ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಸತ್ಯವನ್ನು ಮನಗಾಣಿಸಬೇಕು. ಈ ತತ್ತ್ವವನ್ನು ಉದಹರಿಸಲೆಂಬಂತೆ ಭಾರತವರ್ಷದಲ್ಲಿ 'ಮಹಾ ಭಾಗವತ,' ಪರ್ಶಿಯಾದಲ್ಲಿ - ಮಾಸ್ಸ ನಿ” ಮಹಾ ಕಾವ್ಯಗಳು ಹುಟ್ಟಿಕೊಂಡವು. ಅವರ ಕವಿಗಳಾದ ಕಾಳಿದಾಸ, ಜಯ ದೇವ, ರತ್ನಾಕರವರ್ಣಿ ಸೌಂದಯ್ಯ ದರ್ಶನವನ್ನು ತಮ್ಮ ಕಾವ್ಯಗಳಲ್ಲಿ ಮಾಡಿ ಸಿದ್ದಾರೆ. ಮಿಣಜಿಗಿಯವರ ಕಲೆಯನ್ನು ಈ ಸೌರ ಪಂಥಕ್ಕೆ ಸೇರಿಸಬಹುದು. ಪ್ರಕೃತಿ, ಮಾನವ ಇಬ್ಬರೂ ಸೌಂದರದ ಕುಸಿರೆಳ್ಳನ್ನು ಬೀರುತ್ತಲೇ ಇರು ತಾರೆ. ಶ್ರೇಷ್ಠ ಕಲಾವಿದ ಅದಕ್ಕೆ ಮಡಿಲೊಡು ತ್ತಾನೆ-ಗಾಂಸ ಕೈಕೊಡ ವಿಕೊಂಡು ಮುಂದೆ ಧಾವಿಸುತ್ತಾನೆ. ಶ್ರೇಷ್ಠ ಕಲಾವಿದ ಪ್ರಕೃತಿ, ಮಾನವ ರಿಬ್ಬರಿಂದಲೂ 'ಆಯ್ದ ಸೌಂದಯ್ಯ ಕಣಗಳನ್ನು ಮಹಾ ವೃಕ್ಷವಾಗುವಂತೆ ಬೆಳಸುತ್ತಾನೆ. ಕೆಲವು ಕಲಾವಿದರು ಪ್ರಕೃತಿ, ಮಾನವರನ್ನು ಬೇರ್ಪಡಿಸಿ ನೋಡು ತಾರೆ. ಕೆಲವರಿಗೆ ಪ್ರಕೃತಿಯೇ ಮೆಚ್ಚು, ಅದರ ಅಂದ ಚೆಂದ, ರೋಷ ಘೋಷ, ಸ್ನೇಹ ಸ್ಥತೆಗಳಲ್ಲಿ ಒಂದು ಪರಿಪೂರ್ಣ ಸಂದೇಶವನ್ನು ಅವರು ಕಾಣುತ್ತಾರೆ. ಮತ್ತೆ ಕೆಲವರು ಮಾನವ್ಯಕ್ಕೆ ಈ ಬೆಲೆ ಕೊಟ್ಟು ಅದರ ವಿಶ್ವರೂಪದ ಕಡೆಗೆ ಗಮನ ಕೊಡುತ್ತಾರೆ. ತಾನು ನೀರೆರೆದು ಬೆಳೆಸಿದ ತರುಲತೆ, ಮುದ್ದಿನಿಂದ ಸಾಕಿದ ಜಿಂಕೆ ಮರಿಯನ್ನು ಅಗಲಿ ಪತಿಗೃಹಕ್ಕೆ ಹೋಗಬೇಕಾದ ಸನ್ನಿವೇಶದಲ್ಲಿ ಶಾಕುಂತಲ ತನ್ನ ಹಾರ್ದಿಕ ಪ್ರೇಮವನ್ನು ಸುರುತ್ತಾಳೆ. ಮಹಾ ಕವಿಯ ಈ ಸನ್ನಿವೇಶದಲ್ಲಿ ಜಡಪ್ರಕೃತಿ ಚೇತೋ ಹಾರಿಯಾಗುತ್ತದೆ; ಮರ ಮಾನವ ಅಮರನಾಗುತ್ತಾನೆ. ಸಾಮರಸ್ಯದ ರಸಘಟ್ಟಿಯನ್ನು ಕಾಳಿದಾಸ ಸೃಜಿಸಿದ್ದಾನೆ. ಮಿಣಜಿಗಿಯವರ ಚಿತ್ರಕಲೆ ಸಾಮರಸ್ಯ ಸಿದ್ದಾಂತದ ಪ್ರತೀಕ. ಅವರ ಚಿತ್ರಗಳಲ್ಲಿ ವ್ಯಕ್ತಿಗಳಷ್ಟೇ ನಿಸ ರ್ಗವೂ ಚೇತನಗೊಂಡಿದೆ. ಅವುಗಳ ಒಂದೊಂದು ಚಲನವಲನವೂ ಯುಗ ಯುಗಗಳ ಅನುಭವವನ್ನು ಸಾರುತ್ತವೆ. ಮಿಣಜಿಗಿಯವರ ಕೃತಿಗಳಲ್ಲಿ ಅವರ ರಾಗ-ರಾಗಿಣಿ ಮಾಲೆಗೆ ಒಂದು ವಿಶಿಷ್ಟ ಸ್ಥಾನ ಕೊಡಬೇಕು. ಪರಂಪರೆ, ಪ್ರಗತಿಗಳೆರಡನ್ನೂ ಕಲಾವಿದ