ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಮಾಯಾತೋಡಿ, ಗಂಭೀರ ಭಕ್ತಿಯನ್ನು ಪ್ರತಿವಾದಿಸುವುದೇ ರಾಗದ ಉದ್ದೇಶ. ತೋಡಿ ಸಂಪೂರ್ಣರಾಗ, ತೋಡಿ ಅರಣ್ಯ ಮೃಗಗಳನ್ನು ಕೂಡ ಸೆರೆ ಹಿಡಿಯುತ್ತದೆ. ಸಹರಿ ಚಿತ್ರಗಳಲ್ಲಿ ತೋಡಿ ಹೀಗಿರುತ್ತದೆ : ಅಪೂರ್ವ ಸುಂದರಿಯಾದ ಒಬ್ಬ ಕನ್ಯ, ಶ್ವೇತಾಂಬರಧಾರಿಯಾಗಿ, ಕುಂಕುಮ ಕಸ್ತೂರಿ ಪೂಸಿಕೊಂಡು ಒಂದು ಬೆಟ್ಟದ ಮೇಲೆ, ಪಕ್ಕದಲ್ಲಿ `ಬೆಳೆದಿರುವ ಮರವನ್ನೊರಗಿಕೊಂಡು ನಿಂತಿರುತ್ತಾಳೆ. ಕೈಯಲ್ಲಿ ವೀಣೆ 'ಹಿಡಿದು ನುಡಿಸುತ್ತಿರುತ್ತಾಳೆ. ಆಕೆಯ, ವಾದ್ಯವೈಖರಿಗೆ ಸೋತು ಜಿಂಕೆಗಳು ಬಂದು ಸುತ್ತುಗಟ್ಟಿ ನಿಂತು ತಲ್ಲೀನವಾಗಿವೆ. ಸಹರಿ ಚಿತ್ರಗಾರರು ನೀಲ, ಸುವರ್ಣ ಬಣ್ಣಗಳನ್ನು ಧಾರಾಳವಾಗಿ ಬಳಸುತ್ತಾರೆ. ಪಹರಿ ಚಿತ್ರದಲ್ಲಿ ಹಿನ್ನೆಲೆಯ ಮರಗಳಿಗೆ ಬಹಳ ಪ್ರಾಧಾನ್ಯ ದೊರೆಯುತ್ತದೆ. ನಾಯಕಿಯ ಮುಖಭಾಗದಲ್ಲಿ ಲಾಲಿತ್ಯಕ್ಕಿಂತ ಗಾಂಭೀರ್ಯ ಹೆಚ್ಚು. ಮಿಣಜಿಯವರು ಪಹರಿ ಚಿತ್ರಗಾರರಿಗಿಂತ ಹೆಚ್ಚು ನಯವಾಗಿ ತಮ್ಮ ತೋಡಿಯನ್ನು ಚಿತ್ರಿಸಿ ದ್ದಾರೆ. ಹಿನ್ನೆಲೆ-ಹಿನ್ನೆಲೆಯಾಗಿಯೇ ಇದೆ. ದೂರದಲ್ಲಿ ಕೆಲವು ಮರಗಳ ಅಸ್ಪಷ್ಟ ವಿನ್ಯಾಸ, ನಮ್ಮ ಗಮನವೆಲ್ಲಾ ಚಿತ್ರಗಾರ ನಾಯಕಿಯ ಆಕೃತಿಯ ಮೇಲೆ ಸೆಳೆದಿದ್ದಾನೆ. ರಜಪೂತ ಪದ್ದತಿಯಲ್ಲಿ ನಾಯಕಿ ಉಡುಗೆತೊಡಿಗೆ ಧರಿಸಿದ್ದಾಳೆ. ಕೈಯಲ್ಲಿ ದೋತಾರವಾದ್ಯ. ಒಂದು ಜಿಂಕೆಗೆ ಪ್ರೀತಿಯಿಂದ ಗರಿಕೆಯನ್ನು ನೀಡುತ್ತಿದ್ದಾಳೆ. ಅವಳ ಎಡಭಾಗದಲ್ಲಿ ನಿಂತಿರುವ ಜಿಂಕೆ ಮಧುರಸ್ನೇಹದಿಂದ ನೋಡುತ್ತಿದೆ. ನಾಯಕಿ ಧರಿಸಿರುವ ತೆಳು ವಸ್ತ್ರ ಗಳನ್ನು ತೂರಿ ಅವಳ ಅಂಗಾಂಗಳ ಚೆಲುವು ಚಿಮ್ಮುತ್ತಿದೆ. ಕೈ, ಕಾಲು, ಕಣ್ಣು, ತೊಡೆ, ನಾಯಕಿಯ ರೂಪ ಅವರ್ಣನೀಯ ಸೌಂದರ್ಯದಿಂದ ಕೂಡಿದೆ. ಅವಳ ಮುಖದಲ್ಲಿ ಗಾಂಭೀರ್ಯದಿಂದ ಪುಟಗೊಂಡ ಲಲಿತಹಾಸ. ನಾಯಕಿ ಹೂವಿನ ಹಾಸಿನ ಮೇಲೆ ನಿಂತಿದ್ದಾಳೆ. ಚಿತ್ರಶಿಲ್ಪಕ್ಕೆ ಮೇಳ 3" Todi and Bhairavi represent majesty and impress one like the march of a stately king, decked in all his regal glory and spreading the pomp and circumstance of his lofty position, a grand and sublime spectacle." -Lakshmana Pillay, 1. M.J.-P. 71-72. (Quoted by H. A. Poplcy in " The Music of India.")