರಿ ಯರ ವಿರೋಧವನ್ನು ಕಟ್ಟಿಕೊಂಡು ಮಿಣಜಿಗಿ ಮುಂಬಯಿ ಲಲಿತ ಕಲಾ ಶಾಲೆಗೆ ಸೇರಿದರು. ಇವರು ನಾಲ್ಕನೆಯ ವರ್ಷದ ತರಗತಿಯಲ್ಲಿದ್ದಾಗ ಪ್ರಸಿದ್ದ ವೆಂಬ್ಲಿ ಪ್ರದರ್ಶನ ನಿಯೋಜಿತವಾಯಿತು. ಮಿಣಜಿಗಿಯವರನ್ನು ಶಾಲೆಯ ಅಧಿಕಾರಿಗಳು ಮಾದರಿಗಳನ್ನು ಚಿತ್ರಿಸಲು ಆಯ್ದ ರು. ಶಾಲೆಗೆ ರಜೆ ಬಂದೊಡನೆಯೇ ಬಾದಾಮಿ, ಪಟ್ಟದ ಕಲ್ಲು, ಐಹೊಳೆ, ಮಹಾಕೂಟ, ಹಂಪೆ ಕ್ಷೇತ್ರಗಳಿಗೆ ಹೋಗಿ, ಮಿಣಜಿಗಿ ಅಲ್ಲಿನ ಕನ್ನಡ ಕಲಾವೈಭವವನ್ನು ಕಂಡುಂಡು ಪ್ರತಿ ಮಾಡಿಕೊಂಡು ಬರುತ್ತಿದ್ದರು. ಮುಂಬಯಿ ಕಲಾಶಾಲೆಯಲ್ಲಿ ಓದುತ್ತಿರುವಾಗಲೆ ಮಿಣಜಿಗಿಯವರ ಹಲವು ಚಿತ್ರಗಳಿಗೆ ಪ್ರದರ್ಶನಗಳಲ್ಲಿ ರಜತ, ಸ್ವರ್ಣಪದಕಗಳು ದೊರೆತವು. ೧೯೨೭ರಲ್ಲಿ ಮಿಣಜಿಗಿಯವರು. * ಆಕ್ಟ್ ಮಾಸ್ಟರ್ ' ಪರೀಕ್ಷೆಗೆ ಕುಳಿತು ತೇರ್ಗಡೆಯಾದರು. ಈ ವೇಳೆಗೆ ನವ ದೆಹಲಿಯಲ್ಲಿ ವೈಸರಾಯ್ ಭವನದ ಅಲಂಕಾರ ಕೆಲಸ ಆರಂಭವಾಯಿತು. ಈ ವಾಸ್ತು ಶಿಲ್ಪ ' ಎಂಬ ವಿಷಯದಮೇಲೆ