ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦ ಕರ್ನಾಟಕದ ಕಲಾವಿದರು ತಿನಲ್ಲಿ ನಡೆದ ಇವರ ಕಛೇರಿಯನ್ನು ವಿಮರ್ಶಿಸುತ್ತ ಶ್ರೀ ಬಿ. ವಿ. ಅವರು ಕನ್ನಡ ನುಡಿಯಲ್ಲಿ (೧೦-೧೨-೪೬) ಹೀಗೆ ಬರೆದಿದ್ದಾರೆ. “ ದೇವರ ನಾಮಗಳ ವಿಚಾರದಲ್ಲಿ ಒಂದೆರಡು ಮಾತುಗಳನ್ನು ಇಲ್ಲಿ ಹೇಳುವುದು ಸೂಕ್ತವೆಂದು ಕಾಣುತ್ತದೆ. ಅವರ ನಾಮಗಳು ಹರಿದಾಸರ ಅತ್ಯಂತ ಪ್ರೌಢವಾದ ಲೋಕಾನುಭವವನ್ನು ಜನಸಾಮಾನ್ಯವು ಸುಲಭವಾಗಿ ತಿಳಿಯುವ ರೀತಿಯಲ್ಲಿ ಒಳಗೊಂಡು ಜನಗಳು ನಿತ್ಯವೂ ಅನುಭವಿಸುವ ತೊಂದರೆಗಳನ್ನು ಎದುರಿಸಲು ಬೇಕಾದ ಧೈರ್ಯ, ಸೈರ್ಯಗಳನ್ನು ಅವರಲ್ಲಿ ತುಂಬಿ ಅವರ ಜೀವನವನ್ನು ಸುಗಮವಾಗಿ ನಡೆಸಲು ಬೇಕಾದ ಉಪದೇಶವನ್ನು ತಿಳಿಸುವ ಸಾಹಿತ್ಯ ಕೃತಿಗಳು. ಇವುಗಳಲ್ಲಿ ಸಂಗೀತವು ಇಲ್ಲದಿಲ್ಲ. ಆದರೆ ಅವನ್ನು ಹಾಡುವಾಗ ಗಾಯಕನು ತನ್ನ ಪಾಂಡಿತ್ಯಾನು ಸಾರವಾಗಿ ಎಷ್ಟೇ ಪ್ರೌಢವಾದ ಮತ್ತು ರಸಯುತವಾದ ಸಂಗೀತವನ್ನು ಅವು ಗಳಲ್ಲಿ ತುಂಬಿದರೂ, ಸಾಹಿತ್ಯಕ್ಕೆ ಮತ್ತು ಅವುಗಳಲ್ಲಿರುವ ಉಪದೇಶಕ್ಕೆ ಪ್ರಾಧಾನ್ಯವೇ ಹೊರತು ಸಂಗೀತಕ್ಕಲ್ಲ. ತಾಳವಿನ್ಯಾಸದ ಪಾಂಡಿತ್ಯವನ್ನು ತೋರಿಸಲು ಸಾಹಿತ್ಯವನ್ನು ಹಿಂದಕ್ಕೆ ನೂಕಬಾರದು.” ತ್ಯಾಗರಾಜನ ಕೀರ್ತನೆಗಳನ್ನೇ ಆಗಲಿ ಹರಿದಾಸರ ದೇವರ ನಾನು ಗಳನ್ನೇ ಆಗಲಿ ಹಾಡುವಾಗ ಸಾಹಿತ್ಯವನ್ನು ದುರ್ಲಕ್ಷಿಸಿದರೆ ಅವು ಅಶ್ರಾವ್ಯ ವಾಗುತ್ತವೆಂಬುದು ನಿರ್ವಿವಾದ. ಆದರೆ ತಾಳವಿನ್ಯಾಸಕ್ಕೆ ದೇವರ ನಾಮ ಗಳು ಅಳವಡುವಾಗ ( ಅಳವಡುವಂಥ ದೇವರ ನಾಮಗಳು ಕೆಲವಿವೆ) ಅವು ಗಳನ್ನು ವಿದ್ವಾಂಸರು ಏತಕ್ಕೆ ಬಳಸಿಕೊಳ್ಳಬಾರದು ? ರಾಗಭಾವವನ್ನು ಆಲಾಪನೆಯ ಮೂಲಕ ಅಜ್ಯೋತಿ, ಸಾಹಿತ್ಯ ಭಾವವನ್ನು ಪಲ್ಲವಿ, ಅನು ಪಲ್ಲವಿ, ಚರಣಗಳ ಮೂಲಕ ಮಾಡಿಕೊಟ್ಟು ಹಾಡುಗಾರ ಒಂದು ನಿಲುಗಡೆ ಯನ್ನೆತ್ತಿಕೊಂಡು ಲಯವಿನ್ಯಾಸ ಮಾಡುತ್ತಾನೆ. ಇದರಿಂದ ರಾಗ ಹಾಗೂ ಸಾಹಿತ್ಯ ಭಾವಗಳಿಗೆ ಯಾವ ತೊಂದರೆಯೂ ಒದಗುವುದಿಲ್ಲ. ಕನ್ನಡ ಕೀರ್ತನೆಗಳಲ್ಲಿರುವ ಸುಪ್ತಚೈತನ್ಯವನ್ನು ಕಲಾವಿದ ಪ್ರಚೋದನಗೊಳಿಸಿ ದಂತಾಗುತ್ತದೆ. ಬಿ. ವಿ. ಯವರು ದೇವರ ನಾಮಗಳಿಂದ ನಿತ್ಯ ಜೀವನಕ್ಕೆ ಬೇಕಾದ ಧೈರ್ಯಸ್ಥೆರ್ಯವೊದಗುತ್ತದೆಂದು ಅಭಿಪ್ರಾಯಪಡುತ್ತಾರೆ. ಇಹಲೋ ಕದ ಅಶಾಶ್ವತೆ, ಅಸ್ಥಿರತೆ, ಮಾಯಾವಿಲೀನತೆಗಳನ್ನೇ ಸಾರುವ ದೇವರ