ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಅದರಲ್ಲಿರಲಿಲ್ಲ. ಜತೆಗೆ ಉದಯಶಂಕರ, ರಾಮಗೋಪಾಲರ ಹಾಗೆ ಸ್ವಾಮಿ ನೋಡಲಿಕ್ಕೆ ಸುಂದರ ವ್ಯಕ್ತಿಯೂ ಅಲ್ಲ. ಸ್ವಾಮಿಯವರದು ತನಿ ಕಛೇರಿ, ಹಿಮ್ಮೇಳಕ್ಕೆ ಎಂಭತ್ತೆಂಟು ವರ್ಷದ ವಯೋವೃದ್ರೆ ಒಬ್ಬಾಕೆಯ ಗಾಯನ ಪ್ರೇಕ್ಷಕರು ಬಹುಮಂದಿ ವಿದ್ಯಾರ್ಥಿಗಳು, ಕೆಲವರು ಊರಿನ ದೊಡ್ಡ ಮನುಷ್ಯರು, ಕಾಲೇಜಿನ ಪ್ರೊಫೆಸರುಗಳು. ಪ್ರೇಕ್ಷಕರು ತಲ್ಲೀನರಾದರು. ವಿದ್ಯಾರ್ಥಿಗಳು ಕೂಡ ಕಲ್ಲುಗೊಂಬೆಗಳ ಹಾಗೆ ಕುಳಿತರು. ಯಾವ ಸೌಕ ರ್ಯವೂ ಇಲ್ಲದೆ ಸ್ವಾಮಿಯವರು ಈ ಕಲಾವಿದಗ್ಧತೆಯನ್ನು ಸಾಧಿಸಿದುದು ಅಚ್ಚರಿಯೇ ಹೌದು. ಸಾಧನೆಯಲ್ಲಿ ಸ್ವಾಮಿಯವರ ಮೈ ಎಷ್ಟು ಮುದ್ದಾಗಿದೆ ಎಂಬುದನ್ನು ಬಲ್ಲವರಿಗೆ ಇದ: ಅಚ್ಚರಿಯನ್ನುಂಟುಮಾಡಲಿಲ್ಲ. ಅವರ ಪ್ರದರ್ಶನ ಸಾಧನೆಯ ಒ೦ಮ ಮಹಾ ಕಾವ್ಯವನ್ನು ಸುರಿತು. ಸ್ವಾಮಿಯವರು ನರ್ತಕರಾಗಿ ತಮ್ಮ ಬಾಳನ್ನು ಆರಂಭಿಸಲಿಲ್ಲ. ಎಸ್. ಎಸ್. ಎಲ್. ಸಿ. ತರಗತಿಯ ತನಕ ಓದು ಸಾಗಿಸಿ ೧೯೨೯ರಲ್ಲಿ ಮದರಾಸಿನ ಕಲಾ ಶಿಕ್ಷಣಾಲಯದಲ್ಲಿ ಚಿತ್ರ ಹಾಗೂ ಮೂರ್ತಿ ಶಿಲ್ಪಗಳನ್ನು ಕಲಿಯುವುದಕ್ಕೆ ಹೋದರು. ಮಾರನೆಯ ವರ್ಷವೇ ಆಳಿದ ಮಹಾಸ್ವಾಮಿ ಯವರಾದ ನಾಲ್ಮಡಿ ಕೃಷ್ಣರಾಜ ಒಡೆಯರವರು ಸ್ವಾಮಿಯವರ ಕಲಾಭಿ ಮಾನವನ್ನು ಕಂಡು ಅವರನ್ನು ಮುಂಬಯಿಗೆ ಜೆ. ಜೆ. ಚಿತ್ರಕಲಾಶಾಲೆಗೆ ಕಳುಹಿಸಿಕೊಟ್ಟರು. ನಾಲ್ಕು ವರ್ಷ ಮುಂಬಯಿಯಲ್ಲಿ ಸ್ವಾಮಿ ದುರಂಧರ, ಚೂಡೇಕರ್ ಅವರಲ್ಲಿ ಚಿತ್ರಕಲೆಯನ್ನು ಅಭ್ಯಸಿಸಿ ಮೈಸೂರಿಗೆ ಹಿಂದಿರು ಗಿದರು. ಅರಮನೆಯಲ್ಲಿ ಕೆಲಸ ದೊರೆಯಿತು. ಭಾವಚಿತ್ರ, ನಸ್ಯ ಚಿತ್ರ ಗಳನ್ನು ಅರಮನೆಯ ಉಪಯೋಗಕ್ಕೆ ಮಾಡಿಕೊಡತೊಡಗಿದರು. ಮಹಾ ಸ್ವಾಮಿಯವರು ಸದಾ ಸರ್ವದಾ. ಸ್ವಾಮಿಯವರಲ್ಲಿ ಅಭಿಮಾನವಿಟ್ಟು ಅವರ ಉತ್ಕರ್ಷಕ್ಕೆ ನೆರವಾಗುತ್ತಿದ್ದರು. ಒಮ್ಮೆ ಸ್ವಾಮಿ ಗೆಳೆಯರೊಂದಿಗೆ ಬೀದಿ ಯಲ್ಲಿ ಹರಟುತ್ತ ನಿಂತಿದ್ದುದನ್ನು ಮಹಾಸ್ವಾಮಿಯವರು ಕಂಡು, ಅವರನ್ನು ಕರೆಸಿ ಹೊತ್ತುಗಳೆಯಬೇಡವೆಂದು ಬುದ್ದಿ ಹೇಳಿ ಕೈತುಂಬ ಕೆಲಸವೊಪ್ಪಿಸಿ ಕಳುಹಿಸಿದರು. ೧೯೩೪ರಲ್ಲಿ ಸ್ವಾಮಿಯವರ ಚಿತ್ರಕಲಾಪ್ರತಿಭೆ ದಿವಂಗತ ಗಾನಕೇಸರಿ ಬಿಡಾರಂ ಕೃಷ್ಣಪ್ಪನವರ ಕೃಪೆಯಿಂದ ಹೊರಗಾಣಲು ಅವಕಾಶವಾಯಿತು.