ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೌಂದಯ್ಯೋಪಾಸಕ ಮಿಣಜಿಗಿ ಬಟ್ಟೆ ಹಾಡಿದರೆ ಆಗುವ ಪರಿಣಾಮವೇನು ? ಅದೂ ಕಿವಿಗೆ ಇಂಪಾಗಿರ ಬಹುದು, ಆದರೆ ಶಾಸ್ತ್ರ ಸಮ್ಮತವಾಗುವುದಿಲ್ಲ. ಚಿತ್ರಗಾರರ ಬಗ್ಗೆಯೂ ಈ ಮಾತು ಅನ್ವಯಿಸುತ್ತದೆ. ಶ್ರೇಷ್ಠ ಕಲೆಯ ಸಂಹಾರವಾಗುತ್ತಿದೆ. ಸಾರ್ವ ಜನಿಕರು ಮಾತ್ರವಲ್ಲದೆ ಕಲಾ ಶಾಲೆಗಳೂ ಅದಕ್ಕೆ ಮುಲತಾಯಿಪ್ರೇಮ ತೋರುತ್ತಿವೆ. ಶ್ರೇಷ್ಠ ಕಲೆಯ ಭವಿಷ್ಯ ಹೇಗಿದೆಯೆಂದು ನಿರ್ಧರಿಸಲಾರೆ. ಅದು ತನ್ನ ಆದರ್ಶದ ಬಳಿಗೆ ಮರಳಬೇಕು. ಕಲೆಯಲ್ಲಿ ವಿಕಾಸ, ಪ್ರಗತಿ. ಇರಬಾರದೆಂದಲ್ಲ. ಆದರೆ ಅದಕ್ಕೂ ಕ್ರಮ, ಮಾರ್ಗ ಇರಬೇಕು. ಇದು ನನ್ನ ಖಚಿತವಾದ ಅಭಿಪ್ರಾಯ.' ಸುಪ್ತಸೌಂದರ್ಯವನ್ನು ತೋರುವುದು ಕಲೆಯ ಒಂದು ಮುಖವಾದರೆ ದೃಷ್ಟ ಸತ್ಯವನ್ನು ತೋರುವುದು ಅದರ ಇನ್ನೊಂದು ಮುಖ. ಎರಡರ ಗುರಿಯೂ ಒಂದೇ - ಆನಂದ. ಒಂದರಲ್ಲಿ ಕಲಾವಿದ ಸೌಂದಯ್ಯೋಪಾಸಕ ನಾಗುತ್ತಾನೆ, ಇನ್ನೊಂದರಲ್ಲಿ ಸತ್ಯಸಾಧಕನಾಗುತ್ತಾನೆ. ಸೌಂದಯ್ಯ, ಸತ್ಯ ಗಳನ್ನು ' ಕೇವಲ ' ಗುಣಗಳೆಂದು ಭಾವಿಸುವುದೂ ತಪ್ಪಾದೀತು. ' ಸತ್ಯವೇ ಸೌಂದಯ್ಯ, ಸೌಂದರ್ ವೇ ಸತ್ಯ' ಎಂದು ಮಹಾಕವಿ ಸಾರಿದಾಗ ಅವನು ಇವುಗಳ ಅವಿನಾಭಾವವನ್ನು ಗಮನದಲ್ಲಿಟ್ಟು ಕೊಂಡಿದ್ದ. ಗುವಲ್ಲಿಯಲ್ಲಿ ಅನ್ನಜ್ಞಾನ, ಮಹತ್ವಗಳನ್ನು ಸೃಥಕ್ಕರಿಸುವ ತೈತ್ತಿರೀಯೋಪನಿಷತ್ತು ಬ್ರಹ್ಮಾನಂದವಲ್ಲಿಯಲ್ಲಿ ರಸಸಿದ್ದಾಂತವನ್ನು ವಿವರಿಸುತ್ತದೆ. 'ರಸೋ ವೈ ಸಃ' ಎಂದು ಘಂಟಾಘೋಷವಾಗಿ ಸಾರುತ್ತದೆ. ಅವನೇ ರಸ, ಅವನನ್ನು ದೊರಕಿಸಿಕೊಂಡ ಮೇಲೆ ಆತ್ಮ ಬ್ರಹ್ಮಾನಂದದಲ್ಲಿ ಲೀನವಾಗುತ್ತದೆ' ಎಂಬುದು ಉಪನಿಷತ್ತಿನ ಸಂದೇಶ. ರಾಮಣೀಯತೆ ಅಥವಾ ಚಾರುತರತೆಯನ್ನು ಪ್ರತಿಪಾದಿಸುವುದಷ್ಟೇ ಸೌಂದರದ ಗುರಿಯಲ್ಲ. ಪ್ರತಿ ಕ್ಷಣವೂ ಹೊಸ ಭಂಗಿಗಳನ್ನು ತೋರಿಸಿ, ನಮ್ಮ ಚಿತ್ರವನ್ನು ಅದರ ಚಿರವಿನೂತನತೆ, ಆಕರ್ಷಣೆಗಳು ಸೆರೆ ಹಿಡಿಯ ಬೇಕು. ಮನಸ್ಸಿನ ಸುಪ್ತಚೇತನವನ್ನು ಕೆರಳಿಸಿ, ಸದಾ ಸುಂದರ ಸ್ಮರಣ ಗಳಿಂದ ನಮ್ಮನ್ನು ಅದು ರಮಿಸಬೇಕು. ನಮಗೆ ದೃಗ್ಗೋಚರವಾಗುವ ಸೌಂದಯ್ಯ ಅನಂತ ಸೌಂದರದ ನಿಧಿಯಾದ ಭಗವಂತನ ಆವಿರ್ಭಾವನೆಂಬ