ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ದ್ದಾರೆ. ಒಂದು ಕೀರ್ತನೆ ಒಂದೇ ರಾಗದ ಅಚ್ಚಿನಲ್ಲಿ ಕೂಡಬೇಕೆಂದ ಅವರ ಆಶಯ. ದಾಸರ ದೇವರ ನಾಮಗಳ ಬಗ್ಗೆ ಹೇಳಬೇಕೆಂದರೆ ಇನ ಅಧಿಕೃತವಾಗಿ ದಾಸರು ಅವುಗಳನ್ನು ಯಾವ ಯಾವ ರಾಗಗಳಲ್ಲಿ ಹಾಡ. ತಿದ್ದರೆಂದು ತಿಳಿದುಬಂದಿಲ್ಲ. ದೇವರ ನಾಮಗಳ ಹಾಡುಗಾರಿಕೆಗೆ ಒಂದು ಕಲಾಕಟ್ಟಡವನ್ನು ಕಟ್ಟಿಕೊಟ್ಟವರು ಕೀರ್ತಿಶೇಷ ಬಿಡಾರಂ ಕೃಷ್ಣಪ್ಪನವರು. ಅವರ ಶಿಷ್ಯ ಪರಂಪರೆ ಅವರ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ. ಒಂದೇ ಭಾವ, ರಸವನ್ನು ಉದ್ರೇಕಿಸುವ ಹಲವು ರಾಗಗಳು ರಾಗಮಾಲೆಯಲ್ಲಿ ದೊರೆಯುವಾಗ ಕಲಾವಿದರು ಅವುಗಳನ್ನೇತಕ್ಕೆ ಬಳಸಿಕೊಳ್ಳಬಾರದು. ಒಂದು ಕೀರ್ತನೆ ಹಲವು ರಾಗಗಳಿಗಳವಡುವುದರಿಂದ ಅದರ ವಿವಿಧ ಕಳೆ ಗಳು ಪ್ರಕಾಶಕ್ಕೆ ಬರಲು ಮಾರ್ಗವಾಗುತ್ತದೆ; ಹಾಡುವವರಿಗೆ ಸ್ವಲ್ಪ ಸ್ವಾಂತ್ರವೂ ಸಿಕ್ಕುತ್ತದೆ. ಕ್ರಿಯಾಶಾಲಿಗಳಾದ ತಿಟ್ಟಿಯವರು ಇಂಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಪ್ರತಿಭಾಶಾಲಿಗಳಾದ ತಿಟ್ಟೆ ಕೃಷ್ಣಯ್ಯಂಗಾರ್ಯರು ಕನ್ನಡ ಕೀರ್ತನೆ ಗಳ ಕಛೇರಿಗಳ ಕಡೆಗೆ ಹೆಚ್ಚು ಲಕ್ಷ ಕೊಡಬೇಕು. ನಿಪುಣ ಸಾಹಿತಿಗಳ ನೆರವಿನಿಂದ ಹೊಸ ಕೀರ್ತನೆಗಳನ್ನು ಬರೆಯಿಸಿ ಹಾಡಲಾರಂಭಿಸಬೇಕು. ಕನ್ನಡ ಸಂಗೀತಕ್ಕೆ ಬಂದಿರುವ ಪರಭಾಷಾವಲಂಬನ ದಾಸ್ಯವನ್ನು ತೊಡೆದು ಹಾಕಲೆತ್ನಿಸಬೇಕು. ತಿಟ್ಟೆಯವರಲ್ಲಿ ಇಂಥ ಮಾರ್ಗದರ್ಶಿತ್ವಕ್ಕೆ ಬೇಕಾದ ಲಕ್ಷಣಗಳಿವೆ. ಸಾಹಿತ್ಯ, ಸಂಗೀತ ಪಾಂಡಿತ್ಯ, ಪ್ರಗತಿಕ ಮನೋಭಾವ, ಅಮೋಘವಾದ ಶಾರೀರ, ವಿದ್ಯಾರ್ಜನೆಯ ಹಂಬಲ ಅವರ ಹಿರಿಯ ಗುಣಗಳಾಗಿವೆ. ರಾಗ ನಿರೂಪಣೆಯಲ್ಲಿ ವಿಶಿಷ್ಟ ಪ್ರೌಢಿಮೆಯಿದೆ. ದುರ್ಗಮ ಪಥಗಳಲ್ಲಿ ತಿಟ್ಟೆ ಯವರ ಸಿಂಹನಾದ ತಾನೇತಾನಾಗಿ ವಿಹರಿಸುತ್ತದೆ. ಲಯವಿನ್ಯಾಸದಲ್ಲಿ ವೈಜ್ಞಾನಿಕ ವಿಚಕ್ಷಣೆಯಿದೆ. ಇಂಥ ಶ್ರೇಷ್ಠ ಕಲಾವಿದರು ಹೆಚ್ಚು ಹೆಚ್ಚಾಗಿ ಕನ್ನಡದ ಸೇವೆ ಮಾಡಿ ನಮ್ಮ ನಾಡಿನ ಕಲಾಕೀರ್ತಿಯನ್ನು ಬೆಳಗಿಸಬೇಕು.