ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ' ಹಂಸಗತಿ ' ನಾಟ್ಯಮುದ್ರೆಯನ್ನು ತೋರಿಸುವ ಮಿಣಜಿಗಿಯವರ ಕೃತಿ. ಹಿನ್ನೆಲೆಯಲ್ಲಿ ಶೇಷಶಾಯಿ. ಮುಂದೆ ನರ್ತಕಿ ಸರ್ಪಶೀರ್ಷ ಮುದ್ರೆ ಹಿಡಿದು ನಿಂಡಿದ್ದಾಳೆ. ನಾಟ್ಯ ಸಾಗಿದೆ. ಅದರ ಗತಿಯಲ್ಲಿ ಸರ್ಪಶೀರ್ಷ ಒಂದು ಅವಸ್ಥೆ, ನಾಟ್ಯನಡೆಗನುಗುಣವಾಗಿ ರೂಪಗೊಂಡಿರುವ ಲಂಗದ ವಿನ್ಯಾಸ, ನರ್ತಕಿಯ ಜಡೆಯ ಓಟ, ಕಾಲುಗಳ ಲಯ ಲಕ್ಷ ಅಭೂತ ಪೂರ್ವವಾಗಿವೆ. ಕರ್ನಾಟಕದ ವೈಶಿಷ್ಟಕ್ಕನುಗುಣವಾದ ಚಿತ್ರಕಲಾ ಸಂಪ್ರದಾಯ ವನ್ನು ಬೆಳಸಲು ಮಿಣಜಿಗಿಯವರು ಮಾಡಿರುವ ಸೇವೆ ದೊಡ್ಡದು. ಚಲನ ಚಿತ್ರರಂಗದಲ್ಲಿ ಉತ್ತಮ ಕಲೆಯನ್ನು ತಂದು ಜನಸಾಮಾನ್ಯದ ಅಭಿರುಚಿ ಸುಧಾರಿಸಬೇಕೆಂಬುದು ಅವರ ಉತ್ಕಟೇಚ್ಛೆ, ತಮ್ಮ ಕೃತಿಗಳಿಗೆ ಜಗತ್ರ ಸಿದ್ಧಿ ಯನ್ನು ದೊರಕಿಸಿರುವ ಮಿಣಜಿಗಿಯವರು ಉಗ್ರ ಕನ್ನಡಾಭಿಮಾನಿಗಳಾಗಿ ದ್ದಾರೆ. ತಮ್ಮ ಬಾಳನ್ನು ಕನ್ನಡ ನಾಡಿನ ಪುರೋಭಿವೃದ್ಧಿ, ಲಲಿತ ಕಲೆಗಳ ಉತ್ಕರ್ಷಕ್ಕೆ ನಿವೇದಿಸಿ ಸಾರ್ಥಕ ಪಡಿಸಿದ್ದಾರೆ. - - -