ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಿಟ್ಟೆ ಕೃಷ್ಣಯ್ಯಂಗಾರ್ಯ ರಮನೆಯ ಅಧಿಕಾರಸ್ಥಾನದಲ್ಲಿದ್ದ ಹಿರಿಯ ಸಂಗೀತ ವಿದ್ವಾಂಸರೊಬ್ಬರು ಆ ಗತಿಸಿದ್ದ ಒಬ್ಬ ಕಲಾವಿಭೂತಿಯ ಬಗ್ಗೆ ಒಮ್ಮೆ ಲಘುವಾಗಿ ಮಾತ ನಾಡಿದರು. ಅದನ್ನು ಕೇಳಿದ ತರುಣ ಕಲಾವಿದರೊಬ್ಬರು ಕೂಡಲೆ ಪ್ರತಿಭಟಿಸಿ ರಾಜೀನಾಮೆ ಕಳುಹಿಸಿದರು. ಪ್ರಭುಗಳ ಕಿವಿಯವರೆಗೆ ಸುದ್ದಿ ಹೋಯಿತು. ತರುಣ ಕಲಾವಿದರಿಗೆ ನಿರೂಪ “ಬಂತು. ಸ್ವಸ್ಥಾನದಲ್ಲಿ ಪುನರ್ ಪ್ರತಿಷ್ಠೆಯೂ ಆಯಿತು. ಅದೇ ವರ್ಷ ತರುಣ ಕಲಾವಿದರಿಗೆ ಗಾನವಿಶಾರದ' ಪ್ರಶಸ್ತಿಯೂ ದೊರೆಯಿತು. ಇಂಥ ಸ್ವಾತಂತ್ರ್ಯ ವೃತ್ತಿ ತಿಟ್ಟೆ ಕೃಷ್ಣಯ್ಯಂಗಾರ್ಯರದು. ಪರನು ಸಾತ್ವಿಕ ವ್ಯಕ್ತಿ. ಆದರೆ ಗುರುಹಿರಿಯರ ನಿಂದೆ ಕೇಳಿ ಸಹಿಸದಂಥ ನಿರ್ಮಲ ರಾಜಸ. - ನಾನು ಮೊದಲು ಬಾರಿಗೆ ತಿಟ್ಟೆ ಯವರ ಸಂಗೀತ ಕೇಳಿದ್ದು ೮-೧೦ 'ವರ್ಷಗಳ ಹಿಂದೆ. ಮೈಸೂರಿನಲ್ಲಿ ವೈಣಿಕಶಿಖಾಮಣಿ ಸುಬ್ಬಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ' ಮೈಸೂರು ಸಂಗೀತ ಸಮ್ಮೇಳನ ' ದಲ್ಲಿ ತಿಟ್ಟೆ ಯವರ ಗಮಕನೆ ಖರಿ, ರಾಗಾಲಾಪನ ಚತುರತೆ, ಗಂಡು ಶಾರೀರ ನನ್ನ ಮನಸ್ಸಿನ ಮೇಲೆ ಪರಿಣಾಮವನ್ನುಂಟುಮಾಡಿದವು. ಶ್ರೇಷ್ಠ ದರ್ಜೆಗೆ ಸೇರುವ ಗಾಯಕರು ಇವರಾಗುತ್ತಾರೆ ಎಂಬ ಧೈರ್ಯ ಮನಸ್ಸಿಗಾಯಿತು. * ತಿಟ್ಟೆ ಯವರ ಸಂಗೀತ ಪರಂಪರೆ ಅನ್ಯಾದೃಶವಾದುದು. ಇವರ ತಾತ ತಿಟ್ಟೆ ರಂಗಾಚಾರರು ಮುಮ್ಮಡಿ ಕೃಷ್ಣರಾಜ ಒಡೆಯರವರ ಕಾಲದಲ್ಲಿ