ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಸಂಪೂರ್ಣವಾಗಿ ತಾಳುಮಾಡದಂತೆ ಮಿಣಜಿಗಿ ತನ್ನ ಕಲಾಕೃತಿಗಳ ಕಡೆಗೆ ಮನಸ್ಸು ಕೊಟ್ಟರು. ಮುಂಬಯಿಯಲ್ಲಿ ಕೆಲವು ಕಾಲ, ಹುಬ್ಬಳ್ಳಿಯಲ್ಲಿ ಕೆಲವು ಕಾಲ ನೆಲಸಿ ಸೊಗಸಾದ ಕೃತಿಗಳನ್ನು ರಚಿಸಿದರು. ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀಗಳವರು ಮಿಣಜಿಗಿಯವರಿಗೆ ಎಲ್ಲ ಬಗೆಯ ಪ್ರೋತ್ಸಾಹಕೊಟ್ಟು ಅವರನ್ನು ಪೋಷಿಸಿಕೊಂಡು ಬಂದಿದಾರೆ. ಈ ಅವಧಿಯಲ್ಲಿ ಮಿಣಜಿಗಿಯವರ ಕಲಾತಳಿರು ಎರಡು ಕುಡಿಯೊಡೆ ಯಿತು. ಭಾರತೀಯ ಸಂಪ್ರದಾಯದಲ್ಲಿ ರಾಗ ತೋಡಿ, ಮಾಲಕಂಸ,. ಮೇಘಮಲ್ದಾರ, ಗುರ್ಜರಿ ಚಿತ್ರಗಳನ್ನೂ ಹಂಸಗತಿ, ಭರತ ನಾಟ್ಯಮಾಲೆ ಮೊದಲಾದ ಚಿತ್ರಗಳನ್ನೂ ರಚಿಸಿದರು. ಪಾಶ್ಚಾತ್ಯ ಸಂಪ್ರದಾಯದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ, ಮಹಮದಾಲಿ ಜಿನ್ಹಾ, ಸರ್ ಸಿದ್ದ ಪ್ಪಾ ಕಂಬಳಿ, ಕರ್ನಲ್ ಭಾಟಿಯಾ, ಮೂರು ಸಾವಿರ ಮಠದ ಶ್ರೀಗಳವರ ಚಿತ್ರಗಳನ್ನೂ ರಚಿಸಿದರು. ಈಗ ನಂದಿಕೇಶ್ವರನ - ಅಭಿನಯ ದರ್ಪಣ' ಗ್ರಂಥವನ್ನು ಹಲವು ಚಿತ್ರಗಳಿಂದ ಅಲಂಕರಿಸುತ್ತಿದ್ದಾರೆ. ಉಮರ ಖಯ್ಯಂ ಮಹಾ ಕವಿಯ ' ರುಬಾಯಿಯಾತ್ ' ಕಾವ್ಯದ ಕೆಲವು ವಸ್ತುಗಳ ಆಧಾರದಮೇಲೆ ಚಿತ್ರಗಳನ್ನು ರಚಿಸಿದ್ದಾರೆ. ಈಗ ' ಶ್ರುತಿ ನಿರ್ಮಾಣ ' ಎಂಬ ಕೃತಿಯನ್ನು ರಚಿಸುತ್ತಿದ್ದಾರೆ. ಚಿತ್ರಕಲೆಯ ಬಗ್ಗೆ ಮಿಣಜಗಿಯವರ ಅಭಿಪ್ರಾಯವನ್ನರಿತುಕೊಂಡರೆ ಇವರ ಸಿದ್ದಿ ಯ ರಹಸ್ಯ ಗೊತ್ತಾಗಬಹುದು. * ಶ್ರೇಷ್ಠ ಕಲೆಯನ್ನು ಮೆಚ್ಚಿ ಮಾನಿಸುವವರು ವಿರಳ. ಸಿನಿಮಾ ಕಲೆ ಹಾಗೂ ವ್ಯಾಪಾರೀ ಕಲೆ ಲಲಿತ ಕಲೆಯ ಬಗ್ಗೆ ಇರಬೇಕಾದ ಅಭಿರುಚಿಯನ್ನು ಹಾಳುಮಾಡಿವೆ. ಕಣ್ಣು ಕೋರಯಿಸುವ ದಪ್ಪದಪ್ಪ ಬಣ್ಣಗಳ ಕಡೆ ಲಕ್ಷ ಹೆಚ್ಚಾಗುತ್ತಿದೆ. ಸಹಜ ವರ್ಣ ನಿಯೋಜನೆ ಅಯೋಗ್ಯವೆನಿಸಿಕೊಂಡಿದೆ. ಇದೆಲ್ಲಾ ಅನಧಿಕಾರಿಗಳು ಕಲಾವಿದರೆಂದು ಸೋಗುಹಾಕುವುದರ ಫಲ. ಕಲಾವಿದ ಒಂದು ಚಿತ್ರವನ್ನು ರಚಿಸಿದರೆ ಅದರಲ್ಲಿ ಅರಿವು, ಅರ್ಥ ಮೂಡಿರುತ್ತದೆ. ಪರಿಣಾಮ ಅವನು ಉದ್ದೇಶಿಸಿದುದರ ವಿರುದ್ದ ಹೋಗುವುದಿಲ್ಲ. ಪ್ರೊ. ಮಲ್ಲಿಕಾರ್ಜುನ ಮನ್ಸೂರರು ಹಾಡಿದರೆ ಶಾಸ್ರೋಕ್ತವಾಗಿರುತ್ತದೆ. ಅನಧಿಕಾರಿ ಸಿಕ್ಕಾ