ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

L , ಎಸ್. ಎನ್. ಸ್ವಾಮಿ ಕೃಷ್ಣಪ್ಪನವರು ತಮ್ಮ ರಾಮಮಂದಿರದಲ್ಲಿಡಲು ಎಲ್ಲ ಪ್ರಸಿದ್ದ ಸಂಗೀತ ವಿದ್ವಾಂಸರ ಭಾವಚಿತ್ರಗಳನ್ನು ಸ್ವಾಮಿಯವರಿಂದ ಮಾಡಿಸಿದರು. ಗತಿಸಿದ ವಿದ್ವಾಂಸರ ಹಳೆಯ ಫೋಟೋ, ರೇಖಾಚಿತ್ರಗಳ ಆಧಾರದ ಮೇಲೆ ಸ್ವಾಮಿ ಯವರು ಇಂತಹ ಕಠಿಣ ಕೆಲಸವನ್ನು ಬಹಳ ತೃಪ್ತಿಕರವಾಗಿ ನಿರ್ವಹಿಸಿದರು. ಅದೇ ವರ್ಷವೇ ಸ್ವಾಮಿಯವರ ಕಲಾಚೇತನ ಬೇರೊಂದು ರೂಪದಲ್ಲಿ ಅ೦ಕುರಿಸಿತು. ಕವೀಂದ್ರ ರವೀಂದ್ರರ ಒಂದು ಫೋಟೋ ಆಧಾರದಿಂದ ಅವರ ಭಾವಚಿತ್ರವನ್ನು ರೇಖೆಗಳಲ್ಲಿಯೇ ಬಿಡಿಸಿ ಕವಿಗುರುವಿನ ಬಳಿ ಕಳುಹಿ ಸಿದರು. ಸ್ವಾಮಿಯವರ ಕಲಾನೈಪುಣ್ಯವನ್ನು ಕಂಡು ಸಂತೋಷಿಸಿದ ಕನಿಗುರು ಅವರನ್ನು ಪ್ರೋತ್ಸಾಹಿಸಿ, ಹೀಗೆ ಎಲ್ಲ ಹಿರಿ ವ್ಯಕ್ತಿಗಳ ಚಿತ್ರ ಗಳನ್ನು ರಚಿಸಿರೆಂದು ಸಂದೇಶವಿತ್ತರು. ಅಂದಿನಿಂದ ಸ್ವಾಮಿಯವರ ಕುಂಚ ಅವ್ಯಾಹತವಾಗಿ ಸಾಗಿದೆ. ಜಗತ್ತಿನ ಹಿರಿಯ ವ್ಯಕ್ತಿಗಳಾದ ರೊಮೆ ರೋಲಾ, ಬಾರ್ ಷಾ, ಹ್ಯಾವಲಾಕ್ ಇಲ್ಲಿಸ್, ಬಟ್ರ್ರಾಂಡ್ ರಸೆಲ್ ಇವರ ಚಿತ್ರಗಳನ್ನೂ ರಾಜಕಾರಣ ಪಟುಗಳಾದ ಹಿಟ್ಲರ್, ಮಸಲೂನಿ, ಚೇ೦ಬರ್ ಲೇನ್, ಈಡನ್, ಚರ್ಚಿಲ್ ಇವರ ಚಿತ್ರಗಳನ್ನೂ ಪ್ರಸಿದ್ದ ವಿಜ್ಞಾನಿಗಳಾದ ನಿಲ್ಲಿಕನ್, ಲಾಡ್ಜ್, ಸಲ್ಲಿವನ್, ರೂಪರ್ ಫರ್ ಇವರ ಚಿತ್ರಗಳನ್ನೂ ರಚಿಸಿ, ಅವರಿಗೆ ಕಳುಹಿಸಿಕೊಟ್ಟು, ಅವರ ಸಹಿಗಳನ್ನು ದೊರಕಿಸಿ ಒಂದಪೂರ್ವ ಚಿತ್ರ ಸಂಗ್ರಹ ಮಾಡಿದ್ದಾರೆ. ಭಾರತದ ಪ್ರಧಾನ ವ್ಯಕ್ತಿಗಳನ್ನು ಸ್ವಾಮಿಯವರು ಅನ್ಯಾದೃಶವಾಗಿ ಚಿತ್ರಿಸಿದ್ದಾರೆ. ಇವರ ಗಾಂಧೀಜಿ, ಕಸ್ತೂರಿಬಾ, ಮಹಾದೇವ ದೇಸಾಯ್ ಚಿತ್ರಗಳು ಮನೆಮನೆಯಲ್ಲಿಯೂ ರಾರಾಜಿಸಿವೆ. ೧೯೪೦ರಲ್ಲಿ ಸ್ವಾಮಿಯರು ವಾರ್ಧಾಕ್ಕೆ ಹೋಗಿ ಗಾಂಧೀಜಿಯವರ ಮುಂದೆ ಕುಳಿತು ಅವರ ಭಾವಚಿತ್ರ ನನ್ನ ತ್ರಿವರ್ಣಗಳಲ್ಲಿ ವೇಶ್ನದ ಮೇಲೆ ಚಿತ್ರಿಸಿಕೊಂಡು ಬಂದರು. ಈಚೆಗೆ ಸಿ. ರಾಜಗೋಪಾಲಾಚಾರಿಯವರ ಚಿತ್ರವನ್ನೂ ಇದೇ ಮಾದರಿಯಲ್ಲಿ ಚಿತ್ರಿಸಿ ದಾ ರೆ. ಇವರ ಈ ಚಿತ್ರಗಳೂ ಸರ್ ಎಂ. ವಿಶ್ವೇಶ್ವರಯ್ಯ, ಸರ್ ರಾಧಾ ಕೃಷ್ಣನ್, ಪಂಡಿತ ನೆಹೂ, ರೈ, ಆ, ಶ್ರೀನಿವಾಸಶಾಸ್ತ್ರಿ, ಉದಯಶಂಕರ್, ಮೈಸೂರಿನ ದಿವಂಗತ ಶ್ರೀಮದ್ಯುವರಾಜರವರು ಇವರ ಭಾವಚಿತ್ರಗಳೂ ಪ್ರೇಕ್ಷಣೀಯವಾಗಿವೆ.